Close X

“KVSS” ಏಪ್ರಿಲ್ 27ಕ್ಕೆ ಬಿಡುಗಡೆಯ ಪಟ್ಟು ಮುನಿರತ್ನ ನಾಯ್ಡು

Pages: 1 2

4. ಮೂರು ಮೇಘಾ ಸೆಟ್‍ನೊಂದಿಗೆ 45 ದಿನಗಳ ಕಾಲ 9 ಕ್ಯಾಮೆರಾಗಳೊಂದಿಗೆ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣವನ್ನು ಪೂರೈಸಿದೆ. ಡಾ. ರಾಜ್‌ಕುಮಾರ್‌ರ ಬಬ್ರುವಾಹನ, ಬಹದ್ದೂರ್ ಗಂಡು, ಭಕ್ತ ಪ್ರಹ್ಲಾದ ಚಿತ್ರಗಳಿಂದ ಸ್ಪೂರ್ತಿ ಪಡೆದು ಈ ಚಿತ್ರವನ್ನು ನಿರ್ಮಿಸಿದ್ದೇನೆ.

5. ಅಂಬರೀಶ್ ಈ ಚಿತ್ರದಲ್ಲಿ ಯಮನ ಪಾತ್ರ ಮಾಡಲು ಒಪ್ಪಿದ ಬಳಿಕವೇ ಚಿತ್ರ ನಿರ್ಮಾಣವನ್ನು ಕೈಗೆತ್ತಿಕೊಂಡೆ. 40 ವರ್ಷಗಳ ಅಂಬರೀಶ್ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಅವರು ಯಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

KVSS

6. ರಮ್ಯರವರು ದೇವಕನ್ಯೆ, ಶ್ರೀಧರ್ ಇಂದ್ರನಾಗಿ, ದೊಡ್ಡಣ್ಣ ಚಿತ್ರಗುಪ್ತನಾಗಿ ಮತ್ತು ಮುತ್ತಪ್ಪ ರೈ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

7. ಚಿತ್ರವನ್ನು ಸುರೇಶ್ ಕೃಷ್ಣ ನಿರ್ದೇಶಿಸುತ್ತಿದ್ದು, ಹೆಚ್. ಸಿ. ವೇಣುರ ಛಾಯಾಗ್ರಹಣದ ಕೈಚಳಕ ಚಿತ್ರಕ್ಕಿದೆ.

8. ಚಿತ್ರದ ಧ್ವನು ಸುರಳಿಯನ್ನು ಇದೇ ತಿಂಗಳ 16ಕ್ಕೆ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

9. ಚಿತ್ರದ ನಿರ್ಮಾಣ ಹಂತದಲ್ಲಿ ಡಾ. ಜಯಪ್ರದ, ಸುನಿಲ್ ಶೆಟ್ಟಿ, ಜಿತೇಂದ್ರ, ಕಾರ್ತಿಕ್ ಚಿತ್ರೀಕರಣದ ಸ್ಥಳಕ್ಕೆ ಭೇಟಿಕೊಟ್ಟು, ಚಿತ್ರೀಕರಣವನ್ನು ಕೂತೂಹಲದಿಂದ ವೀಕ್ಷಿಸಿದ್ದರು.

10. ಚಿತ್ರಕ್ಕೆ ಉಪೇಂದ್ರರ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ, ಹರಿಕೃಷ್ಣರ ಸಂಗೀತ, ಚಿನ್ನಿ ಪ್ರಕಾಶ್‌ರ ನೃತ್ಯ ಸಂಯೋಜನೆ ಮತ್ತು ರವಿ ವರ್ಮರ ಸಾಹಸ ಚಿತ್ರಕ್ಕಿದೆ.

ಮೂಲಗಳ ಪ್ರಕಾರ ಸರಿ ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಕಠಾರಿ ವೀರ ಸುರಸುಂದರಾಗ್ನಿ. ಮೂಲಗಳ ಪ್ರಕಾರ ಚಿತ್ರದ ತಯಾರಕರು, ತೆಲುಗಿನಲ್ಲೂ ಬಿಡುಗಡೆಯ ಆಸಕ್ತಿ ತೋರಿಸಿದ್ದಾರೆ. ಕನ್ನಡಹನಿಗಳ ಬಳಗದಿಂದ ಚಿತ್ರತಂಡಕ್ಕೆ ಶುಭಕೋರುತ್ತೇವೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech