Close X

ಕ್ರೇಜಿಯ ಅಭಿಮಾನಿಗಳಿಗೆ ಹುಟ್ಟುಹಬ್ಬದಂದು ಕ್ರೇಜಿಲೋಕ !

ಕವಿತಾ ಲಂಕೇಶ್ ನಿರ್ದೇಶನದ, ರವಿಚಂದ್ರನ್, ಡೈಸಿ ಬೋಪಣ್ಣ, ಹರ್ಷಿಕಾ ಪೂಣಚ್ಚ ಅಭಿನಯದ ಕ್ರೇಜಿಲೋಕ ಚಿತ್ರವೂ ಕ್ರೇಜಿ ಸ್ಟಾರ್ ರವಿಚಂದ್ರನ್ ಹುಟ್ಟುಹಬ್ಬದ ದಿನ ಬಿಡುಗಡೆ ಗೊಳಿಸಲು ನಿರ್ಮಾಪಕ ಕಿಂಗ್ ರವಿ ಎಲ್ಲಾ ಸಿದ್ದತೆಗಳನ್ನು ಮಾಡುತ್ತಿದ್ದಾರೆ. ಕ್ರೇಜಿಸ್ಟಾರ್ ಅಭಿಮಾನಿಗಳು ಅವರ ಸಿನಿಮಾ ನೋಡಿ ಕ್ರೇಜಿಯಾಗಲು ಕ್ರೇಜಿಲೋಕವನ್ನು ಅವರ ಹುಟ್ಟುಹಬ್ಬದ ದಿನ ಅಂದರೆ ಇದೇ ಮೇ 30ರಂದು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದಾರೆ.

crazyloka-Kannada-Movie-Releaseನಿಮಗೆಲ್ಲಾ ತಿಳಿದಿರುವಂತೆ ಈ ಚಿತ್ರದ ಆಡಿಯೋ ಬಿಡುಗಡೆಯನ್ನೂ ಸ್ವಲ್ಪ ಕ್ರೇಜಿಯಾಗಿಯೇ ಮಾಡಲಾಗಿತ್ತು. ಜನವರಿ ತಿಂಗಳಿನಲ್ಲೇ ಆಡಿಯೋ ಬಿಡುಗಡೆಯಾದರೂ ಇನ್ನೂ ಚಿತ್ರ ಬಿಡುಗಡೆ ಆಗಿಲ್ಲ !!!

ನಿರ್ಮಾಪಕ ಕಿಂಗ್ ರವಿಯವರ ಸಮರ್ಥನೆಯೆಂದರೆ, ದೊಡ್ಡ ಚಿತ್ರಗಳ ಹಾವಳಿ (ನಿಮಗೆಲ್ಲ ಗೊತ್ತಿರುವ ಹಾಗೆ, ಅಣ್ಣಾಬಾಂಡ್, ಕಠಾರಿವೀರ, ಗಾಡ್‌ಫಾದರ್) ಹಾಗೂ ಥಿಯೇಟರುಗಳ ಅಭಾವವೇ ಈ ವಿಳಂಬಕ್ಕೆ ಕಾರಣ ಎನ್ನುತ್ತಾರೆ.

ರವಿಚಂದ್ರನ್ ರವರೇ ಹೇಳಿಕೊಂಡಿರುವ ಹಾಗೆ ಇದು ಅವರ ಸಿನಿಮಾವಲ್ಲ. ಅವರು ನಟನೆಯಷ್ಟೆ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಅವರೆಲ್ಲೂ ಅಂತ ಅಬ್ಬರದ ಪ್ರಚಾರ ಮಾಡಿಲ್ಲ, ಹಾಗೆ ಸಿನಿಮಾ ಬಗ್ಗೆ ಅಷ್ಟೇನೂ ಹೇಳಿಕೊಂಡಿಲ್ಲ. ಆದರೆ ಕ್ರೇಜಿಲೋಕ ಚಿತ್ರತಂಡಕ್ಕೆ ಸಂತಸದ ಸುದ್ದಿ ಎಂದರೆ, ಅವರ ಇನ್ಯಾವುದೇ ಸಿನಿಮಾ ಈ ಸಲದ ಹುಟ್ಟುಹಬ್ಬದಂದು ಸಿದ್ದವಿಲ್ಲ. ಹಾಗಾಗಿ ಅದರ ಪೂರ್ಣಪ್ರಮಾಣದ ಅವಕಾಶವನ್ನು ಚಿತ್ರತಂಡ ಬಳಸಿಕೊಳ್ಳಲು ನಿರ್ಧರಿಸಿದೆ. ಅವರ ಸಿನಿಮಾಗಳಲ್ಲಿ ಕಂಡು ಬರುವ ಶೃಂಗಾರ ಮತ್ತು ಹಾಸ್ಯವನ್ನ ಕ್ರೇಜಿಲೋಕ ಕೂಡಾ ಕಟ್ಟಿಕೊಡಲಿದೆ ಎಂಬ ಭರವಸೆ ಕೊಡುತ್ತಾರೆ ನಿರ್ದೇಶಕಿ ಕವಿತಾ ಲಂಕೇಶ್.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech