Close X

ಕಿಲಾಡಿ ಕಿಟ್ಟಿಯು ಮೇ 18ಕ್ಕೆ ಕಿಲಾಡಿತನವನ್ನು ತೋರಲಿದ್ದಾನೆ

ಶ್ರೀನಗರ ಕಿಟ್ಟಿ ಮತ್ತು ಹರಿಪ್ರಿಯ ನಟಿಸಿರುವ ಕಿಲಾಡಿ ಕಿಟ್ಟಿ ಚಿತ್ರವು ಮೇ 18ರಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ಮೂಲಗಳಿಂದ ತಿಳಿದುಬಂದಿದೆ. “ಚಿತ್ರದ ಸೆನ್ಸಾರ್ ಕ್ಲಿಯೆರೆನ್ಸ್‌ಗಾಗಿ ಕಾಯುತ್ತಿದ್ದು, ಅದು ಬಂದ ಕೂಡಲೆ ಅಧಿಕೃತವಾಗಿ ದಿನಾಂಕವನ್ನು ಪ್ರಕಟಿಸಲಾಗುವುದು” ಎಂದು ಚಿತ್ರದ ನಿರ್ಮಾಪಕ ಶಿವಕುಮಾರ್ ಚಿತ್ರಲೋಕ ತಂಡದೊಂದಿಗೆ ಹಂಚಿಕೊಂಡಿದ್ದಾರೆ.

kiladi-kitty-release-may-18th

ನಾವು ಮತ್ತು ನಮ್ಮ ಚಿತ್ರ ತಂಡ ಸಂಪೂರ್ಣವಾಗಿ ಚಿತ್ರದ ಬಿಡುಗಡೆಗಾಗಿ ಸಜ್ಜುಗೊಂಡಿದ್ದೇವೆ. ನಮ್ಮದೇ ಆದ ವಿಭಿನ್ನ ರೀತಿಯಲ್ಲಿ ಚಿತ್ರದ ಪ್ರಚಾರ ಕೈಗೊಳ್ಳಲು ಯೋಜನೆಯನ್ನು ರೂಪಿಸಿಕೊಂದಿದ್ದೇವೆ. ಚಿತ್ರವನ್ನು ಬಹಳಷ್ಟು ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಗೊಳಿಸುವ ಎಲ್ಲಾ ಪ್ರಯತ್ನವನ್ನು ನಡೆಸಿದ್ದೇವೆ. ನಾನು ಕನ್ನಡ ಪ್ರೇಕ್ಷಕರಿಗೆ 130ನಿಮಿಷದ ಮನರಂಜನೆಯನ್ನು ಈ ಚಿತ್ರದ ಮೂಲಕ ಕೊಡುವುದಾಗಿ ಭರವಸೆ ಕೊಡುತ್ತೇನೆ ಎಂದರು ಶಿವಕುಮಾರ್.

ಚಿತ್ರದ ವಿನೈಲ್ ಬ್ಯಾನರ್ಗಳನ್ನು ಕರ್ನಾಟಕದ ಪ್ರಮುಖ ನಗರಗಳ ಆಯ್ದ ಚಿತ್ರಮಂದಿರಗಳಲ್ಲಿ ಭಾನುವಾರದಿಂದಲೇ ಪ್ರದರ್ಶನವನ್ನು ಏರ್ಪಾಡು ಮಾಡಲಾಗಿದೆ ಎಂದರು ಶಿವಕುಮಾರ್. “ಹಾಗೂ ಚಿತ್ರದ ಪ್ರಮುಖ ಕಲಾವಿದರು ಮತ್ತು ತಾಂತ್ರಿಕ ಜನರೊಂದಿಗೆ ಪ್ರಮುಖ ಪ್ರಚಾರ ಡ್ರೈವ್ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ” ಎಂದರು.

ನ್ಯೂಸ್ ಕೃಪೆ : ಚಿತ್ರಲೋಕ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech