Close X

ಬೆಂಗಳೂರಿಗರು ಭರ್ಜರಿ ಮಳೆಗೆ ತತ್ತರ, ಸಂಚಾರ ಅಸ್ತವ್ಯಸ್ತ !!!

ಬೆಂಗಳೂರು ನಗರದ ಹಲವೆಡೆ ಭಾರಿ ಭರ್ಜರಿ ಮಳೆಯಿಂದ ಬೇಸಿಗೆಯ ತಾಪಮಾನದಿಂದ ಬೇಸತ್ತಿದ್ದ ಜನಕ್ಕೆ ಒಮ್ಮೆಲೆ ಮಳೆರಾಯ ತಂಪನ್ನು ಎರಗಿದ್ದಾನೆ. ಇದರಿಂದ ತಂಪೇನೋ ಆಯಿತು, ಹಾಗೆ ಜನ ಜೀವನ ಕೂಡ ಅಸ್ತವ್ಯಸ್ತಗೊಂಡಿದೆ. ಸರಿಯಾಗಿ ಎಲ್ಲಾ ಕಛೇರಿಗಳು ಬಿಡುವ ವೇಳೆಗೆ ಮಳೆ ನಿಂತಿರುವ ಕಾರಣ, ಎಲ್ಲರೂ ಒಮ್ಮೆಲೆ ಮನೆಗೆ ಹೊರಟವರು ಟ್ರಾಫಿಕ್ ಜಾಮ್ ಬಾಚಿ ತಬ್ಬಿ ಸ್ವಾಗತಿಸುತ್ತಿದ್ದಾನೆ.

ಆಲಿಕಲ್ಲು ಸಹಿತ ಭಾರಿ ಭರ್ಜರಿ ಮಳೆ ಸಂಚಾರಕ್ಕೆ ಕಂಟಕವಾಗಿದೆ. ಬೆಂಗಳೂರಿನ ರಸ್ತೆಗಳೆಲ್ಲ ಹೊಂಡಮಯವಾಗಿರುವುದು ತಿಳಿದ ವಿಷಯವೇ ! ಹಾಗಾಗಿ ಆ ಹೊಂಡಗಳಲ್ಲಿ ನೀರು ತುಂಬಿದ್ದು, ವಾಹನ ಸವಾರರು ಹೆದರಿಕೆಯಿಂದ ನಿಧಾನಗತಿಯಲ್ಲಿ ಚಲಿಸುತ್ತಿರುವುದರಿಂದ ಎಲ್ಲ ಕಡೆ ಟ್ರಾಫಿಕ್ ಜಾಮ್ ಕಾಣಬಹುದಾಗಿದೆ.

Bangalore-Rainfall

ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ವಿಧಾನಸೌಧ ಸುತ್ತ ಮುತ್ತ ಟ್ರಾಫಿಕ್ ಜಾಮ್ ಹೆಚ್ಚಾಗಿದೆ. ಉಳಿದಂತೆ ರಿಚ್ಮಂಡ್ ಟೌನ್, ಶಾಂತಿನಗರದಲ್ಲೂ ಮಳೆಯಿಂದ ಟ್ರಾಫಿಕ್ ಜಾಮ್ ಹೆಚ್ಚುತ್ತಿದೆ. ಜಯನಗರ, ಬಸವನಗುಡಿ, ಮೈಸೂರು ರಸ್ತೆಯಲ್ಲೂ ಮಳೆ ಹೆಚ್ಚಾಗುತ್ತಿರುವ ವರದಿ ಬಂದಿದೆ.

ಮಾರತ್ ಹಳ್ಳಿ ಬಳಿಯ ಯಶೋಮತಿ ಆಸ್ಪತೆಗೆ ಕ್ಯಾಂಟೀನ್ ಒಳಗೆ ನೀರು ನುಗ್ಗಿದೆ. ಹಲಸೂರಿನ ಬಳಿ ಲಾವಣ್ಯ ಥೇಟರ್ ಮುಂದಿದ್ದ ಬೃಹತ್ ಮರ ನೆಲಕ್ಕುರಳಿದೆ. ಯಡಿಯೂರಿನ ಕೆರೆ ಬಳಿ ಮರ ನೆಲಕ್ಕೆ ಉರುಳಿದೆ.

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ: ಮುಂದಿನ 48 ಗಂಟೆಗಳಲ್ಲಿ (ಮೇ.16, ಮೇ.17) ಕನಿಷ್ಠ ತಾಪಮಾನ 22 ಡಿಗ್ರಿ, ಗರಿಷ್ಠ ತಾಪಮಾನ 31 ಡಿಗ್ರಿ ಇರಲಿದೆ. ಗುಡುಗು ಸಹಿತ ಸಾಧಾರಣ ಮಳೆ ನಿರೀಕ್ಷಿಸಲಾಗಿದೆ.

ನ್ಯೂಸ್ ಕೃಪೆ : ಒನ್ ಇಂಡಿಯಾ

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech