Close X

ಗೋಲ್ಡನ್ ಸ್ಟಾರ್ ಗಣೇಶ್‌ರ “ಸಕ್ಕರೆ” ಚಿತ್ರೀಕರಣ ಪ್ರಾರಂಭ

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ದೀಪ ಸನ್ನಿದಿ ಪ್ರಮುಖವಾಗಿ ನಟಿಸುತ್ತಿರುವ ಚಿತ್ರ ಸಕ್ಕರೆ ಸೋಮವಾರ ಮುಂಜಾನೆ ಬುಲ್ ಟೆಂಪಲ್ ರೋಡ್‌ನಲ್ಲಿರುವ ದೊಡ್ಡ ಗಣಪತಿ ದೇವಸ್ತಾನದಲ್ಲಿ ಪೂಜೆಯೊಂದಿಗೆ ಶುರುವಾಗಿದೆ. ಗಣೇಶ್‌ಗೆ ಈ ಚಿತ್ರವೂ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಅವರ ಇತ್ತೀಚಿನ “ಶೈಲೂ” ಮತ್ತು “ಮುಂಜಾನೆ” ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಅಂತಹ ದೊಡ್ಡ ಹಿಟ್ ಆಗಲಿಲ್ಲ. ಗಣೇಶ್‌ಗೆ ಇದೊಂದು ಪರೀಕ್ಷೆಯ ಸಮಯವಾಗಿ ಪರಿಣಮಿಸಿದೆ. ಮುಂಜಾನೆ ಬಹು ಬೇಗ ಪೂಜೆಯನ್ನು ಮುಗಿಸಿದ ಚಿತ್ರ ತಂಡ ಚಿತ್ರೀಕರಣಕ್ಕಾಗಿ ಮಡಿಕೇರಿಗೆ ಪ್ರಯಾಣ ಬೆಳಸಿತು.

Ganesh-golden-star
Deepa-Sannidhi-Sakkare

ಮೀಡಿಯಾ ಹೌಸ್ ಪ್ರೋಡಕ್ಷನ್‌ನ ಶೈಲಜಾ ನಾಗ್ ಮತ್ತು ಬಿ. ಸುರೇಶ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಗುಬ್ಬಚಿಗಳು

ಮತ್ತು ಶಿಕಾರಿ ಚಿತ್ರದ ನಿರ್ದೇಶಕ ಅಭಯ್ ಸಿಂಹ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಾನು ನನ್ನ ಕನಸು ಮತ್ತು ಪುಟ್ಟಕ್ಕನ ಹೈವೇ ಚಿತ್ರಗಳು ಮೀಡಿಯಾ ಹೌಸ್ ನಿರ್ಮಾಣ ಸಂಸ್ಥೆಯಡಿಯಲ್ಲಿ ತಯಾರಾಗಿದ್ದವು. ಬಿ. ಸುರೇಶ್ ಮತ್ತು ಪ್ರಕಾಶ್ ರೈ ಜಂಟಿಯಾಗಿ ನಿರ್ಮಾಪಕರಾಗಿದ್ದರು. ಆದರೆ ಈ ಬಾರಿ ಸುರೇಶ್ ಒಬ್ಬರೇ ಸಕ್ಕರೆಯನ್ನು ನಿರ್ಮಿಸುತ್ತಿದ್ದಾರೆ.ಸುರೇಶ್‌ಗೆ ಗಣೇಶ್ ಹೊಸಬರೇನಲ್ಲ. ಸಹಾಯಕ ನಿರ್ದೇಶಕರಾಗಿ ಇದೇ ಸುರೇಶ್ ಕ್ಯಾಂಪಿನಲ್ಲಿ ಗಣೇಶ್ ಕೆಲಸ ಮಾಡಿದ್ದವರು. ಹಾಗಾಗಿ ಒಂದು ರೀತಿಯಲ್ಲಿ ಗಣೇಶ್‌ಗೆ ಸುರೇಶ್ ಗುರು.

ಹರಿಕೃಷ್ಣರ ಸಂಗೀತದೊಂದಿದೆ ಚಿತ್ರದಲ್ಲಿ ಐದು ಹಾಡುಗಳಿವೆ. ಯೋಗರಾಜ್ ಭಟ್ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. 10ದಿನಗಳ ಕಾಲ ಮಡಕೇರಿಯಲ್ಲಿ ಶೂಟಿಂಗ್ ಮುಗಿಸಲಿರುವ ಚಿತ್ರ ತಂಡ, ಮತ್ತೆ ಬೆಂಗಳೂರಿಗೆ ಮರಳಲಿದೆ. ತದನಂತರ, ಸ್ವಲ್ಪ ದಿನಗಳ ವಿಶ್ರಾಂತಿಯನ್ನು ತೆಗೆದುಕೊಳ್ಳಲಿದೆ. ಚಿತ್ರದ ಎರಡನೇ ವೇಳಾಪಟ್ಟಿಯನ್ನು ಯೋಜಿಸಿಲ್ಲ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech