Close X

“ಪ್ರೇಮ್ ಅಡ್ಡ”ಗೆ ಬರಲು ನಿರಾಕರಿಸಿದ ಬಾಲಿವುಡ್ ನಟಿ ಸನ್ನಿ ಲಿಯೋನ್

ಜೋಗಿ ಖ್ಯಾತಿಯ ನಿರ್ದೇಶಕ ಪ್ರೇಮ್‌ನ ಗಿಮಿಕ್ ಮತ್ತೊಮ್ಮೆ ಬಯಲಾಗಿದೆ. “ಪ್ರೇಮ್ ಅಡ್ಡ” ಚಿತ್ರದೊಂದಿಗೆ ಬಾಲಿವುಡ್ ತಾರೆ ಸನ್ನಿ ಲಿಯೋನ್ ಐಟಂ ಹಾಡೊಂದನ್ನು ಮಾಡುಲು ಬಂದೇ ಬಿಟ್ಟರು ಅಂತ ಕನ್ನಡ ರಸಿಕರು ಹರುಷದಿಂದಿದ್ದರೆ, ಅದು ಈಗ ಬರೀ ಗಾಳಿ ಸುದ್ದಿಯಾಗಿದೆ. ಈ ಬಗ್ಗೆ ಸ್ವತಃ ಸನ್ನಿ ಲಿಯೋನ್ ಸ್ಪಷ್ಟೀಕರಣ ನೀಡಿದ್ದು, ನಾನು ಕನ್ನಡದಲ್ಲಿ ಐಟಂ ಹಾಡು ಮಾಡುತ್ತಿಲ್ಲ ಎಂದಿದ್ದಾರೆ.

ಇದು ಬರೀ ಪ್ರಚಾರ ಗಿಟ್ಟಿಸಲು ನಡೆಸಿದೆ ಗಿಮಿಕ್ ತರ ಕಾಣಿಸುತ್ತಿದೆ. ಪ್ರೇಮ್ ಚಿತ್ರಗಳೆಂದರೆ ಈ ರೀತಿಯ ಗಿಮಿಕ್‌ಗಳು ಮಾಮೂಲು. ಸನ್ನಿ ಲಿಯೋನ್ ಕನ್ನಡಕ್ಕೆ ಬರುತ್ತಾರೆ, ಅದೂ ಪ್ರೇಮ್ ನಟನೆಯ “ಪ್ರೇಮ್ ಅಡ್ಡ” ಚಿತ್ರದಲ್ಲಿ ಎಂದ ಕೂಡಲೆ ಕೆಲವರು ಹುಸಿ ಹುಸಿ ನಕ್ಕಿದ್ದರು.

sexy_Hollywood_Star_sunnyleoneಸನ್ನಿ ಲಿಯೋನ್ ಈ ಬಗ್ಗೆ ತಮ್ಮ ಟ್ವಿಟ್ಟರ್‌ನಲ್ಲಿ ಈ ರೀತಿ ಟ್ವೀಟಿಸಿದ್ದಾರೆ : “ಸದ್ಯಕ್ಕೆ ನಾನು ಯಾವುದೇ ಐಟಂ ಸಾಂಗ್‌ನಲ್ಲಿ ಅಭಿನಯಿಸುತ್ತಿಲ್ಲ” ಎಂದಿದ್ದಾರೆ. ಪ್ರೇಮ್ ಅಡ್ಡ ಚಿತ್ರದಲ್ಲಿ ಐಟಂ ಸಾಂಗ್ ಮಾಡಲಿರುವ ಸುದ್ದಿಯನ್ನೂ ತಳ್ಳಿ ಹಾಕಿದ್ದಾರೆ. “ಈ ವರ್ಷ ನಾನು ಸಹಿ ಹಾಕಿರುವುದು ಎರಡೇ ಎರಡು ಚಿತ್ರಗಳಿವೆ. ಒಂದು ‘ಜಿಸ್ಮ್ 2’ ಹಾಗೂ ‘ರಾಗಿಣಿ’…ಇವರೆಡು ಚಿತ್ರಗಳು ಬಿಟ್ಟು ಇನ್ಯಾವುದರಲ್ಲೂ ನಾನು ಅಭಿನಯಿಸುತ್ತಿಲ್ಲ” ಎಂದಿದ್ದಾರೆ. “ಯಾರ್ಯಾರೋ ಹಬ್ಬಿಸುವ ಗಾಸಿಪ್ ಸುದ್ದಿಗಳನ್ನು ನಂಬಬೇಡಿ. ಸದ್ಯಕ್ಕೆ ಯಾವ ಐಟಂ ಹಾಡಿನಲ್ಲೂ ಅಭಿನಯಿಸುವ ಪ್ಲಾನ್” ಇಲ್ಲ ಎಂದಿದ್ದಾರೆ.

ಹಾಗಾಗಿ ಪ್ರೇಮ್ ಹಾಗೂ ನಿರ್ದೇಶಕ ಮಹೇಶ್ ಬಾಬು ಇಬ್ಬರೂ ಪ್ರೇಕ್ಷಕರ ಕಿವಿಗೆ ದೊಡ್ಡ ಗುಲಾಬಿ ತೋಟವನ್ನೇ ಇಟ್ಟಿರುವುದು ಸಾಬೀತಾಗಿದೆ. ಕಿವಿಗೆ ಹೂ ಮುಡಿಸುವುದರಲ್ಲಿ ಎಕ್ಸ್‌ಪರ್ಟ್ ಆಗಿರುವ ಪ್ರೇಮ್, ಈ ಹಿಂದೆಯೂ ಹಲವಾರು ಬಾರಿ ಇದೇ ರೀತಿಯ ಪ್ರಯೋಗಗಳನ್ನು ಬಡಪಾಯಿ ಪ್ರೇಕ್ಷಕರ ಮೇಲೆ ಪ್ರಯೋಗಿಸಿದ್ದಾರೆ. ಈ ಹಿಂದೊಮ್ಮೆ ‘ಜೋಗಯ್ಯ’ ಚಿತ್ರವನ್ನು ತ್ರಿಡಿಯಲ್ಲಿ ನೋಡಿ ಆನಂದಿಸಿ ಎನ್ನುವ ಗಿಮಿಕ್ ಮಾಡಿದ್ದನ್ನು ಕನ್ನಡದ ಪ್ರೇಕ್ಷಕರು ಮರೆಯುವಂತಿಲ್ಲ. ಪ್ರೇಮ್ ಅವರು ‘ಜೋಗಯ್ಯ’ ಚಿತ್ರದ ನಾಯಕಿ ಪ್ರಿಯಾಂಕಾ ಚೋಪ್ರಾ ಎಂದು ಹೇಳಿಕೊಂಡಿದ್ದರು. ಚಿತ್ರದ ಅತಿಥಿ ಪಾತ್ರದಲ್ಲಿ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸುತ್ತಿದ್ದಾರೆ ಎಂದೂ ತಮ್ಮ ಚಿತ್ರಕ್ಕೆ ಇಲ್ಲಸಲ್ಲದ ಬಿಲ್ಡಪ್ ನೀಡಿದ್ದರು.

ಚಿತ್ರದ ನಿರ್ದೇಶಕ ಮಹೇಶ್ ಬಾಬು ಅವರು ಈ ಹಿಂದೆ ಉತ್ತಮ ಚಿತ್ರಗಳನ್ನು ಕೊಟ್ಟಂತಹವರು. ಅವರ ನಿರ್ದೇಶನದ ಆಕಾಶ್, ಅರಸು ಚಿತ್ರಗಳು ಬಾಕ್ಸಾಫೀಸಲ್ಲಿ ಸದ್ದು ಮಾಡಿವೆ. ಆದರೆ ಅವರೂ ಪ್ರೇಮ್ ಜೊತೆ ಧ್ವನಿಗೂಡಿಸಿದ್ದು ದುರದೃಷ್ಟಕರ. ಮಹೇಶ್ ಬಾಬು ಇನ್ನೂ ಒಂದು ಹೆಜ್ಜೆ ಮುಂದೆ ಹಾಕಿ ಸನ್ನಿ ಐಟಂ ಡಾನ್ಸ್‌ಗೆ ಉಡುಗೆ ತೊಡುಗೆ ಬಗ್ಗೆಯೂ ಮಹೇಶ್ ಹೇಳಿಕೊಂಡಿದ್ದರು. ಆಕೆಗೆ ಎಷ್ಟು ಹಣ ಕೊಡಲಾಗುತ್ತಿದೆ ಎಂಬ ಮಾಹಿತಿಯನ್ನೆಲ್ಲಾ ನೀಡಿ ಹಳ್ಳಕ್ಕೆ ಬೀಳಿಸಿದ್ದರು.

Sunny_Leone Twitter Updates

ನ್ಯೂಸ್ ಕೃಪೆ : ಒನ್‌ಇಂಡಿಯಾ

ಈ ಹಿಂದಿನ ಸನ್ನಿ ಲಿಯೋನ್ ಬಗೆಗಿನ ನ್ಯೂಸ್ : ಕೆನಡಾದಿಂದ ಕನ್ನಡಕ್ಕೆ ಬರಲಿದ್ದಾರೆ ಸನ್ನಿ ಲಿಯೋನ್ !!!

Sunny Leone Hollywood Sexy Star

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech