Close X

ಆಮೀರ್ ಖಾನ್‌ರ ಸತ್ಯಮೇವ ಜಯತೆ ಕಾರ್ಯಕ್ರಮ ಕನ್ನಡ ಅನುವಾದದಲ್ಲಿ. ತಪ್ಪದೇ ವೀಕ್ಷಿಸಿ

ಇತ್ತೀಚೆಗೆ ಮೊದಲ ಬಾರಿಗೆ ಆಮೀರ್ ಖಾನ್ ಟಿವಿ ಶೋನಲ್ಲಿ “ಸತ್ಯಮೇವ ಜಯತೆ” ಎನ್ನುವ ಕಾರ್ಯಕ್ರಮದೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮವನ್ನು 13ಕಂತುಗಳಲ್ಲಿ ನಡೆಸಲಾಗುವುದು ಮತ್ತು ದೇಶದ ವಿವಿಧ ಸಾಮಾಜಿಕ ಪಿಡುಗುಗಳನ್ನು ಬೆಳಕಿಗೆ ತರುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಕಾರ್ಯಕ್ರಮವು ವಾರಕ್ಕೊಮ್ಮೆ ಅಂದರೆ ಪ್ರತಿ ಭಾನುವಾರ ಬೆಳಗ್ಗೆ 11 ಗಂಟೆಗೆ ಪ್ರಸಾರಗೊಳ್ಳಲಿದೆ.

satyamev-jayateಇದರ ಮೊದಲ ಸಂಚಿಕೆ ಮೇ 6ರಂದು ಸ್ಟಾರ್ ಪ್ಲಸ್ ಮತ್ತು ಡಿಡಿ ನ್ಯಾಷನಲ್ ನಲ್ಲಿ ಪ್ರಸಾರಗೊಂಡಿತು. ಈ ಸಂಚಿಕೆಯಲ್ಲಿ ಅಮೀರ್ ಹೆಣ್ಣುಮಕ್ಕಳ ಭ್ರೂಣ ಹತ್ಯೆಯ ಪಿಡುಗಿನ ಬಗ್ಗೆ ದೇಶದಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ಮನಮುಟ್ಟುವಂತೆ ವಿವರಿಸಿದ್ದಾರೆ. ಇದೊಂದು ಎಚ್ಚರಿಕೆಯ ಮತ್ತು ಭಯಾನಕ ರಿಯಾಲಿಟಿ ಬಗ್ಗೆ ಮಾತನಾಡಿದ್ದಾರೆ. ಇದು ಯಾವುದೇ ಒಬ್ಬ ವ್ಯಕ್ತಿಯಿಂದಾಗುವುದಿಲ್ಲ. ಇದಕ್ಕೆ ಕುಟುಂಬಗಳು, ವೈದ್ಯರು, ಸಾಮಾಜಿಕ ರಚನೆಯ ತಂತ್ರ ಮತ್ತು ಒಂದು ಗಂಡು ಮಗುವಿನ ಅಪೇಕ್ಷೆ ಭ್ರೂಣ ಹತ್ಯೆಯನ್ನು ಉತ್ತೇಜಿಸುತ್ತದೆ. ಈ ಪರಿಣಾಮವಾಗಿ ಸ್ವಾತಂತ್ರ್ಯ ಪೂರ್ವ 3 ಕೋಟಿ ಅಜಾತ ಹೆಣ್ಣು ಶಿಶುವಿನ ಸಾವು ಸಂಬಂದಿಸಿದೆ.

ಇದೊಂದು ಒಳ್ಳೆಯ ಉದ್ದೇಶ ಹಾಗೂ ಒಳ್ಳೆಯ ಸಂದೇಶ ಕೊಡುವ ಕಾರ್ಯಕ್ರಮ. ಇದು ಸಾಮಾಜಿಕ ಕಳಕಳಿಯಿರುವ ಕಾರ್ಯಕ್ರಮವೂ ಹೌದು.

ಈ ಕಾರ್ಯಕ್ರಮವು ಮೂಲ ಹಿಂದಿಯಲ್ಲಿ ಪ್ರಸಾರ ಗೊಂಡಿದ್ದು, ನಮ್ಮಲ್ಲಿ ಎಷ್ಟೋ ಜನಗಳಿಗೆ ಅರ್ಥವಾಗದೆ ಇರಬಹುದು. ಈ ಕಾರಣಕ್ಕಾಗಿಯೇ ಈ ಕಾರ್ಯಕ್ರಮವು ಇತರೆ ಭಾಷೆಗಳಾದ ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ ಮತ್ತು ಬೆಂಗಾಲಿಯಲ್ಲಿ ಕೂಡ ತಯಾರಾಗಿದೆ. ಯಾರಿಗೆ ಹಿಂದಿ ಭಾಷೆಯಲ್ಲಿ ಇದನ್ನು ನೋಡುವುದು ತೃಪ್ತಿಕರವಾಗುವುದಿಲ್ಲವೋ ಅವರನ್ನೂ ಈ ಸಾಮಾಜಿಕ ಸಮಸ್ಯೆ ಕುರಿತ ಶೋ ತಲುಪಲೆಂದೇ ಹಲವಾರು ಭಾಷೆಯಲ್ಲಿ ಡಬ್ಬಿಂಗ್ ಮಾಡಿದ್ದೇವೆ ಎನ್ನುತ್ತಾರೆ ಅಮೀರ್ ಖಾನ್.

ಈ ಕಾರ್ಯಕ್ರಮದ ಕನ್ನಡ ಅನುವಾದದ ಅವತರಣಿಕೆ ಈ ಕೆಳಗೆ ನಿಮಗಾಗಿ :

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech