Close X

ಮೇ 10ರಂದು ಕಠಾರಿ ವೀರ ನಿಮ್ಮ ಮುಂದೆ

ಬಹುನಿರೀಕ್ಷೆಯ ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ‘ಕಠಾರಿ ವೀರ ಸುರಸುಂದರಾಂಗಿ’ ಚಿತ್ರ ಇದೇ ವಾರ ಮೇ 10ರಂದು ರಾಜ್ಯದಾದ್ಯಂತ  ತೆರೆಕಾಣುತ್ತಿದೆ. ಕಳೆದ ವಾರ ಬಿಡುಗಡೆಯಾದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ರ  ‘ಅಣ್ಣಾ ಬಾಂಡ್’ ಚಿತ್ರ ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಹಾಗಾಗಿ ಈಗ ಎಲ್ಲರ ಕಣ್ಣು ಕಠಾರಿ ವೀರನತ್ತ. ಕನಿಷ್ಟಪಕ್ಷ ಕಠಾರಿ ವೀರನಾದರೂ ಪ್ರೇಕ್ಷಕರ ನಿರೀಕ್ಷೆಯನ್ನು ಮುಟ್ಟುತ್ತದೆಯೇ ?

Katari_Veera_surasundarangi_Official_poster“ಕಠಾರಿ ವೀರ ಸುರಸುಂದರಾಂಗಿ” ಚಿತ್ರಕ್ಕೆ ದೊಡ್ಡ ತಾರಾಬಳಗವೇ ಇದೆ. ರಿಯಲ್ ಸ್ಟಾರ್ ಉಪೇಂದ್ರ, ರೆಬೆಲ್ ಸ್ಟಾರ್ ಅಂಬರೀಷ್ ಮೊಟ್ಟ ಮೊದಲ ಬಾರಿಗೆ ಯಮನ ಪಾತ್ರದಲ್ಲಿ, ಲಕ್ಕಿ ಸ್ಟಾರ್ ರಮ್ಯಾ  ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಕಥೆಯನ್ನು ಸ್ವತಃ ಮುನಿರತ್ನ (ಚಿತ್ರದ ನಿರ್ಮಾಪಕ) ಒದಗಿಸಿದ್ದಾರೆ. ಚಿತ್ರಕಥೆ, ಸಂಭಾಷಣೆಯನ್ನು ಉಪೇಂದ್ರ ಮತ್ತು ಜನಾರ್ದನ ಮಹರ್ಷಿ ಬರೆದಿದ್ದಾರೆ. ವಿ. ಹರಿಕೃಷ್ಣರ ಸಂಗೀತ ಮತ್ತು ಸುರೇಶ್ ಕೃಷ್ಣರ ನಿರ್ದೇಶನ ಚಿತ್ರಕ್ಕಿದೆ.

ಮೊಟ್ಟ ಮೊದಲ ಬಾರಿಗೆ ಈ ಚಿತ್ರವನ್ನು ಸಂಪೂರ್ಣವಾಗಿ 3D ಯಲ್ಲಿ ತೆಗೆಯಲಾಗಿದೆ.

ಕರ್ನಾಟಕದಾದ್ಯಂತ 180 ಚಿತ್ರಮಂದಿರಗಳಲ್ಲಿ ಬಿಡುಗಡೆ…

ಕರ್ನಾಟಕದಾದ್ಯಂತ 180 ಚಿತ್ರಮಂದಿರಗಳಲ್ಲಿ ಕಠಾರಿ ವೀರ ಸುರಸುಂದರಾಂಗಿ ಬಿಡುಗಡೆ ಗೊಳ್ಳುತ್ತಿದೆ. ಹಾಗೆಂದ ಮಾತ್ರಕ್ಕೆ ಈ ಎಲ್ಲಾ ಚಿತ್ರಮಂದಿರಗಳಲ್ಲೂ 3D ಸಿನಿಮಾ ನೋಡಬಹುದೆಂದು ಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಬರೀ 56 ಸಿನಿಮಾ ಮಂದಿರಗಳಲ್ಲಿ ಮಾತ್ರ 3D ಸೌಲಭ್ಯವಿದೆ. ಉಳಿದೆಡೆ 2D ಮಾತ್ರ. :( 3D ವ್ಯವಸ್ಥೆಯನ್ನು ಪ್ರಮುಖ ನಗರಗಳಾದ ಬೆಂಗಳೂರು, ಮಂಗಳೂರು, ಮೈಸೂರು, ಮಂಡ್ಯ, ಹಾಸನಗಳಲ್ಲಿ ಮಾಡಲಾಗಿದೆ.

Katari Veera Surasundarangi Trailor :

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech