Close X

“KVSS” ಏಪ್ರಿಲ್ 27ಕ್ಕೆ ಬಿಡುಗಡೆಯ ಪಟ್ಟು ಮುನಿರತ್ನ ನಾಯ್ಡು

Pages: 1 2

’ಕಠಾರಿ ವೀರ ಸುರ ಸುಂದರಾಗ್ನಿ’ – ಪ್ರಪ್ರಥಮ ಕನ್ನಡ 3D ಚಿತ್ರವಾಗಿದ್ದು, ಮುನಿರತ್ನ ನಾಯ್ಡುರವರ ನಿರ್ಮಾಣದಲ್ಲಿ ಮೂಡಿಬರಲಿದೆ. ಚಿತ್ರದಲ್ಲಿ ಉಪೇಂದ್ರ, ರಮ್ಯ, ಅಂಬರೀಶ್ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮುನಿರತ್ನ ನಾಯ್ಡು, ರೂ. 15 ಕೋಟಿ ಬಜೆಟ್ ಹೊಂದಿರುವ ಕಠಾರಿ ವೀರ ಸುರಸುಂದರಾಗ್ನಿ ಚಿತ್ರದ ನಿರ್ಮಾಪಕ, ಸೋಮವಾರ ಮೀಡಿಯಾವನ್ನು ಉದ್ದೇಶಿಸಿ ತಮ್ಮ ಚಿತ್ರ ಏಪ್ರಿಲ್ 27ಕ್ಕೆ ಬಿಡುಗಡೆ ಹೊಂದಲಿದೆ ಎಂದು ಖಡಾಖಂಡಿತವಾಗಿ ನುಡಿದರು. ಅಣ್ಣಾಬಾಂಡ್ ಚಿತ್ರವು ಏಪ್ರಿಲ್ 26ಕ್ಕೆ ಬಿಡುಗಡೆ ಗೊಂಡರೆ, ಇವರ ಚಿತ್ರ ಒಂದು ದಿನದ ನಂತರ ಅಂದರೆ ಏಪ್ರಿಲ್ 27ಕ್ಕೆ ಬಿಡುಗಡೆ.

Producer Muniratnaಇಲ್ಲಿದೆ ಮುನಿರತ್ನರವರು ಒಂದು ಗಂಟೆಯ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಸಾರಾಂಶ :

1. ಸುರೇಶ್ ಕೃಷ್ಣ ನಿರ್ದೇಶನದ, ಉಪೇಂದ್ರ, ರಮ್ಯ, ಅಂಬರೀಶ್, ಶ್ರೀಧರ್, ದೊಡ್ಡಣ್ಣ ಮುಂತಾದವರು ನಟಿಸಿರುವ “KVSS” ಚಿತ್ರವನ್ನು ಏಪ್ರಿಲ್ 27ಕ್ಕೆ ಬಿಡುಗಡೆ ಮಾಡಲು ಸಕಲ ಸಿದ್ದತೆಯನ್ನು ಮಾಡಿಕೊಂಡಿದ್ದೇನೆ.

2. ಬಹಳಷ್ಟು ಕಡೆಗಳಿಂದ ಒಂದು ವಾರ ಚಿತ್ರ ಬಿಡುಗಡೆಯನ್ನು ಮುಂದೂಡಲು ಮನವಿಗಳು ಬರುತ್ತಿವೆ. ಆದರೆ ಅದು ನನಗೆ ಬಹಳ ಕಷ್ಟವಾಗುವುದು.

3. ಇಲ್ಲಿಯವರೆಗೆ ಸುಮಾರು 70 ಚಿತ್ರಮಂದಿರಗಳು 3D ಸ್ಕ್ರೀನಿಂಗ್ ತಂತ್ರಜ್ಞಾನ ವ್ಯವಸ್ಥೆಯೊಂದಿಗೆ ರಿಲೀಸ್ ಮಾಡಲು ಒಪ್ಪಿವೆ ಅದರಲ್ಲಿ 22 ಚಿತ್ರಮಂದಿರಗಳು ಬೆಂಗಳೂರಿನಲ್ಲಿ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech