Close X

ಮೇ 11ಕ್ಕೆ ಬ್ರೇಕಿಂಗ್ ನ್ಯೂಸ್ – Breaking News

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ “ಬ್ರೇಕಿಂಗ್ ನ್ಯೂಸ್” ಚಿತ್ರವೂ ಮೇ 11ರಂದು ಬಿಡುಗಡೆಯಾಗಲಿದೆಯಂದು ಸುದ್ಧಿಬಂದಿದೆ. ಅಜಯ್ ರಾವ್ ಮತ್ತು ರಾಧಿಕಾ ಪಂಡಿತ್ ನಟಿಸಿರುವ “ಬ್ರೇಕಿಂಗ್ ನ್ಯೂಸ್” ಬ್ರೇಕಿಂಗ್ ನ್ಯೂಸ್ ಆಗಲಿ ಎಂದು ಹಾರೈಸುವ ಕನ್ನಡಹನಿಗಳ ಬಳಗ.

breaking-news-release-may-11

ಈ ತಿಂಗಳ ಕೊನೆಯಲ್ಲಿ ಚಿತ್ರಕ್ಕೆ ಸೆನ್ಸಾರ್ ಸಿಗುಲಿದ್ದು, ನಾಗತಿಹಳ್ಳಿ ಮೇಷ್ಟು ಚಲನಚಿತ್ರದ ಪೂರ್ವ ಬಿಡುಗಡೆ ಪ್ರಚಾರಕ್ಕೆ ಗಂಭೀರ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಪ್ರಸ್ತುತ ಮೇಷ್ಟು ಪಾಣಿ ಕಲ್ಯಾಣ ಮಂಡಳಿಯ ಅನುಮತಿಯನ್ನು ಪಡೆಯುವಲ್ಲಿ ಕೇಂದ್ರೀಕೃತವಾಗಿದ್ದು, ತದನಂತರ ಸೆನ್ಸಾರ್ ಬೋರ್ಡ್‌ನಿಂದ ಪ್ರಮಾಣಪತ್ರವನ್ನು ಪಡೆಯಲು ಮುಂದಾಗುತ್ತಾರೆ.

ಬ್ರೇಕಿಂಗ್ ನ್ಯೂಸ್ ಅಂದರೆ ಟಿ.ವಿ ಚಾನಲ್‌ಗಳು, ನ್ಯೂಸ್ ಚಾನಲ್‌ಗಳು ಸಂವೇದನಾ ಸುದ್ದಿಯನ್ನು ಪ್ರಕಟಿಸುವುದು. ಆದರೆ ಈಗಿನ ನ್ಯೂಸ್ ಚಾನಲ್‌ಗಳು ತಮ್ಮ ತಮ್ಮ ಚಾನಲ್ TRP ಹೆಚ್ಚಲೆಂದು ಸಣ್ಣ ಸುದ್ಧಿಗಳನ್ನು ಸಂವೇದನಾ ಸುದ್ದಿಗಳಾಗಿ ಪರಿವರ್ತಿಸಿ ಎಲ್ಲರ ಗಮನವನ್ನು ಸೆಳೆಯುತ್ತಿವೆ. ಚಿತ್ರದ ಒಂದು ವಿಶೇಷವೆಂದರೆ ಪ್ರೇಕ್ಷಕರಿಗೆ ನಗು ಹಾಗೂ ಮುದ ತರಿಸುವ ಹಾಸ್ಯವನ್ನು ಮೂಡಿಸುವ ಅನೇಕ ಪರಿಣಿತರಾದ ಹಾಸ್ಯ ನಟರನ್ನು ಹೊಂದಿದೆ.

ಚಿತ್ರಕ್ಕೆ ಕ್ಯಾಮರಾಮನ್ ಕೃಷ್ಣಕುಮಾರ್, ಸಂಪಾದಕ ಬಸವರಾಜ್ ಅರಸ್ ಮತ್ತು ಕಲಾ ನಿರ್ದೇಶಕ ಅರುಣ್ ಸಾಗರ್‌ರಂತಹ ಉನ್ನತ ತಾಂತ್ರಿಕವರ್ಗದ ಬೆಂಬಲವನ್ನು ಹೊಂದಿದೆ. ಪ್ರವೀಣ್ ಸ್ಟೀಫನ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಧ್ವನಿಸುರಳಿಯನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಮಾರುಕಟ್ಟೆಯಲ್ಲಿ ಲಭ್ಯವಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech