Close X

ರಣ ಮತ್ತು ಭಾಗೀರಥಿ ಈ ವಾರ ತೆರೆಗೆ

ಶಿವಾನಂದ ಮಾದಶೆಟ್ಟಿ ನಿರ್ಮಿಸಿ, ಶ್ರೀನಿವಾಸ ಮೂರ್ತಿ ನಿರ್ದೇಶಿಸಿರುವ “ರಣ” ಚಿತ್ರವೂ ಇದೆ ವಾರ ಜೂನ್ 7ಕ್ಕೆ ಬಿಡುಗಡೆಯಾಗುತ್ತಿದೆ. ಚಿತ್ರದ ಮುಖ್ಯಭೂಮಿಕೆಯಲ್ಲಿ ರೆಬೆಲ್ ಸ್ಟಾರ್ ಅಂಬರೀಶ್, ಎಸ್. ನಾರಾಯಣ್‌ರ ಮಗ ಪಂಕಜ್, ಸುಪ್ರೀತ, ಸೋನಿಯಾ ಗೌಡ, ಅರ್ಚನಾ ಮುಂತಾದವರು ಅಭಿಯಿಸಿದ್ದಾರೆ. ಚಿತ್ರಕ್ಕೆ ವಿ. ಶ್ರೀದರ್‌ರ ಸಂಗೀತ ಸಂಯೋಜನೆ ಇದೆ. ಚಿತ್ರದಲ್ಲಿ ಪಂಕಜ್‌ಗೆ ಮೂರು ನಾಯಕಿಯರು. ಮೊದಲ ಬಾರಿಗೆ ಪಂಕಜ್ ಡಿಫರೆಂಟ್ ‌ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೊಂದು ಮಾಸ್ ಪಾತ್ರ ಎಂದಿದ್ದಾರೆ ಪಂಕಜ್.

Rana-Kannada-Movie-PosterBhagirathi(2012)ಮತ್ತೊಂದು ಚಿತ್ರ ಡಾ. ಬರಗೂರು ರಾಮಚಂದ್ರಪ್ಪನವರ ಭಾಗೀರಥಿ” ಇದೆ ಜೂನ್ 8ಕ್ಕೆ ಬಿಡುಗಡೆ ಗೊಳ್ಳುತ್ತಿದೆ. ಬೆನ್‌ಕೋಶ್ರೀ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಸೋಮವಾರ ಜೂನ್ 4ರಂದು ರಣ ಮತ್ತು ಭಾಗೀರಥಿ ಚಿತ್ರದ ಕಲಾವಿದರು, ತಂತ್ರಜ್ಞರು ಮತ್ತು ನಿರ್ಮಾಪಕರು ಚಿತ್ರದ ಬಗ್ಗೆ ಮಾಹಿತಿ ನೀಡಲು ಪತ್ರಿಕಾ ಗೋಷ್ಟಿಯನ್ನು ಆಯೋಜಿಸಿದ್ದರು. ನಿರ್ಮಾಪಕ ಬೆನ್‌ಕೋಶ್ರೀ, ನಿರ್ದೇಶಕ ಡಾ. ಬರಗೂರು ರಾಮಚಂದ್ರಪ್ಪ, ನಟಿ ಭಾವನ, ತಾರ, ಸಂಗೀತ ನಿರ್ದೇಶಕ ವಿ. ಮನೋಹರ್ ಮುಂತಾದವರೂ ಭಾಗೀರಥಿ ಚಿತ್ರದ ಪತ್ರಿಕಾ ಗೋಷ್ಟಿಯಲ್ಲಿ ಪಾಲ್ಗೊಂಡಿದ್ದರು. ಹಾಗೆ ನಟ ಪಂಕಜ್, ಸೋನಿಯಾ ಗೌಡ ಮತ್ತು ನಿರ್ಮಾಪಕ ಶಿವಾನಂದ ಮಾದಶೆಟ್ಟಿ ಕೂಡ ರಣ ಚಿತ್ರದ ಪತ್ರಿಕಾ ಗೋಷ್ಟಿಯಲ್ಲಿ ಪಾಲ್ಗೊಂಡಿದ್ದರು.

ನಿರ್ಮಾಪಕ ಬೆನ್‌ಕೋಶ್ರೀ ಪತ್ರಿಕಾ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಾ ಭಾಗೀರಥಿ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವ ಇರಾದೆಯನ್ನು ತೋರಿದರು.ಭಾಗೀರಥಿ ಚಿತ್ರವೂ ಜಾನಪದ ಸೊಗಡಿರುವ ಚಿತ್ರವಾಗಿದ್ದು, ಕೀರೆಗೆ ಹಾರ ಜಾನಪದ ಹಾಡನ್ನು ಆಧಾರಿಸಿದ ಚಿತ್ರವಾಗಿದೆ.

ರಣ ಚಿತ್ರದ ಪತ್ರಿಕಾ ಗೋಷ್ಟಿಯಲ್ಲಿ ಪಂಕಜ್ ಮಾತನಾಡುತ್ತಾ, “ಈ ಚಿತ್ರದಲ್ಲಿ ಸಾಹಸ ಸನ್ನಿವೇಶಗಳಿಂದ ಬಹಳಷ್ಟು ಇದ್ದು, ಬಹಳಷ್ಟು ಪ್ರಯತ್ನಗಳಿಂದ ಚಿತ್ರೀಕರಿಸಲಾಗಿದೆ”.

ಈ ಚಿತ್ರದ ಟಿವಿ9 ವರದಿಯನ್ನು ಈ ಕೆಳಗೆ ನೋಡಿ, ಚಿತ್ರವನ್ನು ಥಿಯೇಟರಿನಲ್ಲಿ ನೋಡಲು ಮನಸ್ಸು ಮಾಡಿ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech