Close X

ಅಂಬಿ ಬಿಂಬ ಚಿತ್ರ ಪ್ರದರ್ಶನಕ್ಕೆ ಚಾಲನೆ…

Pages: 1 2 3

ಕನ್ನಡದ ರೆಬೆಲ್ ಸ್ಟಾರ್ ಅಂಬರೀಷ್ ಅವರ 60ನೇ ಹುಟ್ಟುಹಬ್ಬ ಆಚರಣೆಯ ಪ್ರಯುಕ್ತ ಚಿತ್ರಲೋಕ ತಂಡವು ಅವರ 40 ವರ್ಷದ ಸುದೀರ್ಘ್ ಸಿನಿಮಾ, ರಾಜಕೀಯ ಮತ್ತವರ ವಯಕ್ತಿಕ ಜೀವನದ ಆಯ್ದ ಫೋಟೋಗಳನ್ನು ಪ್ರದರ್ಶಿಸುತ್ತಿದೆ ಅದೇ “ಅಂಬಿ ಬಿಂಬ”. ಅಂಬಿ ಬಿಂಬವನ್ನು ಕರ್ನಾಟಕದ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಉದ್ಘಾಟಿಸಿ ಅಂಬರೀಷ್ ಕುರಿತು ಮಾತನಾಡಿದರು. ಈ ಫೋಟೋ ಪ್ರದರ್ಶನದಲ್ಲಿ 600ಕ್ಕೂ ಹೆಚು ಫೋಟೋಗಳು ಮತ್ತು 80 A3 ಗಾತ್ರದ ಫೋಟೋಗಳನ್ನು ಪ್ರದರ್ಶನಕ್ಕಿಡಲಾಗಿದೆ. ಈ ಪ್ರದರ್ಶನವು ಮೇ 29, 30, 31 ರಂದು ಬೆಳಗ್ಗೆ 10:30ರಿಂದ ರಾತ್ರಿ 9:30 ಗಂಟೆಯವರೆಗೆ ನಡೆಯಲಿದೆ. ಪ್ರದರ್ಶನವನ್ನು ದುರ್ಗಾಪರಮೇಶ್ವರಿ ಆಟದ ಮೈದಾನ(ರಂಗಶಂಕರ ಎದುರು) ಜೆ. ಪಿ. ನಗರ, ಬೆಂಗಳೂರುನಲ್ಲಿ ಆಯೋಜಿಸಲಾಗಿದೆ.

CM Sadananda Gowda Inaugurated Ambi Bimbaಮುಖ್ಯಮಂತ್ರಿ ಡಿ. ವಿ. ಸದಾನಂದ ಉದ್ಘಾಟಿಸಿ ಮಾತನಾಡಿದರು : “ಅಂಬರೀಷ್‌ ಸಿನಿಮಾ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಶ್ರೇಷ್ಠ ಸಾಧನೆ ಮಾಡಿದ ವ್ಯಕ್ತಿ. ಈ ರೀತಿಯ ಫೋಟೋ ಪ್ರದರ್ಶನದಿಂದ ಅಂಬರೀಷ್ ಜೀವನ ಮತ್ತು ವೃತ್ತಿ ಜೀವನದ ಒಂದು ಪಕ್ಷಿನೋಟ ದೊರೆಯುತ್ತದೆ. ಅಂಬರೀಷ್ ಮೊದಲು ಖಳನಾಯಕನ ಪಾತ್ರದಿಂದ ಪಾದಾರ್ಪಣೆ ಮಾಡಿ ಈಗ ಮಂಡ್ಯದ ಗಂಡು ರೆಬೆಲ್ ಸ್ಟಾರ್ ಎಂಬ ಬಿರುದುಗಳಿಂದ ಕರ್ನಾಟಕದ ಮನೆಮಾತಾಗಿದ್ದಾರೆ. ನೂರು ಪುಟಗಳ ಬರವಣಿಗೆಗಿಂತ ಒಂದು ಚಿತ್ರ ಬಹಳಷ್ಟು ವಿಷಯವನ್ನು ಕೊಡುತ್ತದೆ” ಎಂದರು.

ಚಿತ್ರ ಪ್ರದರ್ಶನಕ್ಕೆ ಮುಖ್ಯ ಅತಿಥಿಗಳಾಗಿ ಜಯಂತಿ, ಜಯಮಾಲಾ, ತಾರಾ ಅನುರಾಧ, ರಾಜೇಂದ್ರ ಸಿಂಗ್ ಬಾಬು, ರಿಯಲ್ ಸ್ಟಾರ್ ಉಪೇಂದ್ರ, ರಕ್ಷಣಾ ವೇದಿಕೆಯ ನಾರಾಯಣ ಗೌಡ್ರು ಮುಂತಾದವರೂ ಆಗಮಿಸಿದ್ದರು.

ಅಂಬಿ ಬಿಂಬ ಚಿತ್ರ ಪ್ರದರ್ಶನದ ಆಯ್ದ ಚಿತ್ರಗಳು :

Ambi_Sambrama_Ambarish_Birthday_Celebration_2012_11

Ambi_Sambrama_Ambarish_Birthday_Celebration_2012_10

Ambi_Sambrama_Ambarish_Birthday_Celebration_2012_9

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech