Close X

ಅಂಬರೀಷ್ ಮತ್ತು ಸುಮಲತಾರಿಂದ ಹುಟ್ಟುಹಬ್ಬ ಆಚರಣೆಯ ಚಿರಖುಣಿ ಔತಣಕೂಟದ ತುಣುಕುಗಳು

Pages: 1 2

ಒಂದು ಬದಲಾವಣೆಯಾಗಿ ಅಂಬರೀಷ್‌ ತಮ್ಮ ಪಾರ್ಟಿ ಟೈಮ್‌ನ್ನು ಸಂಜೆಯಿಂದ ಮಧ್ಯಾಹ್ನಕ್ಕೆ ಬದಲಾಯಿಸಿದ್ದಾರೆ. ಇದೇನಿದು ಅಂದುಕೊಂಡಿರಾ, ಮೊನ್ನೆ ಕನ್ನಡ ಚಿತ್ರರಂಗ ತಮ್ಮ 60ನೇ ಹುಟ್ಟುಹಬ್ಬದ ನೆನಪಿಗಾಗಿ ಅಂಬಿ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಿತು. ಅದರ ಚಿರಖುಣಿಯಾಗಿ ಅಂಬರೀಷ್ ಕನ್ನಡದ ಚಿತ್ರರಂಗದ ಪ್ರಮುಖರು, ಮಾದ್ಯಮದರು ಮತ್ತು ತಮ್ಮ ಆಪ್ತ ಸ್ನೇಹಿತರುಗಳಿಗೆ ಔತಣಕೂಟವನ್ನು ಏರ್ಪಡಿಸಿದ್ದರು. ಔತಣಕೂಟವೂ ಭಾನುವಾರ ಮದ್ಯಾಹ್ನ ಗಾಯತ್ರಿ ಪ್ಯಾಲೇಸ್ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು.

ಸಸ್ಯಹಾರಿಗಳಿಗೆ ಮತ್ತು ಮಾಂಸಹಾರಿಗಳಿಗೆ ಪ್ರತ್ಯೇಕವಾಗಿ ಬೇರೆ ಬೇರೆ ಪ್ರಕಾರಗಳಲ್ಲಿ ಅಡುಗೆ ಸಿದ್ದಗೊಳಿಸಲಾಗಿತ್ತು. ಸರಿ ಸುಮಾರು 3000 ಜನರನ್ನು ಕನ್ನಡ ಸಿನಿಮಾ ಜಗತ್ತಿಗೆ ಸಂಬಂಧಿಸಿದಂತೆ ನಿರೀಕ್ಷಿಸಲಾಗಿತ್ತು. ಸುಮಾರು ಮೂರರ ತಾಸಿಗೆ ಅದಕ್ಕೆ ಅರ್ಧದಷ್ಟು ಜನ ಜಮಾಯಿಸಿದ್ದರು.

ambareesh-is-host-on-sunday-for-kfiಕನ್ನಡ ಸಿನಿಮಾ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಅಶೋಕ್ ಅಂಬರೀಷ್ ಮತ್ತು ಸುಮಲತಾರನ್ನು ಮೈಸೂರು ಪೇಟ ಮತ್ತು ಹಾರಗಳಿಂದ ಸನ್ಮಾನಿಸಲಾಯಿತು.

ಅಂಬಿ ಸಂಭ್ರಮದ ’ಚಿರಖುಣಿ’ ಕಾರ್ಯಕ್ರಮದಲ್ಲಿ ಡಾ. ಜಯಂತಿ, ದ್ವಾರಕೀಶ್, ವಿ. ರವಿಚಂದ್ರನ್, ತಾರಾ ಅನುರಾಧ, ಸುದೀಪ್, ದರ್ಶನ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಮೀನ, ಡಾ. ಜಯಮಾಲಾ, ದೊಡ್ಡಣ್ಣ, ಅಶ್ವಥ್ ನಾರಾಯಣ, ಹೇಮಾ ಚೌಧರಿ, ಹಂಸಲೇಖ, ಅಂಬರೀಷ್‌ರ ಹಳೆಯ ಸ್ನೇಹಿತನಾದ ಅಶೋಕ್, ದರ್ಮ್ ಕೀರ್ತಿರಾಜ್, ಯಶ್, ಶ್ರೀನಗರ ಕಿಟ್ಟಿ, ಪ್ರೇಮ್, ಸುಧಾರಾಣಿ, ವಿಜಯಲಕ್ಷ್ಮೀ ಸಿಂಗ್, ಶ್ರೀಧರ್, ಸುದರ್ಶನ್ ಮತ್ತು ಶೈಲಶ್ರೀ, ಅಶೋಕ್, ಪ್ರಿಯಾ ಹಾಸನ್, ಸಂಜನಾ, ಶೃತಿ, ಎಸ್. ವಿ. ರಾಜೇಂದ್ರ ಸಿಂಗ್ ಬಾಬು, ಎಸ್. ನಾರಾಯಣ್, ಎಂ. ಎಸ್. ರಮೇಶ್, ಯೋಗೀಶ್ ಹುಣಸೂರು, ರಾಕಲೈನ್ ವೆಂಕಟೇಶ್, ಮುಂತಾದವರೂ ಪಾಲ್ಗೊಂಡಿದ್ದರು.

Some of the stills from the Ambareesh Get Together Party @ Gayathri Palace, Bangalore on Sunday Jun 10th 2012 :

ambareesh-party-stills-11

ambareesh-party-stills-10

ambareesh-party-stills-08

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech