Close X

ಕೂಲ್ ಗಣೇಶನಾಗಿ ಜಗ್ಗೇಶ್ ಅತೀ ಶೀಘ್ರದಲ್ಲೇ ನಿಮ್ಮ ಮುಂದೆ

Jaggesh-Cool-Ganesh-Kannada-Movieಗಣೇಶ ಎಂದರೆ ನಮಗೆ ಬಹಳಷ್ಟು ಸಿನಿಮಾಗಳು ಥಟ್ ಅಂತ ಹೊಳೆಯುತ್ತೆ !. ಮೊದಲು ಗಣೇಶನ ಪಾತ್ರದಲ್ಲಿ ಮಿಂಚಿದ ನಮ್ಮ ನಿಮ್ಮೆಲ್ಲರ ಹಿರಿಯ ನಟ ಅನಂತ್‌ನಾಗ್. ಅವರ ಗಣೇಶನ ಮದುವೆ, ಗೌರಿ – ಗಣೇಶ ಮುಂತಾದ ಹಲಾವಾರು ಚಿತ್ರಗಳಿಂದ ನಮ್ಮನ್ನು ರಂಜಿಸಿದ್ದಾರೆ. ಮತ್ತೆ ಹಿಂದೆ ಗಣೇಶ ಎನ್ನುವ ಚಿತ್ರದಲ್ಲಿ ಸ್ವತಃ ಜಗ್ಗೇಶ್ ನಾಯಕನಟನಾಗಿ ಅಭಿನಯಿಸಿದ್ದರು. ಹಿಂದಿನ ವರ್ಷ 2011ರಲ್ಲಿ ಬಿಡುಗಡೆಯಾದ “ಕೂಲ್” ಚಿತ್ರವೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದ್ದು. ಇಷ್ಟೆಲ್ಲಾ ಹಿನ್ನಲೆಯಿರುವ ಗಣೇಶ ಎಂಬ ಹೆಸರಿನೊಂದಿಗೆ ಮತ್ತೊಮ್ಮೆ ನವರಸ ನಾಯಕ ಜಗ್ಗೇಶ್ ನಿಮ್ಮೆಲ್ಲರನ್ನೂ ರಂಜಿಸಲು ಬರುತ್ತಿದ್ದಾರೆ “ಕೂಲ್ ಗಣೇಶ”ನಾಗಿ.

[ad_468x60]

ನಟ ಜಗ್ಗೇಶ್‌ರನ್ನು ಚಿತ್ರದ ನಾಯಕನ ಪಾತ್ರಕ್ಕೆ ಮನವೊಲಿಸುವಲ್ಲಿ ಯಶಸ್ವಿಯಾಗಿರುವ ನಿರ್ದೇಶಕ ವಸಂತ್, ಈ ಮೊದಲು “ಮಿ. ಬಕ್ರ” ಮತ್ತು “ಹೃದಯಗಳ ವಿಷಯ” ಚಿತ್ರಗಳನ್ನು ನಿರ್ದೇಶಿಸಿದ್ದರು. ಬಿ. ಎಂ. ಸುರೇಶ್ ಚಿತ್ರಕ್ಕೆ ಬಂಡವಾಳ ಹೂಡಲಿದ್ದು ಜೊತೆಗೆ ಕಥೆ ಮತ್ತು ಚಿತ್ರಕಥೆಯನ್ನು ಸ್ವತಃ ತಾವೇ ಬರೆದಿದ್ದಾರೆ.

ಎಲ್ಲರ ಜೀವನದಲ್ಲಿ ಕಷ್ಟ ಸುಖ ಇದ್ದೇ ಇರುತ್ತದೆ. ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಹೇಗೆ ಬ್ಯಾಲನ್ಸ್ ಮಾಡಬೇಕೆಂಬ ಪಾಠವನ್ನು ಈ ಚಿತ್ರದ ಮೂಲಕ ತಿಳಿಸಲು ಮುಂದಾಗಿದ್ದಾರೆ. ಕಷ್ಟಗಳಲ್ಲೂ ಕೂಲ್ ಆಗಿರುವುದು ಹೇಗೆ ಎಂಬುದನ್ನು ತಮ್ಮದೇ ಆದ ವಿಶಿಷ್ಟ ಶೈಲಿಯ ಹಾಸ್ಯದ ಮೂಲಕ ತಿಳಿಸಲಿದ್ದಾರೆ ಜಗ್ಗೇಶ್.

ವಿನಯ್ ಚಂದ್ರರ ಸಂಗೀತ, ಅಶೋಕ್‍ರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಈ ಮೊದಲು ಈ ಇಬ್ಬರೂ ಜಗ್ಗೇಶ್‌ರ ಬಾಡಿಗಾರ್ಡ್ ಚಿತ್ರಕ್ಕೆ ಕೆಲಸ ಮಾಡಿದ್ದರು. ರಾಜೇಂದ್ರ ಕಾಮತ್ ಚಿತ್ರಕ್ಕೆ ಸಂಭಾಷಣೆ ಒದಗಿಸಿದ್ದಾರೆ.
ಜಗ್ಗೇಶ್ ಅಭಿಮಾನಿಗಳು ಕಾತುರತೆಯಿಂದ ಅವರನ್ನು ತೆರೆಯ ಮೇಲೆ ನೋಡಲು ಕಾಯುತ್ತಿದ್ದಾರೆ. ಅವರು ಬೇಗ ತೆರೆಯ ಮೇಲೆ ಬಂದು ತಮ್ಮ ಅತ್ಯಮೋಘ ಹಾಸ್ಯದಿಂದ ಎಲ್ಲರನ್ನೂ ಹೀಗೆ ನೂರ್‍ಕಾಲ ರಂಜಿಸಲಿ ಎಂದು ಹಾರೈಸುವ ಕನ್ನಡಹನಿಗಳ ಬಳಗ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech