Close X

ಅಣ್ಣಾಬಾಂಡ್ ಚಿತ್ರವಿಮರ್ಶೆ – Annabond Movie Review

ಹಾಸ್ಯ, ಹೊಡೆದಾಟ, ಕ್ರೌರ್ಯ, ಚಲನಶೀಲತೆ ಎಲ್ಲವುಗಳ ಸಮ್ಮಿಲನವೆ ಚಿತ್ರದ ಮೊದಲರ್ಧ. ಎರಡನೇ ಅರ್ಧದಲ್ಲಿ ಖಳನ ಪ್ರವೇಶವಾಗುತ್ತದೆ. ಪವರ್ ಸ್ಟಾರ್ ಪುನೀತ್‌ರ ಪವರ್ ಪ್ಯಾಕ್ ಚಿತ್ರಕ್ಕಿದೆ. ನಿರ್ದೇಶಕ ಸೂರಿ ಅವರ ಬಹುತೇಕ ಚಿತ್ರಗಳ(ದುನಿಯಾ, ಜಾಕಿ, ಜಂಗ್ಲಿ etc.,) ನಾಯಕನ ಹಿನ್ನೆಲೆ ಹಳ್ಳಿಯದ್ದು. ಈ ಚಿತ್ರದ ನಾಯಕ ಕೂಡ ಹಳ್ಳಿಯವನೇ.

Annabond-Movie-Reviewಚಿತ್ರಕ್ಕೆ ಅತ್ಯುತ್ತಮ ಹಾಸ್ಯವನ್ನು ರಂಗಾಯಣ ರಘುವಿನ ಮೂಲಕ ಲೇಪಿಸಲಾಗಿದೆ. ರಂಗಾಯಣ ರಘು ಸಂಭಾಷಣೆಯ ಟೈಮಿಂಗ್ ಚಿತ್ರದ ದೊಡ್ಡ ಮನರಂಜನೆ. ಹಾಸ್ಯ ಎಷ್ಟರ ಮಟ್ಟಿಗೆ ಇದೆಯೆಂದರೆ, ಆಪ್ತರ ಸಾವಿನ ಸುದ್ದಿ ಕೂಡ ತಮಾಷೆಯ ಸಂಗತಿಯಾಗಿ ತೋರಿಸುವ ಚಾಣಾಕ್ಷತೆ ರಂಗಾಯಣ ರಘುವಿಗೆ ಮಾತ್ರ ಸಾಧ್ಯ. ಖಳನ ಪಾತ್ರದಲ್ಲಿ ಬಾಲಿವುಡ್‌ನ ನಟ ಜಾಕಿ ಶ್ರಾಫ್‌ರ ನಶೆ ತುಂಬಿದ ಕಣ್ಣುಗಳು, ಖಳನಿಗೆ ಒಪ್ಪುವ ಕಂಠದಿಂದ ಗುರುತಾಗುತ್ತಾರೆ. `ದುನಿಯಾ` ಚಿತ್ರದ ವಿಲಕ್ಷಣ ಜಗತ್ತು, `ಜಂಗ್ಲಿ` ಚಿತ್ರದ ಕ್ರೌರ್ಯ, `ಜಾಕಿ`ಯಲ್ಲಿದ್ದ ಅನಿರೀಕ್ಷಿತ ತಿರುವುಗಳು ಇದರಲ್ಲೂ ಇವೆ. ಅಂದರೆ, ನಿರ್ದೇಶಕರು ತಮ್ಮ ಹಳೆ ಶೈಲಿಯಲ್ಲಿಯೇ ಈ ಚಿತ್ರವನ್ನೂ ನಿರೂಪಿಸಿದ್ದಾರೆನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.

ಪುನೀತ್ ಪಾತ್ರ ಈ ಚಿತ್ರದಲ್ಲಿ ಅಷ್ಟೇನೂ ಭಾವುಕತೆಯ ಪಾತ್ರವಲ್ಲ. ಆದರೆ, ತಮಾಷೆ ಮಾತು, ಉಡಾಫೆ ಮಾತು, ಎದುರಾಳಿಯ ಕೆಣಕುವ ಮಾತು, ನಾಯಕಿಯ ಎದುರು ತಡಬಡಾಯಿಸುವ ಮಾತು ಎಲ್ಲದರಲ್ಲೂ ಪುನೀತ್ ಜೀವಂತಿಕೆಯನ್ನು ತುಂಬಿದ್ದಾರೆ. ಕ್ಲೈಮ್ಯಾಕ್ಸ್‌ನ ಹೊಡೆದಾಟದಲ್ಲಂತೂ ಅವರ ಬಲಾಢ್ಯ ದೇಹ ಹಿಂದೆಂದಿಗಿಂತಲೂ ಆಕರ್ಷಕ. ನಿರಾಸೆಯ ವಿಷಯವೆಂದರೆ ಅವರ ಕುಣಿತ. ಅವರ ಚಿತ್ರಗಳೆಲೆಲ್ಲಾ ಪುನೀತ್ ಕುಣಿತವೇ ಚಿತ್ರಕ್ಕೆ ಆಕರ್ಷಕ. ಆದರೆ ಈ ಚಿತ್ರದಲ್ಲಿ ಅವರು ನಿರಾಸೆಯನ್ನುಂಟುಮಾಡಿದ್ದಾರೆ. ಪುನೀತ್ ಕುಣಿತದಲ್ಲಿ ಅಷ್ಟೇನೂ ಹೊಸತನವಿಲ್ಲ.

ಸತ್ಯ ಹೆಗಡೆ ಛಾಯಾಗ್ರಹಣದ ಛಾಪು ಈ ಚಿತ್ರಕ್ಕಿದೆ. ಅವರ ಛಾಯಾಗ್ರಹಣಕ್ಕೆ ಕನ್ನಡಿಯೆಂದರೆ, ಕೆಂಪುದೀಪದ ಬೆಳಕಲ್ಲಿ ಜಗದ ಕತ್ತಲನ್ನು ತೋರಿಸುವ ಅವರ ಶೈಲಿಯೇ ವಿಭಿನ್ನ. ಇತ್ತೀಚಿನ ಹಿಟ್ ಸಂಗೀತ ನಿರ್ದೇಶಕ ಹರಿಕೃಷ್ಣ ಅವರ ಸಂಗೀತ, ಯೋಗರಾಜ ಭಟ್ಟರ ಸಾಹಿತ್ಯ ಚಿತ್ರಕ್ಕಿದೆ. `ಜಾಕಿ`ಯ ಹ್ಯಾಂಗೋವರ್ ಈ ಚಿತ್ರದಲ್ಲಿ ಎದ್ದು ಕಾಣುವುದು ಸ್ಪಷ್ಟವಾಗಿದೆ.

`ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಸೆಂಟ್ರಲ್ಲಿ ಲವ್ವ… ಯಾಕೊಲೇ` ಎಂಬ ಧಾಟಿಯ ಬಿಡಿಬಿಡಿ ತತ್ತ್ವಪದಗಳನ್ನು ಯೋಗರಾಜ ಭಟ್ಟರು ಈ ಚಿತ್ರದಲ್ಲೂ ಬರೆದಿದ್ದಾರೆ. ಪ್ರಿಯಾಮಣಿ ಕಂಗಳು ಮಾತಾಡುತ್ತವೆ. ನಿಧಿ ಸುಬ್ಬಯ್ಯ ಪಾತ್ರ ಅಗತ್ಯಕ್ಕಿಂತ ಹೆಚ್ಚೇ ಮಾತನಾಡುತ್ತದೆ.

ಚಿತ್ರ: ಅಣ್ಣಾ ಬಾಂಡ್
ನಿರ್ಮಾಪಕಿ: ಪಾರ್ವತಮ್ಮ ರಾಜಕುಮಾರ್
ನಿರ್ದೇಶನ: ಸೂರಿ
ತಾರಾಗಣ: ಪುನೀತ್ ರಾಜಕುಮಾರ್, ಪ್ರಿಯಾಮಣಿ, ನಿಧಿ ಸುಬ್ಬಯ್ಯ, ರಂಗಾಯಣ ರಘು,ಜಾಕಿ ಶ್ರಾಫ್.

Other Stories of Annabond Movie :

ಭರ್ಜರಿ ಬಿಡುಗಡೆಯೊಂದಿಗೆ

ಅಣ್ಣಾಬಾಂಡ್ ಚಿತ್ರ

ಅಣ್ಣಾಬಾಂಡ್ ಚಿತ್ರ

ಮತ್ತೊಂದು ಸುದ್ದಿಯಲ್ಲಿ

ಅಣ್ಣಾಬಾಂಡ್ ಚಿತ್ರದ

ಧ್ವನಿಸುರುಳಿ ಬಿಡುಗಡೆ

ಪುನೀತ್‌ರ ಅಣ್ಣಾಬಾಂಡ್

ಚಿತ್ರ ಏಪ್ರಿಲ್ 18ರಂದು ತೆರೆಗೆ

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech