Close X

ಉತ್ತಮ ಪ್ರತಿಕ್ರಿಯೆ ಪಡೆದ 18th ಕ್ರಾಸ್ ಚಿತ್ರ

ಶಂಕರ್ ನಿರ್ದೇಶನದ, ದೀಪಕ್ ಮತ್ತು ರಾಧಿಕಾ ಪಂಡಿತ್ ಅಭಿನಯದ 18th ಕ್ರಾಸ್ ಚಿತ್ರ ದೊಡ್ಡ ಸಕ್ಸಸ್‌ನಿಂದ ತೇಲಾಡುತ್ತಿದೆ. ಚಿತ್ರವು ಕಳೆದ ಶುಕ್ರವಾರ ಬಿಡುಗಡೆ ಹೊಂದಿದ್ದು, ಅಂತಹ ಹೊಡ್ಡಮಟ್ಟದ ಪ್ರಚಾರವನ್ನೇನು ಗಿಟ್ಟಿಸದ ಚಿತ್ರ, ಇದ್ದಕ್ಕಿದ್ದಂತೆ ಉತ್ತಮ ಪ್ರತಿಕ್ರಿಯೆ ಪಡೆಯುವಲ್ಲಿ ಯಶಸ್ವಿಯಾಗಿದೆ.

“ಚಿತ್ರದ ಉತ್ತಮ ಪ್ರತಿಕ್ರಿಯೆ ನಮಗೆ ಆಶ್ಚರ್ಯವನ್ನೆ ತಂದಿದೆ. ಬೆಂಗಳೂರಿನಂತ ನಗರದಲ್ಲೆ ಇಂತಹ ದೊಡ್ಡ ಮಟ್ಟದ ಜನಸಂದಣಿಯನ್ನು ಸೆಳೆಯಲು ನಿರೀಕ್ಷಿಸಿರಲಿಲ್ಲ. ಆದರೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಮಾಧ್ಯಮದ ವಿಮರ್ಶೆಗಳು ನಮಗೆ ಸಹಾಯಕವಾಗಿದೆ” ಎಂದರು ಶಂಕರ್

18th-cross-kannada-movieಶಶಿಕುಮಾರ್, ಚಿತ್ರದ ತಯಾರಿಕಾ ಸಮಯದಲ್ಲಿ ಅಕಾಲಿಕ ಸಾವು ಹೊಂದಿದ್ದ ಚಿತ್ರದ ನಿರ್ಮಾಪಕ ಚಿಕ್ಕಣ್ಣರ ಮಗ, ಚಿತ್ರ ಉತ್ತಮ ಪ್ರತಿಕ್ರಿಯೆ ಪಡೆದಿದ್ದು ಮತ್ತು ಈ ಕ್ಷಣವನ್ನು ನೋಡಿ ಆನಂದಿಸಲು ತನ್ನ ತಂದೆ ಜೀವಂತವಾಗಿ ಇರಬೇಕಿತ್ತು ಎಂದು ಹೇಳಿದರು.  ಬೇರೆ ಚಿತ್ರಗಳ ಪ್ರತಿಕ್ರಿಯೆಗೆ ಹೋಲಿಸಿದಲ್ಲಿ, ಈ ಚಿತ್ರದ ಪ್ರತಿಕ್ರಿಯೆ ಉತ್ತಮವಾಗಿದೆ ಎಂದರು ನಟ ದೀಪಕ್.

ಚಿತ್ರದ ನಿರ್ಮಾಪಕ ದಿವಂಗತ ಚಿಕ್ಕಣರಿಗೆ ಈ ಚಿತ್ರವನ್ನು ಅರ್ಪಿಸಿದ ರಾಧಿಕಾ ಪಂಡಿತ್ ಅವರೊಬ್ಬ ಒಳ್ಳೆಯ ಸಜ್ಜನ ಎಂದರು. “ಅವರ ಈ ಚಿತ್ರ ಯಶಸ್ವಿಯಾಗಿರುವುದು ಅವರಿಗೆ ಸಂತೋಷ ತಂದುಕೊಡುತ್ತಿತ್ತು. ಆದರೆ ಈಗ ಅವರ ಆತ್ಮ ಸಂತೋಷವನ್ನು ಹೊಂದಿದೆ”.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech