Close X

ಅಣ್ಣಾಬಾಂಡ್ ಚಿತ್ರ ಮತ್ತೊಂದು ಸುದ್ದಿಯಲ್ಲಿ – ವಿತರಣೆ ಹಕ್ಕು 16 ಕೋಟಿಗೆ ಮಾರಾಟ ನಿಜವೇ ?

ಅಣ್ಣಾಬಾಂಡ್ ಚಿತ್ರ ಮತ್ತೊಂದು ಸುದ್ದಿಯಲ್ಲಿದೆ. ಆದರೆ ಇದು ಒಳ್ಳೆಯ ಸುದ್ದಿಯಲ್ಲ :( ಇದೊಂದು ವಿವಾದಕ್ಕೆ ತಿರುಗಬಹುದಾದ ಸುದ್ದಿ. ಈಗಾಗಲೇ ಭೀಮಾತೀರದಲ್ಲಿ ಚಿತ್ರದ ವಿವಾದ ತಾರಕಕ್ಕೆ ಮುಟ್ಟಿದ್ದು ಇನ್ನೂ ಅದರ ಬಿಸಿ ಆರಿಯೇ ಇಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ. ಅಣ್ಣಾಬಾಂಡ್ ಚಿತ್ರದ ಈ ಸುದ್ದಿಯೇನೆಂದರೆ, ಈ ಚಿತ್ರದ ವಿತರಣೆ ಹಕ್ಕು ನಿಜವಾಗಿಯೂ 16 ಕೋಟಿಗೆ ಮಾರಾಟವಾಗಿದೆಯಾ ?

ಕೆಲವು ಸುದ್ದಿ ಮೂಲಗಳ ಪ್ರಕಾರ ಸುಳ್ಳು ಎಂದು ತಿಳಿದುಬಂದಿದೆ. ಸಾಕಷ್ಟು ದಿನಗಳ ಹಿಂದೆಯೇ ಈ ಚಿತ್ರದ ವಿತರಣೆ ಹಕ್ಕನ್ನು ತೆಗೆದುಕೊಂಡಿದ್ದೇನೆ ಎಂದು ಪ್ರಸಾದ್ ಹೇಳಿದ್ದರು. ಆದರೆ ಅವರು ಹೇಳಿದ್ದು ಸುಳ್ಳು ಎನ್ನಲಾಗುತ್ತಿದೆ. ಇದಕ್ಕೆ ಸಾಕ್ಷಿ ಇತ್ತೀಚಿಗೆ ನಡೆದ ಅಣ್ಣಾಬಾಂಡ್ ಆಡಿಯೋ ಬಿಡುಗಡೆ ಕಾರ್ಯಕ್ರಮ.

[ad_468x60]

annabondಚಿತ್ರದ ನಿರ್ಮಾಪಕರಾದ ರಾಘವೇಂದ್ರ ರಾಜ್ ಕುಮಾರ್, “ಈ ಚಿತ್ರವನ್ನು ಪ್ರಸಾದ್ ಜೊತೆ ಪಾಲುದಾರಿಕೆಯಲ್ಲಿ ಬಿಡುಗಡೆ ಮಾಡುತ್ತೇನೆ” ಎಂದು ಹೇಳಿದ್ದಾರೆ.

ಈ ವಿಷಯಕ್ಕೆ ಪ್ರಸಾದ್ “ಆ ಚಿತ್ರವನ್ನು 16 ಕೋಟಿ ರು. ಗೆ ಮಾತಾಡಿದ್ದು ಹೌದು. ಈಗಾಗಲೇ ಅಡ್ವಾನ್ಸ್ ಸಹ ಕೊಟ್ಟಾಗಿದೆ. ಆದರೆ ಅಗ್ರಿಮೆಂಟ್ ಆಗಿಲ್ಲ” ಎಂದಿದ್ದಾರೆ. ಅಗ್ರಿಮೆಮಟ್ ಇಲ್ಲದೆಯೇ ಅಷ್ಟು ದೊಡ್ಡ ವ್ಯವಹಾರ ನಡೆದದ್ದು ಹೇಗೆ? ಮಾಧ್ಯಮಗಳಲ್ಲೂ 16 ಕೋಟಿಗೆ ವಿತರಣೆ ಹಕ್ಕು ಸೇಲಾಗಿದೆ ಎಂಬುದು ಜಗಜ್ಜಾಹೀರಾಗಿದ್ದರೂ ಚಿತ್ರತಂಡ ಯಾಕೆ ಮೌನವಾಗಿದೆ?

ಈ ಎಲ್ಲ ಪ್ರಶ್ನೆಗಳಿಗೆ ನೈಜ ಉತ್ತರಕ್ಕಾಗಿ ಎಲ್ಲರೂ ಪ್ರಸಾದ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಕಡೆ ನೋಡುತ್ತಿದ್ದಾರೆ. ಉತ್ತರ ಸಿಗಬಹುದು ಎಂಬ ನಿರೀಕ್ಷೆ ಕೂಡ ಎಲ್ಲರಲ್ಲಿದೆ.

ಒಟ್ಟಿನಲ್ಲಿ ಬಿಡುಗಡೆ ಸಮೀಪಿಸುತ್ತಿರುವ ವೇಳೆಯಲ್ಲಿ ಅಣ್ಣಾಬಾಂಡ್ ಚಿತ್ರ ಗಿಮ್ಮಿಕ್ ಗಳ ಸುದ್ದಿ ಮಾಡದಿರಲಿ. ಪ್ರೇಕ್ಷಕ ಮಹಾಷಯ, ಒಳ್ಳೆಯ ಚಿತ್ರವನ್ನೂ ಎಂದೂ ಕಡೆಗಣಿಸುವುದಿಲ್ಲ. ಚಿತ್ರವೂ ಏಪ್ರಿಲ್ ತಿಂಗಳ ಅಂತ್ಯದಲ್ಲಿ ಬಿಡುಗಡೆಯಾಗುತ್ತಿದೆ.

ಸುದ್ದಿ ಮೂಲ : ಒನ್ ಇಂಡಿಯಾ

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech