Close X

“ನಾ ಕಂಡ ಅಪ್ಪಾಜಿ” ಪುಸ್ತಕ ಬಿಡುಗಡೆ !

Pages: 1 2 3

205 ಕನ್ನಡ ಚಿತ್ರಿಗಳಲ್ಲಿ ನಟಿಸಿ ನಟ ಸಾರ್ವಭೌಮ ಬಿರಿದು ಪಡೆದ ಡಾ. ರಾಜ್‌ಕುಮಾರ್ ರವರ ಜೀವನ ಆಧಾರಿತ ಪುಸ್ತಕವನ್ನು ಶನಿವಾರ ಜೂನ್ 1ರಂದು ಬಿಡುಗಡೆಗೊಳಿಸಲಾಯಿತು. 727 ಪುಟಗಳ ಈ ಪುಸ್ತಕವನ್ನು ಒಂದೇ ಸಮಯದಲ್ಲಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬಿಡುಗಡೆಗೊಳಿಸಲಾಯಿತು. ಈ ಪುಸ್ತಕವನ್ನು ಡಾ. ರಾಜ್ ಕುಮಾರ್‌ರ ಕೊನೆಯ ಪುತ್ರ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸ್ವತಃ ತಾವೇ ತಮ್ಮ ಪತ್ನಿ ಅಶ್ವಿನಿ ಪುನೀತ್ ಮತ್ತು ಪತ್ರಕರ್ತ ಪ್ರಕೃತಿ ಬನವಾಸಿ ಯವರ ಸಹಾಯದೊಂದಿಗೆ ಬರೆದಿದ್ದಾರೆ.

the-person-behind-personality-book-launch-07

ಈ ಪುಸ್ತಕವು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಮತ್ತು ಪದ್ಮಭೂಷಣ ಡಾ. ರಾಜ್‌ಕುಮಾರ್‌ರ ಕೆಲವು ವಿಶೇಷ, ಅಪ್ರಕಟಿತ ಛಾಯಾಚಿತ್ರಗಳನ್ನು ಹೊಂದಿದೆ.

ಪುಸ್ತಕವು ಶೇ. 70 ರಷ್ಟು ವಿಶೇಷ ಛಾಯಾಚಿತ್ರಗಳನ್ನು ಒಳಗೊಂಡಿದ್ದು, ಉಳಿದ ಶೇ. 30 ರಷ್ಟು ವಿಶೇಷ ಲೇಖನಗಳಿವೆ ಎಂದು ಪುನೀತ್ ರಾಜ್ ಕುಮಾರ್ ತಿಳಿಸಿದರು.

“ಈ ಪುಸ್ತಕವು ನನ್ನ ತಂದೆಯ ವೃತ್ತಿ, ವೈಯಕ್ತಿಕ ಜೀವನ, ತಮ್ಮ ಅಭಿಮಾನಿಗಳೊಂದಿಗಿನ ಸಂಬಂಧ ಮತ್ತು ಕರ್ನಾಟಕ ಮತ್ತು ಹೊರಗಿನ ಹಲವು ಉನ್ನತ ವ್ಯಕ್ತಿಗಳೊಂದಿಗಿನ ಸಂಭಂದವನ್ನು ಪ್ರದರ್ಶಿಸುತ್ತದೆ” ಎಂದು ಪುಸ್ತಕ ಬಿಡುಗಡೆಯ ಮುನ್ನ ತಿಳಿಸಿದರು.

ಪುಸ್ತಕ ಬಿಡುಗಡೆಯ ಸಮಾರಂಭವು ಯಶವಂತಪುರದ ಬಳಿಯ ಒಂದು ಹೋಟೇಲಿನಲ್ಲಿ ಜರುಗಿತು. ಸಮಾರಂಭದಲ್ಲಿ ಡಾ. ರಾಜ್‌ಕುಮಾರ್ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್, ತಂಗಿ ನಾಗಮ್ಮ ಮತ್ತು ಮಕ್ಕಳಾದ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಉಪಸ್ಥಿತರಿದ್ದ. ಕರ್ನಾಟಕ ಫಿಲ್ಮ್ ಅಕಾಡೆಮಿ chairman ತಾರಾ ಅನುರಾಧ ಕೂಡ ಉಪಸ್ಥಿತರಿದ್ದರು.

“ನನ್ನ ತಂದೆ ಶಿವಾಜಿ ಗಣೇಶನ್, MGR, NTR, ಎ ನಾಗೇಶ್ವರ ರಾವ್ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಹತ್ತಿರವಾಗಿದ್ದರು. ಈ ಪುಸ್ತಕದಲ್ಲಿ ಕೆಲವು ಛಾಯಾಚಿತ್ರಗಳು ಆ ಸಂಬಂಧದ ನಸುನೋಟವನ್ನು ಒದಗಿಸತ್ತದೆ” ಪುನೀತ್ ಹೇಳಿದರು.

ಸಮಾರಂಭದಲ್ಲಿ ಮೂರು ಮೇರು ಕಲಾವಿದರನ್ನು ಡಾ. ರಾಜ್‌ಕುಮಾರ್ ಸೌಹಾರ್ದ ಪ್ರಶಸ್ತಿಯೊಂದಿಗೆ ಗೊರವಿಸಲಾಯಿತು. ಹಿನ್ನಲೆಗಾಯಕ ಪಿ. ಬಿ. ಶ್ರೀನಿವಾಸ್, ರಂಗನಟಿ ರಂಗನಾಯಕಮ್ಮ ಮತ್ತು ಚಿತ್ರ ನಿರ್ದೇಶಕ ಚಿ. ದತ್ತುರಾಜ್ ಗೌರವಾನ್ವಿತರು.

ಈ ಪುಸ್ತಕವನ್ನು ಆನ್‌ಲೈನ್‌ನಲ್ಲಿ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ : buy Dr. Rajkumar: The Person Behind The Personality

ಸಮಾರಂಭದ ಚಿತ್ರಗಳನ್ನು ನೋಡಲು ಮುಂದಿನ ಪುಟಕ್ಕೆ ನಡೆಯಿರಿ :

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech