Close X

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ರೋಮಿಯೋ” ಚಿತ್ರದ ಅಧಿಕೃತ ಟ್ರೈಲರ್ ಬಿಡುಗಡೆ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ರೋಮಿಯೋ” ಚಿತ್ರದ ಅಧಿಕೃತ ಟ್ರೈಲರ್ ಮತ್ತು ಹಾಡುಗಳ ಚಿತ್ರೀಕರಣ ಮಾಡುವ ತುಣುಕುಗಳನ್ನು ಮೇ 21 ಸೋಮವಾರದಂದು ಸಂಜೆ 7ಗಂಟೆಗೆ ಶಂಕರ್‌ನಾಗ್ (Symphony) ಥಿಯೇಟರಿನಲ್ಲಿ ಬಿಡುಗಡೆಗೊಳಿಸಲಾಯಿತು. ಪಿ. ಸಿ. ಶೇಖರ್ ಚಿತ್ರವನ್ನು ನಿರ್ದೇಶಿಸುತ್ತಿದ್ದರೆ, ನವೀನ್ ಮತ್ತು ರಮೇಶ್ ಬಾಬು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

kannada-movie-romeo-trailer-launchedಕನ್ನಡ ಸಿನಿಮಾ ರಂಗದಲ್ಲೇ ಮೊಟ್ಟಮೊದಲ ಬಾರಿಗೆ ಒಂದು ಚಿತ್ರದ ಅಧಿಕೃತ ಟ್ರೈಲರ್ ಮತ್ತು ಹಾಡುಗಳ ಚಿತ್ರೀಕರಣ ಮಾಡುವ ತುಣುಕುಗಳನ್ನು ಬಿಡುಗಡೆಗೊಳಿಸುತ್ತಿರುವುದು. ಚಿತ್ರದ ಧ್ವನಿ ನಿಜವಾದ ಡಾಲ್ಬಿ ಡಿಜಿಟಲ್ ಶೈಲಿಯಲ್ಲಿ ಅಭಿಮಾನಿಗಳು ಕೇಳಬಹುದು ಎಂಬ ಭರವಸೆಯನ್ನು ರೋಮಿಯೋ ಚಿತ್ರ ತಂಡ ನೀಡಿದೆ.

ಈ ಸಮಾರಂಭದಲ್ಲಿ ರೋಮಿಯೋ ಚಿತ್ರದ ಎಲ್ಲ ಕಲಾವಿದರೂ ಮತ್ತು ತಂತ್ರಜ್ಞರು ಭಾಗವಹಿಸಿದ್ದರು. ಕಲಾವಿದರಾದ ಗೋಲ್ಡನ್ ಸ್ಟಾರ್ ಗಣೇಶ್, ಸಾಧುಕೋಕಿಲ್, ರಂಗಾಯಣ ರಘು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಸುಧಾ ಬೆಳವಾಡಿ, ಅವಿನಾಶ್, ರಮೇಶ್ ಭಟ್, ಮಿತ್ರ, ಗಿರೀಶ್ ಶಿವಣ್ಣ ಮುಂತಾದವರೂ. ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಗಣೇಶ್ ತಮ್ಮ ಮತ್ತೊಂದು ಚಿತ್ರ “ಸಕ್ಕರೆ”ಯ ಶೂಟಿಂಗ್ ತಾಣವಾದ ಮಂಗಳೂರಿನಿಂದ ಬೆಂಗಳೂರಿಗೆ ಸೋಮವಾರ ಮಧ್ಯಾಹ್ನ ಹಾರಿ ಬಂದರು.

ಪ್ರಖ್ಯಾತಿಗರಾದ ಕ್ರೇಜಿ ಸ್ಟಾರ್ ರವಿಚಂದ್ರನ್, ಬರಹಗಾರ ಮತ್ತು ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕರಾದ ರಾಕ್‌ಲೈನ್ ವೆಂಕಟೇಶ್, ಕೆ. ಮಂಜು ಇವರುಗಳೂ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇವರೊಂದಿಗೆ ಹಿರಿಯ ಪೊಲೀಸ್ ಅಧಿಕಾರಿ ಬಿ. ಎನ್. ಎಸ್. ರೆಡ್ಡಿ ಕೂಡ ಪಾಲ್ಗೊಂಡಿದ್ದರು.

ಅತಿಥಿಗಳು ನಿರ್ದೇಶಕ ಶೇಖರ್‌ ಮತ್ತು ಅವರ ತಂಡಕ್ಕೆ ದೊಡ್ಡ ಯಶಸ್ಸನ್ನು ಆಶಿಸಿದರು. ಇದರೊಂದಿಗೆ ಕನ್ನಡ ಹನಿಗಳ ಬಳಗವೂ ರೋಮಿಯೋ ಚಿತ್ರ ತಂಡಕ್ಕೆ ಯಶಸ್ಸನ್ನು ಕೋರುತ್ತದೆ.

Officail Trailer of Kannada Movie “Romeo” :

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech