Close X

ಪಾಕಿಸ್ತಾನಿ ಬೆಡಗಿ ವೀಣಾ ಮಲ್ಲಿಕ್ ಕನ್ನಡದ Dirty Pictureನಲ್ಲಿ

ವೀಣಾ ಮಲ್ಲಿಕ್ ಪಾಕಿಸ್ತಾನಿ ಮೂಲದ ನಟಿ ಈಗ ಗಾಂಧೀನಗರದಲ್ಲಿ ಸುದ್ಧಿಯಲ್ಲಿದ್ದಾರೆ. ಈ ಮೊದಲು ವೀಣಾ ಮಲ್ಲಿಕ್ ಒಂದು ಪತ್ರಿಕೆಗೆ ವಿವಸ್ತ್ರಳಾಗಿ ವಿವಾದಾತ್ಮಕಕ್ಕೆ ಕಾರಣಳಾಗಿದ್ದಳು ಮತ್ತೂ ಬಿಗ್ ಬಾಸ್-4 ರಲ್ಲಿ ಕೂಡ ಪಾಲ್ಗೊಂಡಿದ್ದಳು. ಮತ್ತೀಗ ’ಗಂಗಾ ಕಾವೇರಿ’ ಚಿತ್ರದ ನಿರ್ಮಾಪಕ ವೆಂಕಟಪ್ಪ ವೀಣಾ ಮಲ್ಲಿಕ್‌ನನ್ನು ಕನ್ನಡದಲ್ಲಿ ’ಡರ್ಟಿ ಪಿಕ್ಚರ್ಸ್….. ಸಿಲ್ಕ್ ಸಕತ್ ಮಗ’ ಚಿತ್ರಕ್ಕೆ ಆಯ್ಕೆಮಾಡಿಕೊಂಡಿದ್ದಾರೆ. ಹಿಂದಿಯ ’ಡರ್ಟಿ ಪಿಕ್ಚರ್ಸ್’ನ ವಿದ್ಯಾಬಾಲನ್ ಪಾತ್ರವನ್ನು ಕನ್ನಡದಲ್ಲಿ ವೀಣಾ ಮಲ್ಲಿಕ್ ನಿರ್ವಹಿಸುತ್ತಿದ್ದಾರೆ.

veena-malik-kannada-cinemaಈ ಹಿಂದೆ ಕನ್ನಡದಲ್ಲಿ ’ಬಾಬಾ’ ಚಿತ್ರವೊಂದನ್ನು ನಿರ್ದೇಶಿಸಿದ ತ್ರಿಶೂಲ್ ಈ ಚಿತ್ರವನ್ನೂ ನಿರ್ದೇಶಸುತ್ತಿದ್ದಾರೆ. ಯಥೋಚಿತ ಪ್ರಶ್ನೆಯೊಂದು ಇನ್ನೂ ಗಾಂಧೀನಗರದಲ್ಲಿ ಗುಸು ಗುಸು ನಡೆಯುತ್ತಿದ್ದೆ. ಅದೇನೆಂದರೆ, ಹಿಂದಿಯ ’ಡರ್ಟಿ ಪಿಕ್ಚರ್ಸ್’ನ ರೀಮೇಕ್ ಹಕ್ಕನ್ನು ತೆಗೆದುಕೊಂಡಿದ್ದಾರೆಯೆ ಎನ್ನುವುದು. ಅದಕ್ಕೆ ನಿರ್ದೇಶಕ ತ್ರಿಶೂಲ್ ಹೇಳುವುದೇನೆಂದರೆ, “ಸಿಲ್ಕ್ ಸ್ಮಿತಾ”ರವರ ಜೀವನ ಚರಿತ್ರೆಯ ಆಧಾರಿತ ಹಿಂದಿಯ ’ಡರ್ಟಿ ಪಿಕ್ಚರ್ಸ್’ ಚಿತ್ರವನ್ನು ಮಾಡಲು ಅದರ ತಯಾರಕರು ಯಾವುದೇ ಹಕ್ಕನ್ನು ಯಾರ ಬಳಿಯು ಪಡೆದಿಲ್ಲ. ಹಾಗೆಯೇ, ಸಿಲ್ಕ್ ಸ್ಮಿತಾರವರ ಜೀವನ ಚರಿತೆಯಲ್ಲಿ ಯಾವುದನ್ನು ಹಿಂದಿಯ ಡರ್ಟಿ ಪಿಕ್ಚರ್ಸ್‌ನಲ್ಲಿ ತೋರಿಸಿಲ್ಲವೊ ಅದನ್ನು ಕನ್ನಡದಲ್ಲಿ ನೋಡಬಹುದಾಗಿದೆ ಎಂದಿದ್ದಾರೆ.

ಮೇ 12ರಂದು ವೀಣಾ ಮಲ್ಲಿಕ್ ಚಿತ್ರದ ಫೋಟೋ ಶೂಟ್‌ನಲ್ಲಿ ಭಾಗವಹಿಸುವರು. ಅಕ್ಷಯ್, ನಿರ್ಮಾಪಕ ವೆಂಕಟಪ್ಪನವರ ಸುಪುತ್ರ ಈ ಚಿತ್ರದಲ್ಲಿ ನಾಯಕ ನಟರಾಗುತ್ತಿದ್ದಾರೆ.

ಚಿತ್ರದ ವೀಕ್ಷಕರಿಗೆ ಕುತೂಹಲಕಾರಿ ಭಾಗ ಎಂದರೆ ವೀಣಾ ಮಲಿಕ್ ‘Two Piece’ ತೋರಿಸಲ್ಲಿದ್ದಾರೆ – ದಕ್ಷಿಣ ಭಾರತೀಯ ಚಿತ್ರಗಳಲ್ಲಿ ಸಿಲ್ಕ್ ಸ್ಮಿತಾ ಬಹುವಾಗಿ ಉಪಯೋಗಿಸಿದ ವಸ್ತ್ರವಿನ್ಯಾಸ. ಹಿಂದಿಯ ಡರ್ಟಿ ಪಿಕ್ಚರ್ಸ್‌ನಲ್ಲಿ ವಿದ್ಯಾಬಾಲನ್ ಕೂಡ ಇದನ್ನು ಧರಿಸಿಲಿಲ್ಲ. ಇದೇ ವೀಣಾ ಮಲ್ಲಿಕ್ ಹಾಗೂ ವಿದ್ಯಾಬಾಲನ್ ನಡುವೆ ಇರುವ ವ್ಯತ್ಯಾಸ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech