Close X

ಭಾರತಕ್ಕೂ ತಟ್ಟೀತೂ ಇಂಡೋನೇಷ್ಯಾದ ಭೂಕಂಪ – ಸುನಾಮಿ ಭೀತಿ

ಬುಧವಾರ ಮಧ್ಯಾಹ್ನ 2:30ರ ಸುಮಾರಿಗೆ ಬೆಂಗಳೂರು ನಗರ ಸೇರಿ ಭಾರತದ ಹಲವಾರು ಕಡೆಗಳಲ್ಲಿ ಭೂಕಂಪನ ಸಂಬವಿಸಿದೆ. ಇಂಡೋನೇಷ್ಯಾದಲ್ಲಿ ಅದೇ ಸುಮಾರಿಗೆ ಕಾಣಿಸಿಕೊಂಡಿರುವ ತೀವ್ರ ಭೂಕಂಪದ ರಿಕ್ಟರ್ ಮಾಪಕದಲ್ಲಿ 8.9 ತೋರಿಸಿದೆ. ಇಂಡೋನೇಷ್ಯಾದ ಪ್ರಾಂತೀಯ ರಾಜಧಾನಿ ಬಂಡಾ ಏಕ್ ದಿಂದ 33 ಕಿಮೀ ದೂರದಲ್ಲಿ ಸಾಗರ ಗರ್ಭದಲ್ಲಿ ಭೂಕಂಪದ ಕೇಂದ್ರವಿತ್ತು ಎಂದು ತಜ್ಞರು ತಿಳಿಸಿದ್ದಾರೆ.  ಇದರಿಂದ ಸುನಾಮಿ ಅಪಾಯದ ಎಚ್ಚರಿಕೆಯನ್ನು Indonesia, India, Sri Lanka, Australia, Myanmar, Thailand, Maldives, Malaysia, Pakistan, Somalia, Oman, Iran, Bangladesh, Kenya, South Africa and Singapore ಈ ಎಲ್ಲಾ ರಾಷ್ಟ್ರಗಳಿಗೆ ರವಾನಿಸಿದೆ. 28 ರಾಷ್ಟ್ರಗಳಲ್ಲಿ ಸುನಾಮಿಯ ಭೀತಿ ಎದುರಾಗಿದ್ದು, ಕಡಲ ತೀರದ ಜನರಿಗೆ ಎಚ್ಚರಿಕೆಯನ್ನು ಕೊಡಲಾಗಿದೆ.

[ad_468x60]

indonesia-earthquake1142012ವಿವಿಧ ಕಡೆಗಳಿಂದ ಬಂದ ವರದಿಗಳ ಪ್ರಕಾರ ಚೆನ್ನೈ, ಕೋಲ್ಕತ್ತ ನಗರಗಳಲ್ಲೂ ಭೂಕಂಪದ ಅನುಭವವಾಗಿದೆ. ಬೆಂಗಳೂರಿನಲ್ಲಿ ಮಹಾತ್ಮಾ ಗಾಂಧಿ ರಸ್ತೆ, ಗಂಗಾನಗರ, ಸುಲ್ತಾನ ಪಾಳ್ಯ, ಆರ್.ಟಿ. ನಗರಗಳಲ್ಲಿ ಭೂಕಂಪದ ಅನುಭವವಾಗಿದ್ದು ಆಫೀಸುಗಳಲ್ಲಿದ್ದ ಜನ ಕಟ್ಟಡಗಳಿಂದ ಹೊರಕ್ಕೆ ಓಡಿ ಬಂದರು. ಕೋಲ್ಕತ್ತ, ಚೆನ್ನೈ ನಗರಗಳಲ್ಲೂ ಭೂಕಂಪದ ಅನುಭವ ಆಗುತ್ತಿದ್ದಂತೆಯೇ ಮಹಡಿಗಳಲ್ಲಿದ ಜನ ರಸ್ತೆಗೆ ಓಡಿ ಬಂದರು.

ಭೂಕಂಪದ ಅನುಭವವಾದ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ಮೆಟ್ರೋರೈಲು ಸಂಚಾರ ಸ್ಥಗಿತಗೊಳಿಸಿದ ಬಗ್ಗೆ ವರದಿ ಬಂದಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech