Close X

ಡಾ.ರಾಜ್ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು

ನಾಳೆ ಕನ್ನಡ ಜನಕೋಟಿಗೆ ಸುದಿನ. ಅಣ್ಣಾವ್ರ ಹುಟ್ಟಿದ ದಿನ ಏಪ್ರಿಲ್ 24 2012. ಡಾ. ರಾಜ್ ಕುಮಾರ್‌ಗೆ ನಾಳೆಗೆ 84 ವರ್ಷ ತುಂಬುತ್ತದೆ. ಅವರ 84ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕನ್ನಡ ಸಿನಿಮಾ ಉದ್ಯಮದಿಂದ ಐವರು, ಕ್ರೀಡೆಯಿಂದ ಒಬ್ಬರು, ಮತ್ತೊಬ್ಬ ಕನ್ನಡ ಚಲನಚಿತ್ರ ಪತ್ರಕರ್ತರಿಗೆ ತಲಾ ಇಪ್ಪತೈದು ಸಾವಿರ (Rs. 25000) ನಗದುನ್ನು ಕೊಟ್ಟ ಗೌರವಿಸಲಾಗುವುದು. Dr. Rajkumar ಅಭಿಮಾನಿಗಳ ಸಂಘದ ಹುಟ್ಟು ಹಬ್ಬ ಆಚಾರಣೆಯನ್ನು ನೆರವೇರಿಸಲು ಅವರ ಸ್ಮಾರಕ ಸ್ಥಳ ಕಂಠೀರವ ಸ್ಟೂಡಿಯೋನಲ್ಲಿ ದೊಡ್ಡ ವ್ಯವಸ್ಥೆಯನ್ನು ಮಾಡಿದೆ.

Rajkumar-Smaraka[ad_468x60]

ಕನ್ನಡ ಸಿನಿಮಾ ಲೋಕದ – ಸುಮ, ಶನಿಮಹದೇವಪ್ಪ, ಎ. ಟಿ. ರಘು, ಸದಾಶಿವ ಬ್ರಹ್ಮಾವರ್ ಮತ್ತು ಎಂ. ಎನ್. ಲಕ್ಷ್ಮಿ ದೇವಿ ಗೌರವವನ್ನು ಪಡೆಯಲಿದ್ದಾರೆ ಎಂದು ಘೋಷಿಸಿದೆ. ಇವರುಗಳ ಜೊತೆ, ಒಂದು ಹಿರಿಯ ಕನ್ನಡ ಚಲನಚಿತ್ರ ಪತ್ರಕರ್ತ ರಾಮಚಂದ್ರ ಮತ್ತು ಕ್ರೀಡಾ ವ್ಯಕ್ತಿ ಗೋಪಾಲಕೃಷ್ಣ ತಲಾ ರೂ. 25000 ರೂಪಾಯಿಯ ಫಲಾನುಭವಿಗಳೆಂದು ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘ ಘೋಷಿಸಿದೆ.

Dr. Rajkumar ಅಭಿಮಾನಿಗಳ ಸಂಘದ ಅದ್ಯಕ್ಷ ಸ. ರಾ. ಗೋವಿಂದು ಮಾಧ್ಯಮವನ್ನು ಉದ್ದೇಶಿಸಿ ರಾಜ್ ಸ್ಮಾರಕ ಕೆಲಸದ ವೇಗವನ್ನು ಹೆಚ್ಚಿಸಲು ಮತ್ತು ಈ ವರ್ಷ ಕನ್ನಡ ರಾಜ್ಯೋತ್ಸವದ ದಿನದಂದು ಉದ್ಘಾಟನಾ ವ್ಯವಸ್ಥೆಯನ್ನು ಮಾಡಲು ಸರ್ಕಾರವನ್ನು ಒತ್ತಾಯಿಸಿದರು.

ಏಪ್ರಿಲ್ 24ರಂದು ಡಾ. ರಾಜ್ ಸ್ಮಾರಕವನ್ನು ವೀಕ್ಷಿಸಲು ಸುಮಾರ 30000 ಜನರನ್ನು ನಿರೀಕ್ಷಿಸಲಾಗಿದ್ದು, ಅವರೆಲ್ಲರಿಗೂ “ಲಡ್ಡು, ರೈಸ್ ಬಾತ್ ಮತ್ತು ಮೊಸರನ್ನ”ದ ವ್ಯವಸ್ಥೆಯನ್ನು ಮಾಡಲಾಗಿದೆ. ನಿರ್ಮಾಪಕರಾದ ಬಿ. ಪಿ. ತ್ಯಾಗರಾಜು ಮತ್ತು ಕೆ. ಪಿ. ಶ್ರೀಕಾಂತ್ ಆ ದಿನದ ಊಟದ ವ್ಯವಸ್ಥೆಗಾಗಿ 9 ಕೌಂಟರುಗಳನ್ನು ಸಜ್ಜುಗೊಳಿಸಿದ್ದಾರೆ.

ಉಚಿತ ಆರೋಗ್ಯ, ಕಣ್ಣಿನ ಶಿಬಿರ, ರಕ್ತದಾನ ಚಟುವಟಿಕೆಗಳನ್ನು ಹತ್ತಿರದ ಪ್ರತ್ಯೇಕ ಸ್ಥಳದಲ್ಲಿ ನಡೆಯುವಂತೆ ತಯಾರಿಸಲಾಗಿದೆ.

ಮಾಧ್ತಮವನ್ನು ಉದ್ದೇಶಿಸುವಾಗ ಸಂಘಟಕರಾದ ಶಾಂತರಾಜು, ಶ್ರೀಕಾಂತ್, ರಾಮಣ್ಣ, ಬಿಪಿ ತ್ಯಾಗರಾಜು, ನಾಗರಾಜ್, ಯತೀಶ್, ರಘು ಹಾಜರಿದ್ದರು.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech