Close X

ದರ್ಶನ್-ಜಗ್ಗೇಶ್‌ರ ‘ಅಗ್ರಜ’ನ ಶೂಟಿಂಗ್ ಶುರೂ….

ಕನ್ನಡ ಚಿತ್ರರಂಗದ ಪ್ರಸಿದ್ಧ ಸಂಪಾದಕ ಮತ್ತು ನಿರ್ದೇಶಕ ಗೋವರ್ಧನ್ ದೊಡ್ಡ ಬಜೆಟ್ ಚಿತ್ರ “ಅಗ್ರಜ”ನೊಂದಿಗೆ ನಿರ್ಮಾಪಕರಾಗುತ್ತಿದ್ದಾರೆ. ಅಗ್ರಜನಲ್ಲಿ ಜಗ್ಗೇಶ್ ಮತ್ತು ಕಮ್ನ ಜೇಠ್‌ಮಲಾನಿ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದರೆ. ಈ ಮೊದಲು ಕಮ್ನ ಜೇಠ್‌ಮಲಾನಿ ರವಿಚಂದ್ರನ್‌ರ ಜೊತೆ ಯುಗಾದಿ ಚಿತ್ರದಲ್ಲಿ ನಟಿಸಿದ್ದರು.

agraja-movie-startsಜಗ್ಗೇಶ್ ಪತ್ರಕರ್ತರೊಡನೆ ಮಾತನಾಡುತ್ತ, ಯುವ ನಿರ್ದೇಶಕ ಶ್ರೀನಂದನ್ ಸ್ಪೂರ್ತಿಯುತ ಮತ್ತು ಸಂದೇಶಯುಕ್ತ ಕಥೆಯನ್ನು ಮಾಡಿದ್ದಾರೆ ಎಂದರು. “ನಾನು ಅವರ ಕಥೆಯ ವಿವರಣೆಯನ್ನು ಕೇಳಿ ಕ್ಲೀನ್ ಬೌಲ್ಡ್ ಆದೆ. ಮತ್ತೆ ಚಿತ್ರದಲ್ಲಿ ಇನ್ನೊಂದು ಮುಖ್ಯ ಪಾತ್ರವೊಂದಿದೆ. ಅದಕ್ಕೆ ದೊಡ್ಡ ನಟನೊಬ್ಬ ಇರಬೇಕೆಂದು ಸೂಚಿಸಿದೆ. ಕೊನೆಗೆ ನಿರ್ಮಾಪಕರು ದರ್ಶನ್‌ನನ್ನು ಆ ಪಾತ್ರಕ್ಕೆ ಆಯ್ಕೆ ಮಾಡಿದ್ದಾರೆ. ನನಗೆ ಖುಷಿಯಾಗಿದೆ” ಎಂದರು.

ಜಗ್ಗೇಶ್ ನಿರ್ದೇಶಕರ ಬಗ್ಗೆ ಮತ್ತು ಅವರ ಸ್ಕ್ರಿಪ್ಟ್ ಬಗ್ಗೆ ದೊಡ್ಡ ದೊಡ್ಡ ಉತ್ಸಾಹದ ಮಾತುಗಳನ್ನಾಡುತ್ತಿದ್ದಾರೆ, ಆದರೆ, ಸ್ವತಃ ನಿರ್ದೇಶಕ ಶ್ರೀನಂದನ್ ಈ ಚಿತ್ರವು ಒಂದು ಪ್ರಶಸ್ತಿ ವಿಜೇತ ಚಿತ್ರದ ರೀಮೇಕ್ ಎಂದು ಬಾಂಬೊಂದನ್ನು ಸಿಡಿಸಿದರು. ಚಿತ್ರದ ಹೆಸರನ್ನು ಬಹಿರಂಗಪಡಿಸಲಿಲ್ಲ. “ಚಿತ್ರದಲ್ಲಿ ಆಕ್ಷನ್ ಹಾಗೂ ಕಾಮಿಡಿ ಮಿಶ್ರಣವಿದ್ದು ಪ್ರೇಕ್ಷಕರಿಗೆ ಎಲ್ಲೂ ಬೋರ್ ಆಗದಂತೆ ಚಿತ್ರಕಥೆ ಹಾಗೂ ನಿರೂಪಣೆ ಮಾಡಲಾಗುವುದು” ಎಂದಿದ್ದಾರೆ ನಿರ್ದೇಶಕ ಶ್ರೀನಂದನ್.

ಚಿತ್ರದ ಉಳಿದ ತಾರಾಬಳಗದಲ್ಲಿ ಪರೋಲ್ ಯಾದವ್, ಸುಮನ್ ರಂಗನಾಥ್, ಹಾರ್ದಿಕ್ ಶೆಟ್ಟಿ, ಸದಾಶಿವ ಬ್ರಹ್ಮಾವರ್, ದೊಡ್ಡಣ್ಣ, ರಂಗಾಯಣ ರಘ್ಹು, ಸುಚಿಂದ್ರ ಪ್ರಸಾದ್, ಬಿರಾದರ್, ಕುರಿ ಪ್ರತಾಪ್ ಮುಂತಾದವರೂ. ಯುವ ಸಂಗೀತ ನಿರ್ದೇಶಕ ನಂದನ್ ರಾಜ್ ಈ ಚಿತ್ರಕ್ಕೆ ಸಂಗೀತ ಒದಗಿಸುತ್ತಿದ್ದಾರೆ ಮತ್ತು ರಮೇಶ್ ಬಾಬುರ ಛಾಯಾಗ್ರಹಣ ಚಿತ್ರಕ್ಕಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech