Close X

ಕಠಾರಿ ವೀರನ ಮೊದಲಾರ್ಧ

ಲಾಜಿಕೇ ಇಲ್ಲದ ಬರೀ ಮ್ಯಾಜಿಕ್ ತುಂಬಿರುವ ಚಿತ್ರ ಕಠಾರಿ ವೀರ ಸುರಸುಂದರಾಂಗಿ. ಒಬ್ಬ ಸಾಧಾರಣ ಮನುಷ್ಯನಾಗಿ ಉಪೇಂದ್ರ ಉತ್ತಮವಾಗಿ ನಟಿಸಿದ್ದಾರೆ. ಒಬ್ಬ ಡಾನ್ ನಿಂದ ಹತನಾಗಿ ಸ್ವರ್ಗ ಮತ್ತು ನರಕದ ಬಾಗಿಲಿಗೆ ಬರುತ್ತಾನೆ. ಯಮಲೋಕದಿಂದ ತಪ್ಪಾಗಿದ್ದ ಕಾರಣ ಅವನಿಗೆ ಆಯ್ಕೆಯನ್ನು ನೀಡಲಾಗುತ್ತದೆ. ಅದೇನೆಂದರೆ 15ದಿನಗಳವರೆಗೆ ಅವನು ಸ್ವರ್ಗದಲ್ಲಿ ಮತ್ತು 15 ದಿನಗಳವರೆಗೆ ನರಕದಲ್ಲಿ ಇರಬಲ್ಲ.

katari-veera-sura-sundarangi-ambareesh

ನಮ್ಮ ಹೀರೋ ಜೀವನದಲ್ಲಿ ಥ್ರಿಲ್ ಬಯಸುವ, ಹಾಗಾಗಿ ಮೊದಲ 15ದಿನಗಳನ್ನು ನರಕದಲ್ಲಿ ಕಳೆಯಬಯಸುತ್ತಾನೆ. ನರಕದಲೆಲ್ಲಾ ಸುತ್ತಾಡುತ್ತ ಶಿಕ್ಷೆಯನ್ನು ಅನುಭವಿಸುತ್ತ ಗಢಾಫಿ, ಬಿನ್ ಲಾಡೆನ್, ವೀರಪ್ಪನ್ ಮುಂತಾದವರನ್ನು ಕಾಣುತ್ತಾನೆ. ತದನಂತರ ಸ್ವರ್ಗದ ಜೊತೆ ಆಕರ್ಷಿತವಾಗಿ ನರಕದಲ್ಲಿ 15 ದಿನಗಳು ಪೂರ್ಣಗೊಳಿಸುವ ಮುನ್ನವೆ ಸ್ವರ್ಗಕ್ಕೆ ಹೋಗಲು ಇಚ್ಚಿಸುತ್ತಾನೆ.

ಉಪೇಂದ್ರ ಯಮಲೋಕವನ್ನು ಕಲುಷಿತಗೊಳಿಸಿ, ಯಮಲೋಕದಲ್ಲೆ ಚುನಾವಣೆಯನ್ನು ತರುತ್ತಾನೆ. ಇದನ್ನು ತಾಳಲಾರದೆ ಯಮ ಉಪೇಂದ್ರನನ್ನು ಸ್ವರ್ಗಕ್ಕೆ ಕಳುಹಿಸುತ್ತಾನೆ. ಅಲ್ಲಿಗೆ ಮೊದಲಾರ್ಧ ಮುಕ್ತಾಯ.

ಸ್ವಲ್ಪ ರಿಲಾಕ್ಸ್ ಆಗಿ ಕಾಫಿ ಟೀ ಕುಡ್ಕೊಂಡು ಬನ್ನಿ. ಕಥೆಯನ್ನ ಮುಂದುವರೆಸೋಣ…..

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech