Close X

ಕನ್ನಡ ಚಿತ್ರಗಳ ವಿವಾದ ಸುಳಿಯಲ್ಲಿ ಗೋವಿಂದಾಯ ನಮಃ ಸೇರ್ಪಡೆ !

ಈಗ ಕನ್ನಡ ಚಿತ್ರರಂಗ ವಿವಾಧಗಳ ಸುಳಿಯಲ್ಲಿ ಸಿಲುಕುತ್ತಿದೆ. ಎತ್ತ ನೋಡಿದರೂ, ಯಾವ ಚಿತ್ರ ಕೇಳಿದರೂ ಬರೀ ವಿವಾದಗಳೆ. ನಿಮಗೆ ತಿಳಿದಿರುವಂತೆ, ಇತ್ತೀಚೆಗೆ ಭೀಮಾತೀರದಲ್ಲಿ ಚಿತ್ರ ವಿವಾದದ ಬಿಸಿ ಆರದೇ, ಅಣ್ಣಾಬಾಂಡ್ ಚಿತ್ರದ ಸುದ್ದಿ ನೆನ್ನೆಯಷ್ಟೆ ಹಾಕಿದ್ದೆ. ಈಗ ಅದೇ ಸಾಲಿಗೆ ಸೇರುತ್ತಿದೆ 2012 ಹಿಟ್ ಚಿತ್ರ ಪ್ಯಾರ್ಗೆ ಆಗ್ಬಿಟ್ಟಿದೆ ಹಾಡಿನ ಚಿತ್ರ ಗೋವಿಂದಾಯ ನಮಃ.

ನಿಮಗೆ ತಿಳಿದಿರಲಿಕ್ಕಿಲ್ಲ, 2006ರಲ್ಲಿ ವೇಣುಗೋಪಾಲ್ ಎಂಬ ನಿರ್ದೇಶಕ “ಅವ್ನಂದ್ರೆ ಅವ್ನೆ” ಚಿತ್ರವನ್ನು ನವೀನ್ ಮಯೂರ್, ನಂದಿತಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡ ಚಿತ್ರವನ್ನು ತೆಗೆದಿದ್ದರು. ಆದರೆ ದುರದೃಷ್ಟ ಈ ಚಿತ್ರ ಬಂದದ್ದು ಗೊತ್ತಾಗಲಿಲ್ಲ, ಹೋದದ್ದು ಗೊತ್ತಾಗಲಿಲ್ಲ. ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಹೀಗೆ ಬಂದು ಹಾಗೆ ಮಂಗಮಾಯವಾಯಿತು. ಅದು ಕಳೆದು ಈಗಾಗಲೇ 6 ವರ್ಷವಾಗಿದೆ.

[ad_468x60]

ಈಗ ಗೋವಿಂದಾಯ ನಮಃ ಚಿತ್ರಕ್ಕೂ ಅವ್ನಂದ್ರೆ ಅವ್ನೆ ಚಿತ್ರಕ್ಕೂ ಏನು ಸಂಬಂಧ ಅಂತ ಯೋಚಿಸುತ್ತಿದ್ದೀರಾ ? ಸಂಬಂಧ ಇಷ್ಟೆ, ಅವ್ನಂದ್ರೆ ಅವ್ನೆ ಚಿತ್ರದ ಕಥೆಯನ್ನು ಕದ್ದು ಗೋವಿಂದಾಯ ನಮಃ ಚಿತ್ರವನ್ನು ಮಾಡಿದ್ದಾರೆ ಎಂದು ಅವ್ನಂದ್ರೆ ಅವ್ನೆ ನಿರ್ದೇಶಕ ವೇಣುಗೋಪಾಲ್ ಆರೋಪಿಸಿದ್ದಾರೆ ಹಾಗೂ ನಿರ್ದೇಶಕರ ಸಂಘಕ್ಕೂ ದೂರು ನೀಡಿದ್ದಾರೆ.

ಕೆಲವು ಚಿಕ್ಕಪುಟ್ಟ ದೃಶ್ಯಗಳನ್ನು ಬದಲಾಯಿಸಿರುವುದನ್ನ ಬಿಟ್ಟರೆ, ನಿರ್ದೇಶಕ ಪವನ್ ಒಡೆಯರ್ ’ಅವ್ನಂದ್ರೆ ಅವ್ನೆ’ ಚಿತ್ರವನ್ನೇ ನೇರವಾಗಿ ತಮ್ಮ ಗೋವಿಂದಾಯ ನಮಃ ಚಿತ್ರಕ್ಕೆ ಭಟ್ಟಿ ಇಳಿಸಿಕೊಂಡಂತಿದೆ. ಈ ಕುರಿತಾಗಿ ಗೋವಿಂದಾಯ ನಮಃದ ನಿರ್ಮಾಪಕ ಸುರೇಶ್‌ರ ಜೊತೆ ಮಾತಾಡಿದ್ದೇನೆ. ಆದರೆ ಅವರೂ ಸರಿಯಾಗಿ ಸ್ಪಂದಿಸುತ್ತಿಲ್ಲ, ಹಾಗಾಗಿ ನಿರ್ದೇಶಕರ ಸಂಘಕ್ಕೆ ಮೊರೆ ಹೋಗಿದ್ದು, ನನಗೆ ಇಲ್ಲಾದರೂ ನ್ಯಾಯ ಒದಗುತ್ತದೆ ಎಂಬ ನಂಬಿಕೆಯಲ್ಲಿದ್ದೇನೆ ಎಂದರು ವೇಣುಗೋಪಾಲ್. ಅಷ್ಟೆ ಅಲ್ಲ, ಅವರೀಗ ಆ ಚಿತ್ರದ ಡಿವಿಡಿಯನ್ನೂ ದೂರಿನ ಜೊತೆ ಲಗತ್ತಿಸಿ ನಿರ್ದೇಶಕರ ಸಂಘದ ನ್ಯಾಯ ತೀರ್ಮಾನಕ್ಕೆ ಎದುರು ನೋಡುತ್ತಿದ್ದಾರೆ.

ಈಗ ಎಲ್ಲರ ಕಣ್ಣು ನಿರ್ದೇಶಕರ ಸಂಘದ ಅದ್ಯಕ್ಷ ಎಮ್. ಎಸ್. ರಮೇಶ್‌ರವರ ಮೇಲ್ಲಿದ್ದು, ಏನು ಕ್ರಮ ತೆಗೆದುಕೊಳ್ಳುತ್ತಾರೆಂಬುದು ಕಾದು ನೋಡಬೇಕಿದೆ.

ಅಣ್ಣಾಬಾಂಡ್ ಚಿತ್ರದ ವಿವಾದ : Annabond Movie Controversy

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech