Close X

ಕನ್ನಡದ ಕೋಟ್ಯಾಧಿಪತಿ 50ಕಂತುಗಳನ್ನು ಮುಗಿಸಿ ನಂ. 1 ಕಾರ್ಯಕ್ರಮವಾಗಿದೆ

ಸುವರ್ಣ ಚಾನಲಿನ ಬ್ಯುಸಿನೆಸ್ ಹೆಡ್ ಮಿ. ಅನೂಪ್ ಚಂದ್ರಶೇಖರ್ “ಕನ್ನಡದ ಕೋಟ್ಯಾಧಿಪತಿ” ಕಾರ್ಯಕ್ರಮದ TRP 7ರಿಂದ 9ಕ್ಕೆ ಏರಿಕೆಯಾಗಿರುವುದರಿಂದ ಬಹಳ ಸಂತಷಗೊಂಡಿದ್ದಾರೆ. ಇದರ ಎಲ್ಲಾ ಕ್ರೆಡಿಟ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಸಲ್ಲಬೇಕೆಂದಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಟ್ರಂಪ್ ಕಾರ್ಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಎಂದಿದ್ದಾರೆ. ಕರ್ನಾಟಕದ ಎಲ್ಲಾ ಚಾನಲ್‌ಗಳಿಗೆ ಹೋಲಿಸಿದರೆ ಸುವರ್ಣಾವಾಹಿನಿಯ ಈ ಕಾರ್ಯಕ್ರಮಕ್ಕೆ 9ಕ್ಕೂ ಹೆಚ್ಚು TRP ದೊರೆತಿದೆ. ಇದರಿಂದ ಸುವರ್ಣಾ ಚಾನಲ್ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಮೂಲಕ ಒಂದನೇ ಸ್ಥಾನದಲ್ಲಿದೆ.

Kannadada_Kotyadhipathiಇದೀಗ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವು 50ನೇ ಕಂತಿಗೆ ಕಾಲಿಟ್ಟಿದೆ. ಒಂದೊಮ್ಮೆ ಯಾವುದು ಅಸಾಧ್ಯ ಎಂದೆಣಿಸಿದ್ದೆವೋ ಅದು ಇಂದು ಸಾಧ್ಯವಾಗಿದೆ ಎಂದು ಅನೂಪ್ ಚಂದ್ರಶೇಖರ್ ನುಡಿದಿದರು.

ಕಳೆದ ಮೂರು ತಿಂಗಳುಗಳಲ್ಲಿ ಕರ್ನಾಟಕದ ವಿವಿಧ ಭಾಗದ 30ಕ್ಕೂ ಹೆಚ್ಚು ಜನರು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಜಯಿಸಿದ್ದಾರೆ ಎಂದು ಕಾರ್ಯಕ್ರಮದ ಮುಖ್ಯಸ್ಥ ರಾಘವೇಂದ್ರ ಹುಣಸೂರ್ ಘೋಷಿಸಿದರು. ಬಹುಮಾನದ ಮೊತ್ತ ರೂ. ಹತ್ತು ಸಾವಿರದಿಂದ ಹಿಡಿದು ರೂ. ಇಪ್ಪತ್ತೈದು ಲಕ್ಷದವರೆಗೂ ಜಯಿಸಿದ್ದಾರೆ ಎಂದರು. ಮಕ್ಕಳಿಗೆ ಪ್ರತ್ಯೇಕವಾಗಿ ಕಾರ್ಯಕ್ರಮವನ್ನು ಆಯೋಜಿಸಲು ಶಾಲೆಗಳಿಂದ ಬೇಡಿಕೆಗಳು ಬರುತ್ತಿದು ಅದಕ್ಕಾಗಿಯೇ ಎರಡು ಕಂತುಗಳನ್ನು ನಿಯೋಜಿಸಲಾಗುವುದು ಎಂದರು.

ಕನ್ನಡದ ಕೋಟ್ಯಾಧಿಪತಿಯ 50ನೇ ಕಂತಿನಲ್ಲಿ ಕನ್ನಡದ ಕ್ರೇಜಿ ಸ್ಟಾರ್ ರವಿಚಂದ್ರನ್ ಭಾಗವಹಿಸಿದ್ದರು. ಈಗ ನನಗೆ ತಿಳಿದಿದೆ ಪುನೀತ್ ರಾಜ್‌ಕುಮಾರ್‌ರವರನ್ನು ಏಕೆ ಪವರ್ ಸ್ಟಾರ್ ಎಂದು ಕರೆಯುತ್ತಾರೆಂದು. ಅವರು ಎಲ್ಲರ ಗಮನ ಸೆಳೆಯುವ ಗರಿಷ್ಟ ಶಕ್ತಿ ಹೊಂದಿದ್ದಾರೆ ಎಂದರು ಹುಣಸೂರ್.

ಈ ಸಂದರ್ಭದಲ್ಲಿ ಪುನೀತ್ ಮಾತನಾಡುತ್ತಾ, ನನ್ನ ಜ್ಞಾನ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುತ್ತಿರುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಸುವರ್ಣಾ ಚಾನಲ್‌ಗೆ ಧನ್ಯಾವಾದ ಸೂಚಿಸಿದರು. ಇದರಿಂದ ನನ್ನ ಜ್ಞಾನ ಬೆಳೆದಿದ್ದು, ನಾನೇನಾದರೂ ಹಾಟ್ ಸೀಟ್‌ನಲ್ಲಿ ಕುಳಿತರೆ, ರೂ. 25 ಲಕ್ಷ ಗೆಲ್ಲುವ ಭರವಸೆ ಇದೆ ಎಂದರು ಪುನೀತ್ ರಾಜ್‌ಕುಮಾರ್.

ರೂ. 10ಲಕ್ಷವನ್ನು ಇಂದಿರಾಗಾಂಧಿ ಮಕ್ಕಳ ಕಲ್ಯಾಣಕ್ಕೆ ಡಾ. ಶಿವಾನಂದರಿಗೆ ಪುನೀತ್ ರಾಜ್‌ಕುಮಾರ್ ದೇಣಿಗೆಯಾಗಿ ನೀಡಿದರು. ಇದಲ್ಲದೆ ಕಾರ್ಯಕ್ರಮಕ್ಕೆ ಬರುವ ಬಡ ಸ್ಪರ್ಧಿಗಳಿಗೆ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ ಪುನೀತ್ ರಾಜ್‌ಕುಮಾರ್. ಇದೇ ಅವರ ನಿಜವಾದ ಪವರ್ ಮನಸ್ಸನ್ನು ತೋರಿಸುತ್ತದೆ. ಪುನೀತ್ ಸರ್ ನಿಮಗೆ ಹ್ಯಾಟ್ಸ್ ಆಫ್ :)

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech