Close X

ಭರ್ಜರಿ ಬಿಡುಗಡೆಯೊಂದಿಗೆ ಅಣ್ಣಾಬಾಂಡ್ ಚಿತ್ರ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ರವರ ಅತೀ ನಿರೀಕ್ಷಿತ ಚಿತ್ರ ಅಣ್ಣಾಬಾಂಡ್ ಇಂದು ಬಿಡುಗಡೆ. ಮಲ್ಟಿಪ್ಲೆಕ್ಸ್ ನಲ್ಲಿ ಬಿಡುಗಡೆಗೆ ಸಂಬಂಧಿಸಿದಂತೆ ಅಣ್ಣಾಬಾಂಡ್ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಬಿಡುಗಡೆಯ ದಾಖಲೆ ಸೃಷ್ಟಿಸಿದೆ. ಈ ದಿನ ಮೇ 1ರಂದು ಹೊಸಪೇಟೆಯ ಸರಸ್ವತಿ ಚಿತ್ರಮಂದಿರದಿಂದ ಮೊದಲ ಪ್ರದರ್ಶನ ಶುರುವಾಗಿದೆ.

ಮುಂಜಾನೆಯಿಂದಲೇ ಕೆಲವು ವಾಹಿನಿಗಳು ಚಿತ್ರವನ್ನು ಬಗ್ಗೆ ಬಿಡುಗಡೆ ಮಾಡಬೇಕೆಂಬ ಅಭಿಮಾನಿಗಳ ಬೇಡಿಕೆಯನ್ನು ಫ್ಲಾಶ್ ಸುದ್ದಿಯಾಗಿ ನೀಡುತ್ತಿದ್ದರು. ಬಳ್ಳಾರಿಯ ಶಿವ ಥಿಯೇಟರಿನಲ್ಲೂ ಇಂತಹ ಘಟನೆಯ ವರದಿಯಾಗಿದೆ.

Anna-Bond-Movie-Release

ಸಿನಿಪೋಲಿಸ್‌ನ ಎಲ್ಲಾ ಹದಿಮೂರು ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಎಲ್ಲಾ ಹೌಸ್‌ಫುಲ್ ಆಗಿದೆ. ಮುಂಜಾನೆ ಏಳು ಗಂಟೆಯಿಂದಲೆ ರಾಕ್‌ಲೈನ್ ಸಿನಿಮಾಸ್ ಪ್ರದರ್ಶನವನ್ನು ಶುರುಮಾಡಿದೆ. ಜಾಲಹಳ್ಳಿಯ ಮಲ್ಟಿಪ್ಲೆಕ್ಸ್‌ನಲ್ಲಿ ದಿನದಲ್ಲಿ ಇಪ್ಪತ್ತು ಶೋಗಳನ್ನು ಪ್ರದರ್ಶಿಸುತ್ತಿದ್ದು, ಇದು ಗುರುವಾರದವರೆಗೆ ಮುಂದುವರೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. PVRನ ಎಲ್ಲಾ ಎಂಟು ಶೋಗಳು ಈಗಾಗಲೇ ಅಡ್ವಾಸ್ಸ್ ಬುಕಿಂಗ್ ಆಗಿದೆ ಮತ್ತು ಇತರೆ ಮಲ್ಟಿಪ್ಲೆಕ್ಸ್‌ಗಳು ಕೂಡ ಇದೆ ಫಲಿತಾಂಶವನ್ನು ನೀಡಿದೆ. ಚಿತ್ರದ ಪ್ರತಿಕ್ರಿಯೆಯ ಮೇರೆಗೆ ಮಲ್ಟಿಪ್ಲೆಕ್ಸ್ ಮಾಲೀಕರು ಚಿತ್ರ ಪ್ರದರ್ಶನದ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ. ಚಿತ್ರವು ಮೊದಲ ದಿನದಂದು 104 ಶೋಗಳನ್ನು ಕಾಣಲಿದೆ. ಈ ಎಲ್ಲಾ ಅಂಕಿ ಅಂಶಗಳನ್ನು ಗಮನಿಸಿದಲ್ಲಿ, ಚಿತ್ರದ ದೊಡ್ಡ ಪಾಲು ಮಲ್ಟಿಪ್ಲೆಕ್ಸ್ ನಿಂದ ಬರಲಿದೆ.

ಮಲ್ಟಿಪ್ಲೆಕ್ಸ್ ಹೊರತು ಪಡಿಸಿ, ಮಿಕ್ಕ ಥೆಯೇಟರ್‌ಗಳನ್ನು ನೋಡಿದರೆ, ನವರಂಗ್ ಆರು ಪ್ರದರ್ಶನವನ್ನು ಹೊಂದಿದ್ದು, ಬೆಳಗ್ಗೆ 7:30 ಗಂಟೆಗೆ ತನ್ನ ಮೊದಲ ಪ್ರದರ್ಶನವನ್ನು ಆರಂಭಿಸಿದೆ ಹಾಗೂ ಕೊನೆಯ ಪ್ರದರ್ಶನ 10:00PM. ಇನ್ನೂ ಇತರೆ ಥೆಯೇಟರ್‌ಗಳೆಂದರೆ, ಸಿದ್ದೇಶ್ವರ, ವಜ್ರೇಶ್ವರಿ ಮುಂತಾದ ಚಿತ್ರಮಂದಿರಗಳೂ ಬೆಳಗ್ಗೆಯಿಂದಲೇ ಪ್ರದರ್ಶನವನ್ನು ಕೈಗೊಂಡಿದೆ.

ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿರಿ :)

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech