Close X

ಹ್ಯಾಟ್ರಿಕ್ ಹೀರೋ ಶಿವಣ್ಣರ “ಆನಂದ್” ಚಿತ್ರ ಬಿಡುಗಡೆಯಂದೆ “ಶಿವ” ಚಿತ್ರದ ಬಿಡುಗಡೆ – ಜೂನ್ 16ಕ್ಕೆ

Pages: 1 2

ಒಂದೊಮ್ಮೆ ಎಲ್ಲರೂ 1986ರ ಜೂನ್ 16ಕ್ಕೆ ವಾಪಸ್ ಆಗೋಣ ! ಅಂದು ನಮ್ಮೆಲ್ಲರ ನೆಚ್ಚಿನ ನಟ ಶಿವರಾಜ್ ಕುಮಾರ್ ಮೊಟ್ಟ ಮೊದಲ ಬಾರಿಗೆ ನಟಿಸಿದ “ಆನಂದ್” ಚಿತ್ರದ ಬಿಡುಗಡೆ. ಮತ್ತೊಂದು ವಿಶೇಷವೆಂದರೆ ಅವರಿಗೆ ನಾಯಕಿಯಾಗಿ ಸುಧಾರಾಣಿಯವರ ಮೊಟ್ಟಮೊದಲ ಚಿತ್ರ ಇದಾಗಿತ್ತು. ಇವರೀರ್ವರ ಆನಂದ್ ಅದ್ಭುತ ಜಯಭೇರಿಯನ್ನೇ ಭಾರಿಸಿತು. ಸುಮಾರು 250ದಿನ ಓಡಿದ್ದ ಆನಂದ್ ಚಿತ್ರ, ಆ ಕಾಲದಲ್ಲಿ ದಾಖಲೆಯನ್ನೇ ನಿರ್ಮಿಸಿತ್ತು. ಸಿಂಗೀತಂ ಶ್ರೀನಿವಾಸ್ ನಿರ್ದೇಶನ ಮತ್ತು ಶಂಕರ್ ಗಣೇಶ್ ಸಂಗೀತ ಆನಂದ್ ಚಿತ್ರಕ್ಕಿತ್ತು. ಆ ನಂತರ ಶಿವರಾಜ್ ಕುಮಾರ್ ಅಭಿನಯದ ರಥಸಪ್ತಮಿ’. ಮನಮೆಚ್ಚಿದ ಹುಡುಗಿ ಚಿತ್ರಗಳೂ ಗೆದ್ದು ಶಿವಣ್ಣರಿಗೆ “ಹ್ಯಾಟ್ರಿಕ್ ಹೀರೋ” ಪಟ್ಟ ತಂದುಕೊಟ್ಟಿತ್ತು.

Anand-Kannada-Movieಈಗ ನಿಮಗೆಲ್ಲಾ ಅನ್ನಿಸುತ್ತಿರಬಹುದು ’ಆನಂದ್’ ಚಿತ್ರದ ಸುದ್ದಿ ಈಗೇಕೆ ಎಂದು ?

ಈಗ ಆ ದಾಖಲೆಗಳನ್ನು ನೆನಪಿಸಿಕೊಂಡು ಅದರ ಸವಿನೆನಪಿಗಾಗಿ “ಮೈಲಾರಿ” ಖ್ಯಾತಿಯ ನಿರ್ಮಾಪಕ ಕೆ. ಪಿ. ಶ್ರೀಕಾಂತ್, “ಶಿವ” ಚಿತ್ರವನ್ನು ಆನಂದ್ ಚಿತ್ರ ಬಿಡುಗಡೆಯ ದಿನದಂದು ಅಂದರೆ, ಜೂನ್ 16ಕ್ಕೆ ಬಿಡುಗಡೆಯ ಎಲ್ಲಾ ತಯಾರಿಯನ್ನು ಮಾಡುತ್ತಿದ್ದಾರೆ. ಶಿವಣ್ಣ-ಗೀತಾ ದಾಂಪತ್ಯದ ಮೇ 19ರಂದು 26ನೇ ವಾರ್ಷಿಕೋತ್ಸವಕ್ಕೆ “ಶಿವ” ಚಿತ್ರದ ಆಡಿಯೋ ಬಿಡುಗಡೆಗೆ ಕೂಡ ಸಿದ್ದತೆ ನಡೆಸುತ್ತಿದ್ದಾರೆ.

Ak47 ಚಿತ್ರದ ನಂತರ ಬಹಳ ವರ್ಷಗಳ ನಂತರ ಓಂಪ್ರಕಾಶ್ ರಾವ್ ಮತ್ತು ಶಿವಣ್ಣ “ಶಿವ” ಚಿತ್ರದ ಮೂಲಕ ಒಂದಾಗಿದ್ದಾರೆ. ಹೀಗಾಗಿ ‘ಶಿವ’ದ ಬಗ್ಗೆ ಸ್ವತಃ ಶಿವಣ್ಣ ಹಾಗೂ ಅವರ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ. ಚಿತ್ರಕಥೆಯು ಸಾಮಾಜಿಕ ಕಳಕಳಿಯನ್ನು ಹೊಂದಿದ್ದು, ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ ಮೂಲಕ ಶಿವಣ್ಣನ ಪಾತ್ರ ವಿಭಿನ್ನ ಎಂಬುದು ಗೋಚರಿಸುತ್ತಿದೆ. ಚಿತ್ರದಲ್ಲಿ ಶಿವಣ್ಣನಿಗೆ ನಾಯಕಿಯಾಗಿ ರಾಗಿಣಿ ದ್ವಿವೇದಿ ಅಭಿನಯಿಸುತ್ತಿದ್ದಾರೆ. ಇನ್ನೂ ಕೆಲವು ಹಾಡುಗಳ ಶೂಟಿಂಗ್ ಬಾಕಿ ಇದ್ದು, ಮತ್ತೆ ಪೋಸ್ಟ್ ಪ್ರಾಡಕ್ಷನ್ ಕೆಲಸ ಬಾಕಿಯಿರುವ “ಶಿವ”ವನ್ನು ಜೂನ್ ಹದಿನಾರರಂದೇ ತೆರೆಗೆ ತರಲು ಯೋಚಿಸಿರುವ ಶ್ರೀಕಾಂತ್ ಯೋಜನೆ ಫಲಪ್ರದವಾಗಲಿ ಎಂದು ಕನ್ನಡಹನಿಗಳ ಬಳಗ ಹಾರೈಸುತ್ತದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech