Close X

ಅಣ್ಣಾಬಾಂಡ್ ಚಿತ್ರದ ಧ್ವನಿಸುರುಳಿ ಬಿಡುಗಡೆ

anna-bond-audio-release-12ಸೋಮವಾರದ ಸಂಜೆಯಂದು ನೂರು ಚಿತ್ರಗಳ ಸ್ಯಾಂಡಲ್‌ವುಡ್ ಸರದಾರ ಶಿವರಾಜ್‌ಕುಮಾರ್ ಬಹು ಹುಮ್ಮಸ್ಸು ಮತ್ತು ಹೆಚ್ಚು ಶಕ್ತಿಯೊಂದಿಗೆ ತಮ್ಮ ಸಹೋದರ ಪವರ್ ಸ್ಟಾರ್ ಪುನೀತ್ ರೊಂದಿಗೆ ಕಾಣಿಸಿಕೊಂಡರು. ಏತಕ್ಕೆ ಎಂದುಕೊಂಡಿರಾ ? ಅದೇ ರೀ ನಮ್ಮೆಲ್ಲರ ಬಹು ನಿರೀಕ್ಷಿತ ಚಿತ್ರ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಅಣ್ಣಾಬಾಂಡ್ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ :) ದೀರ್ಘವಾದಿ ನಂತರ ಇಂತಹ ಚಿತ್ರ ಕಾರ್ಯಕ್ರಮವೊಂದಕ್ಕೆ ಬಂದಿದ್ದ ತಮ್ಮ ತಾಯಿ ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್ ರೊಂದಿಗೆ ಫೋಟೋ ಸೆಶನ್ ನಡೆಯಿತು.

ಇವರುಗಳೊಂದಿಗೆ ಶ್ರೀಮತಿ ಲಕ್ಷ್ಮಿ ಗೋವಿಂದರಾಜು ಮತ್ತು ಶ್ರೀಮತಿ ಶಾಂತಮ್ಮ ಕೂಡ ಕುಳಿತ್ತಿದ್ದರು. ಎನರ್ಜಿ ಸ್ಟಾರ್ ಶಿವರಾಜ್‌ಕುಮಾರ್ ಲೀ ಮೆರಿಡಿಯನ್‌ಗೆ ಬರುತ್ತಿದ್ದಂತೆಯೇ ಡಾ ರಾಜ್ ಕುಟುಂಬದ ಆದಾರ ಸ್ತಂಭ ರಾಘವೇಂದ್ರ ರಾಜ್‌ಕುಮಾರ್ ಮೈಕ್ ಹಿಡಿದು ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವನ್ನು ಶುರುಮಾಡಿದರು.

ಶಿವಣ್ಣ ಬಹು ಕಾತುರತೆಯಿಂದ ಚಿತ್ರವನ್ನು ಮತ್ತು ತಮ್ಮ ಸಹೋದರ ಪವರ್ ಸ್ಟಾರ್‌ರ ಪವರ್ ನೋಡಲು ನಿರೀಕ್ಷಿಸುತ್ತಿರುವುದನ್ನು ಹೇಳಿಕೊಂಡರು. ಈ ಮೊದಲು ಪುನೀತ್‌ನ ಅರಸು ಚಿತ್ರವನ್ನು ನೋಡಿದಾಗ ನನಗೆ ಅವನಲ್ಲಿ ನಮ್ಮ ತಂದೆಯವರಾದ ರಾಜ್‌ಕುಮಾರ್ ಕಾಣಿಸಿದರು ಎಂದು ವಿವರಿಸಿದರು. ಪೂರ್ಣಿಮಾ ಎಂಟರ್ಪ್ರೈಸಸ್ ಮತ್ತು ನನ್ನ ತಾಯಿ ನಿರ್ಮಾಪಕರಾಗಿರುವುದರಿಂದ ಎಲ್ಲವೂ ಉತ್ತಮವಾಗಿ ಮೂಡಿಬಂದಿದೆ ಮತ್ತು ಭರ್ಜರಿ ಯಶಸ್ಸು ಕಾಣಲಿದೆ ಎಂದು ಅಭಿಪ್ರಾಯ ಪಟ್ಟರು.

ಈ ಸಮಾರಂಭದಲ್ಲಿ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌‌ಕುಮಾರ್, ಹೀರೋ ಪುನೀತ್ ರಾಜ್‌ಕುಮಾರ್, ತಾಯಿ ಪಾರ್ವತಮ್ಮ ರಾಜ್‌ಕುಮಾರ್, ರಾಕ್‌ಲೈನ್ ವೆಂಕಟೇಶ್, ದೊರೈಭಗವಾನ್, ನಿರ್ದೇಶಕ ಸೂರಿ, ನಟಿ ಪ್ರಿಯಾಮಣಿ, ಜಯಂತ್ ಕಾಯ್ಕಿಣಿ ಮುಂತಾದವರೂ ಪಾಲ್ಗೊಂಡಿದ್ದರು.

Audio Release Photos :

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech