Close X

ಐಶ್ವರ್ಯ ನಾಗ್ “ಪಟಾಯಿಸು” ಚಿತ್ರದ ಮೂಲಕ ಮತ್ತೊಮ್ಮೆ ಕಾಣಿಸಿಕೊಳ್ಳಲಿದ್ದಾರೆ !

ಮಂಗಳೂರು ಮೂಲದ ಬಹು ನಿರೀಕ್ಷೆಯ ಆಶಾದಾಯಕ ಕನ್ನಡದ ನಟಿ ಐಶ್ವರ್ಯ ನಾಗ್ ಮತ್ತೊಮ್ಮೆ “ಪಟಾಯಿಸು” ಚಿತ್ರದ ವಾಪಸ್ ಬರುತ್ತಿದ್ದಾರೆ. ಈ ಮೊದಲು ಕಳ್ಳ ಮಂಜ ಚಿತ್ರದ ಮೂಲಕ ಮಿಂಚಿದ ನಟಿ, ದರೋಡೆ, ನೀನೇ ನೀನೆ, ಜಾಲಿ ಡೇಸ್ ಚಿತ್ರಗಳಲ್ಲಿ ನಟಿಸಿದ್ದಳು. ಇತರೆ ಭಾಷೆ ಚಿತ್ರಗಳಲ್ಲಿ ಒಂದು ಪ್ರಯತ್ನದ ನಂತರ ಅವರು ಮತ್ತೊಮೆ ಕನ್ನಡ ಚಿತ್ರ “ಪಟಾಯಿಸು” ಮೂಲಕ ತನ್ನ ತಾಯ್ನೆಲಕ್ಕೆ ವಾಪಸ್ಸ್ ಆಗಿದ್ದಾರೆ.

aishwaraya-nag-kannada-movie-pataisu

ಶಿರಡಿ ಸಾಯಿ ಸಿನಿ ವಿಷನ್ ಪ್ರೋಡಕ್ಷನ್‌ನ ರಾಘವೇಂದ್ರ ಚಿತ್ರದ ನಿರ್ಮಾಪಕರು. ಕರ್ನಾಟಕದ ಹಲಾವಾರು ಕಡೆ 40ದಿನಗಳ ಚಿತ್ರೀಕರಣವನ್ನು ನಡೆಸಿದ್ದು, ಸಂಭಾಷಣೆಯಿರುವ ತುಣುಕುಗಳನ್ನು ಚಿತ್ರೀಕರಿಸಲಾಗಿದೆ.

ಕನ್ನಡ ಸಿನಿಮಾದ ಪ್ರಖ್ಯಾತ ನಟ ಸುದೀರ್‌ರ ಮಗ ನಂದಕಿಶೋರ್ ತಮ್ಮ ಚೊಚ್ಚಲ ಚಿತ್ರದ ನಿರ್ದೇಶನಮಾಡುತ್ತಿದ್ದಾರೆ. ಗುರುಶಕ್ತಿಯವರು ಚಿತ್ರಕ್ಕೆ ಕಥೆಯನ್ನು ಒದಗಿಸಿದ್ದು, ಶ್ರೀಧರ್ ಸಂಬ್ರಮ್ ಸಂಗೀತ ಮತ್ತು ಶೇಖರ್ ಚಂದ್ರು ಛಾಯಾಗ್ರಹಣ ಚಿತ್ರಕ್ಕಿದೆ. ರವಿ ವರ್ಮ ಸಾಹಸ್ ನಿರ್ದೇಶನವನ್ನು ಮಾಡಿದ್ದಾರೆ.

ಹಿರಿಯ ನಟಿ ಶೃತಿ, ಸಾಧು ಕೋಕಿಲ, ನೀನಾಸಂ ಅಶ್ವಥ್, ಸತ್ಯಜಿತ್ ಮುಂತಾದವರೂ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಒಂದು ವಿಶೇಷ ಸುದ್ದಿಯೆಂದರೆ, ನಮ್ಮ ನಿಮ್ಮೆಲ್ಲರ ಕಿಚ್ಚ್ ಸುದೀಪ್ ಪಟಾಯಿಸು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. :) :)

[ad_250x250]

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech