Close X

19ರವರೆಗೆ ರಾಮನಗರದಲ್ಲಿ ಟೋಪಿವಾಲಾ ಶೂಟಿಂಗ್

ಸೂಪರ್ ಸ್ಟಾರ್ ಉಪೇಂದ್ರ ನಟಿಸುತ್ತಿರುವ “ಟೋಪಿವಾಲಾ” ಚಿತ್ರವು ತನ್ನ ಶೂಟಿಂಗ್‌ನ್ನು ಸೋಮವಾರದಿಂದ ರಾಮನಗರದ ಬೆಟ್ಟಗಳ ಮಧ್ಯೆ ಆರಂಭಿಸಿದೆ. ಚಿತ್ರ ತಂಡವು ಸೋಮವಾರ ಬೆಳಗ್ಗೆ ಚಿತ್ರದ ಆರಂಭಿಕ ಮುಹೂರ್ತವನ್ನು ಚಾಮರಾಜಪೇಟೆಯ ಮಹದೇಶ್ವರ ದೇವಸ್ಥಾನದಲ್ಲಿ ಜರುಗಿತು. ತದನಂತರ ಚಿತ್ರ ತಂಡದ ಎಲ್ಲಾ ಕಾರ್ಯಕರ್ತರು ರಾಮನಗರಕ್ಕೆ ತೆರಳಿ ಶೂಟಿಂಗ್ ಪ್ರಾರಂಭಿಸಿತು. ರಾಮನಗರದ ಬೆಟ್ಟಗಳ ಮಧ್ಯೆ ಚಿತ್ರದ ಪ್ರಮುಖ ದೃಶ್ಯಗಳನ್ನು ಶೂಟಿಂಗ್ ಮಾಡಿತು. ನಟರಾದ ರವಿಶಂಕರ್, ರಂಗಾಯಣ ರಘು ಮುಂತಾದವರು ಪಾಲ್ಗೊಂಡಿದ್ದರು.

6 ದಿನಗಳ ಶೂಟಿಂಗ್‌ನ್ನು ರಾಮನಗರದಲ್ಲಿ ಮಾಡಲು ಸಜ್ಜುಗೊಂಡಿದೆ ಟೋಪಿವಾಲಾ ಚಿತ್ರ ತಂಡ. ಕನಕಪುರ ಶ್ರೀನಿವಾಸ್ ಮತ್ತು ಕೆ. ಪಿ. ಶ್ರೀನಾಥ್ ಚಿತ್ರವನ್ನು ನಿರ್ಮಿಸುತ್ತಿದ್ದು, ಭಾವನ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಪೇಂದ್ರ ಮತ್ತು ಭಾವನ ಇಬ್ಬರೂ ಶೂಟಿಂಗ್ ತಂಡವನ್ನು ಗುರುವಾರದಿಂದ ಸೇರಿಕೊಳ್ಳಲಿದ್ದಾರೆ.

ಉಪೇಂದ್ರರವರು ಗಾಡ್‌ಫಾದರ್ ಮತ್ತು ಕಠಾರಿ ವೀರ ಸುರ ಸುಂದರಾಗ್ನಿ ಚಿತ್ರಗಳ ಶೂಟಿಂಗ್‌ನ್ನು ಮುಗಿಸಿದ್ದು, ಈ ಎರಡೂ ಚಿತ್ರಗಳು ಮುಂದಿನ ಎರಡು ತಿಂಗಳಲ್ಲಿ ಬಿಡುಗಡೆ ಗೊಳ್ಳಲಿದೆ. ಸದ್ಯಕ್ಕೆ ಉಪೇಂದ್ರರವರು ತೆಲುಗಿನ ಕಾಂಚನಾ ಚಿತ್ರದ ರೀಮೇಕ್ ಚಿತ್ರ ಕಲ್ಪನಾದಲ್ಲಿ ನಟಿಸುತ್ತಿದ್ದು, ಶೂಟಿಂಗ್ ನಡೆಯುತ್ತಿದ್ದೆ. ರಾಮ್ ನಾರಾಯಣ್ ಕಲ್ಪನಾ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಸೂಪರ್ ಸ್ಟಾರ್ ಉಪೇಂದ್ರರವರ ಅಭಿಮಾನಿಗಳು ಅವರು ತೆರೆಯ ಮೇಲೆ ನೋಡಲು ಸಂತಸದಿಂದ ಕಾಯುತ್ತಿದ್ದಾರೆ. ಗಾಡ್‌ಫಾದರ್, ಕಠಾರಿ ವೀರ ಸುರ ಸುಂದರಾಗ್ನಿ, ಟೋಪಿವಾಲಾ ಮತ್ತು ಕಲ್ಪನಾ ಚಿತ್ರದೊಂದಿಗೆ ಉಪೇಂದ್ರರವರನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳ ಉತ್ಸುಕದಿಂದಿದ್ದಾರೆ.

ಉಪೇಂದ್ರ ಅಭಿಮಾನಿಗಳು ಅವರನ್ನು ನೋಡಲು ರಾಮನಗರಕ್ಕೆ ಭೇಟಿಕೊಡಬಹುದು :) :)

Topiwala

Katari-Veera-Surasundarangi-2012-Kannada-3D-Movie

Kalpana

GodFather

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech