Close X

ಕಿಲಾಡಿ ಕಿಟ್ಟಿಯ ಕಿಲಾಡಿತನದ ವಿಮರ್ಶೆ

ಅನಂತ ರಾಜು ನಿರ್ದೇಶನದ “ಕಿಲಾಡಿ ಕಿಟ್ಟಿ” ಚಿತ್ರವೂ 2008ರಲ್ಲಿ ತೆಲುಗಿನಲ್ಲಿ ಬಿಡುಗಡೆಯಾದ “ಬ್ಲೇಡ್ ಬಾಬ್ಜಿ” ಚಿತ್ರದ ರೀಮೇಕ್. ತೆಲುಗಿನ ಅಲ್ಲರಿ ನರೇಶ್ ನಟಿಸಿದ ಬ್ಲೇಡ್ ಬಾಬ್ಜಿ ಚಿತ್ರವೂ ಹಾಲಿವುಡ್‌ನ “ಬ್ಲೂ ಸ್ಟೀಕ್” ಚಿತ್ರದ ರೀಮೇಕ್ ಕೂಡ. ಆದರೆ ಮೇಲೆ ಸೂಚಿಸಿದ ಎರಡೂ ಚಿತ್ರಗಳ ಗತಿಯನ್ನು ಕಾಪಾಡಿಕೊಳ್ಳಲು ಅಶಕ್ತವಾಗಿದೆ ಕಿಲಾಡಿ ಕಿಟ್ಟಿ. ಚಿತ್ರವನ್ನು ನೋಡಿದರೆ, ನಿರ್ದೇಶಕರು ಚಿತ್ರವನ್ನು ಬೇಗ ಮುಗಿಸಲು ಕಾತುರದಿಂದಿದ್ದರು ಅನ್ನಿಸುತ್ತದೆ. ನಿರ್ದೇಶಕರು ತೆಲುಗಿನ ಚಿತ್ರವನ್ನು ಹಾಗೆಯೇ ಅನುಸರಿಸಿರುವುದೆಂದು ತೋರುತ್ತದೆ. ಚಿತ್ರದಲ್ಲಿ ಯಾವುದೇ ಬದಲಾವಣೆ ಇಲ್ಲ ಹಾಗೂ ನೇಟಿವಿಟಿಗೆ ಹೊಂದುವಂತೆ ಮಾರ್ಪಾಡಿಸಿಲ್ಲ.

Kiladi-kitty-kannada-movie-reviewಚಿತ್ರದ ಕಥೆ ಒಬ್ಬ ವ್ಯಕ್ತಿಯ ಸುತ್ತ ಸುತ್ತುತ್ತದೆ, ಅವನೆ ಕೃಷ್ಣ ಮನೋಹರ್ ಅಲಿಯಾಸ್ ಕಿಟ್ಟಿ ಮತ್ತು ಅವನ ಸ್ನೇಹಿತರು. ಇವರೆಲ್ಲರೂ ಸೇರಿ ಬ್ಯಾಂಕೊಂದನ್ನು ದರೋಡೆ ಮಾಡಿ ಕದ್ದ ಹಣದಿಂದ ಬಡವರು ವಾಸಿಸುವ ಜಾಗದಲ್ಲಿ ಭೂಮಿಯನ್ನು ಖರೀದಿಸಲು ಯೋಜನೆ ರೂಪಿಸುತ್ತಾರೆ. ಕಿಟ್ಟಿ ಮತ್ತವನ ಸ್ನೇಹಿತರೆಲ್ಲರೂ ಸೇರಿ ಮಂಗಳೂರಿನ ಬ್ಯಾಂಕೊಂದರಲ್ಲಿ ದರೋಡೆ ಮಾಡಿ ಹಣವನ್ನು ಬೆಂಗಳೂರಿನಲ್ಲಿ ಬಚ್ಚಿಡುತ್ತಾರೆ. ಅವರ ಆಶ್ಚರ್ಯತೆಗೆ ಅವರು ಬಚ್ಚಿಟ್ಟ ಜಾಗ ಪೋಲೀಸ್ ಕಂಟ್ರೋಲ್ ರೂಂ.

ಹಣವನ್ನು ತಮ್ಮದಾಗಿಸಿಕೊಳ್ಳಲು ಕಿಟ್ಟಿ ಪೋಲೀಸ್ ವೇಷದಲ್ಲಿ ಅಲ್ಲಿ ಕಾಣಿಸಿಕೊಳ್ಳುತ್ತಾನೆ. ಈ ನಾಟಕದಲ್ಲಿ ಕಿಟ್ಟಿ ಕೆಲವು ಒಳ್ಳೆ ಕಾರ್ಯಗಳನ್ನು ಮಾಡಿ ಪ್ರಮೋಷನ್‌ಗೆ ಅರ್ಹನಾಗುತ್ತಾನೆ.

ಕಿಟ್ಟಿ ಮತ್ತವನ ಸ್ನೇಹಿತರು ಹೇಗೆ ಹಣವನ್ನು ತಮ್ಮದಾಗಿಸಿಕೊಂಡು ಆ ಬಡ ಜನರನ್ನು ಕಾಪಾಡುತ್ತಾನೆಂಬುದು ಚಿತ್ರದ ಉಳಿದ ಕಥೆ. ಎಲ್ಲಾ ಕಲಾವಿದರೂ ಅದ್ಬುತವಾಗಿ ನಟಿಸಿದ್ದಾರೆ.

ಚಿತ್ರಕ್ಕೆ ಹರಿಪ್ರಿಯಾ ಮತ್ತು ನಿವೇದಿತಾ ರವರನ್ನೊಳಗೊಂಡ ಒಳ್ಳೆ ಗ್ಲಾಮರ್ ತಂದುಕೊಟ್ಟಿದ್ದಾರೆ ನಿರ್ದೇಶಕ ರಾಜು. ಶ್ರೀನಗರ ಕಿಟ್ಟಿ, ಶರಣ್ ಮತ್ತು ಅವರ ಸ್ನೇಹಿತರ ಕಾಮಿಡಿ ಅದ್ಬುತವಾಗಿದೆ.

ಚಿತ್ರಕ್ಕೆ ಜೆಸ್ಸಿ ಗಿಫ್ಟ್‌ರ ಸಂಗೀತ ಅತ್ಯಮೋಘ. ರವಿ ಕುಮಾರ್ ಈ ಚಿತ್ರದ ಮೂಲಕ ಮತ್ತೆ ತಮ್ಮ ಛಾಯಾಗ್ರಹಣದ ಪ್ರತಿಭೆಯನ್ನು ಪ್ರದರ್ಶಿಸಿದ್ದರೆ.

“ಕಿಲಾಡಿ ಕಿಟ್ಟಿ” ಚಿತ್ರವೂ ಕೆಲವು ನ್ಯೂನತೆಗಳನ್ನು ಹೊಂದಿದ್ದರು, ಒಂದು ಬಾರಿ ನೋಡಲು ಯೋಗ್ಯವಾಗಿದೆ.

News Courtesಯ್ : IBNLive.com

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech