Close X

ಒಂದಲ್ಲ, ಎರಡಲ್ಲ, ಎಂಟು ಬಾರಿ ರಾಗಿಣಿ ಕನ್ನಡ ಹೀರೋ ಆದಿತ್ಯಗೆ ಹೊಡೆದರು !!!

ಒಂದಲ್ಲ, ಎರಡಲ್ಲ, ಎಂಟು ಬಾರಿ ರಾಗಿಣಿ ಕನ್ನಡ ಹೀರೋ ಡೆಡ್ಲಿ ಸೋಮ ಆದಿತ್ಯಗೆ ಹೊಡೆದರು !!! ಇದು ರಾಗಿಣಿ ಮತ್ತು ಆದಿತ್ಯ ನಟಿಸಿರುವ “ವಿಲ್ಲನ್” ಚಿತ್ರದ ಶೂಟಿಂಗ್. ರಾಗಿಣಿ ಆದಿತ್ಯ ಕೆನ್ನೆಗೆ ಹೊಡೆಯುವ ದೃಶ್ಯವನ್ನು ಬರೋಬ್ಬರಿ ಎಂಟು ಬಾರಿ ಶೂಟ್ ಮಾಡಿದ್ದಾರೆ ನಿರ್ದೇಶಕ ಎಂ. ಎಸ್. ರಮೇಶ್. ಇದಾದ ಮೇಲೆ ಆದಿತ್ಯ ಆ ನೋವಿಗೆ ಜಂಡೂ ಬಾಮ್ ಕೂಡ ಲೇಪಿಸಿದರೆಂದು ತಿಳಿದುಬಂದಿದೆ.

villain-movie-stills-releasesರಾಗಿಣಿ ಮತ್ತು ಆದಿತ್ಯ ರೋಮ್ಯಾನ್ಸ್, ಡೆಡ್ಲಿ ಸೋಮನ ಪಂಚಿಂಗ್ ಡೈಲಾಗ್ಸ್, ಚಿತ್ರದಲ್ಲಿ ಯಾರು ವಿಲ್ಲನ್ ? ಈ ಮೇಲಿನ ದೃಶ್ಯವನ್ನು ನೋಡಬೇಕೆಂದರೆ ನಾಳೆ ಶುಕ್ರವಾರ ಮೇ 25ರಂದು ತೆರೆಕಾಣುತ್ತಿರುವ “ವಿಲ್ಲನ್” ಚಿತ್ರವನ್ನು ನೋಡಲು ಬನ್ನಿ.

ಎಂ. ಎಸ್. ರಮೇಶ್ ಚಿತ್ರಕ್ಕೆ ನಿರ್ದೇಶನ, ಚಿತ್ರಕಥೆ ಮತ್ತು ಡೈಲಾಗ್ಸ್ ಬರೆದಿದ್ದಾರೆ. ಅವಿನಾಶ್, ರಂಗಾಯಣ ರಘು, ಶೋಭರಾಜ್, ಮಾಲತಿ ಶರದೇಶಪಾಂಡೆ, ಸಿಮ್ರನ್, ಕಮಲ ಮತ್ತಿತ್ತರು ನಟಿಸಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಈ ಚಿತ್ರವನ್ನು ಮುಂಚೆ “ಟಿಪ್ಪು” ಎಂದು ಹೆಸರಿಡಲಾಗಿತ್ತು. !!!

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech