Close X

“ಮೈನಾ”ದಲ್ಲಿ ಸುಮನ್ ರಂಗನಾಥ್ ಲೇಡಿ ಪೋಲೀಸ್

suman_ranganathanನಮ್ಮ ನಿಮ್ಮೆಲ್ಲರ ಮೆಚ್ಚಿನ ನಟಿ ಸುಮನ್ ರಂಗನಾಥ್ ಮತ್ತೊಮ್ಮೆ ತೆರೆಯ ಮೇಲೆ ಮಿಂಚಲಿದ್ದಾರೆ ಪೋಲೀಸ್ ಪಾತ್ರದೊಂದಿಗೆ ನಾಗಶೇಖರ್ ನಿರ್ದೇಶಿಸುತ್ತಿರುವ ಮೈನಾ ಚಿತ್ರದ ಮೂಲಕ. “ಇಂತಹ ಪಾತ್ರವೊಂದನ್ನು ನಾನು ಮಾಡಿಯೇ ಇಲ್ಲ. ಇದೊಂದು ಸವಾಲಿನ ಪಾತ್ರವಾಗಿದೆ. ಇದನ್ನು ನಾನು ಸರಿಯಾಗಿ ನಿಭಾಯಿಸುತ್ತೇನೆ ಎಂಬ ಭರವಸೆ ಇದೆ. ಇದೊಂದು ಅದೃಷ್ಟದ ಪಾತ್ರ” ಎಂದಿದ್ದಾರೆ ನಟಿ ಸುಮನ್. ಅವರು ಇನ್ನೂ ಬಿಡುಗಡೆಯಾಗದ ಚಿತ್ರೀಕರಣದಲ್ಲಿರುವ ಕಠಾರಿ ವೀರ ಸುರಸುಂದರಾಂಗ ಚಿತ್ರದಲ್ಲಿ ರಂಭೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಂಭೆಯಿಂದ ಪೋಲೀಸ್‌ಗೆ ಬಹಳ ದೊಡ್ಡ ಮಟ್ಟದ ವ್ಯತ್ಯಾಸವಿದ್ದು, ಇದನ್ನು ಒಬ್ಬ ಅನುಭವಸ್ಥ ನಟಿ ಮಾತ್ರ ನಿಭಾಯಿಸಬಲ್ಲಳು. ಅದು ಸುಮನ್ ರಂಗನಾಥ್.

ಮೈನಾ ಚಿತ್ರವನ್ನು ನಾಗಶೇಖರ್ ನಿರ್ದೇಶಿಸುತ್ತಿದ್ದು, ರಾಜ್‌ಕುಮಾರ್ ನಿರ್ಮಿಸುತ್ತಿದ್ದಾರೆ. ಚಿತ್ರದ ಸಂಗೀತ ವಿಭಾಗಕ್ಕೆ ಜೆಸ್ಸಿ ಗಿಫ್ಟ್‌ರನ್ನು ನಾಗಶೇಖರ್ ಉಳಿಸಿಕೊಂಡಿದ್ದಾರೆ. ಸತ್ಯ ಹೆಗ್ಡೆಯ ಛಾಯಾಗ್ರಹಣ, ಕವಿರಾಜ್‌ರ ಹಾಡುಗಳು, ಇಮ್ರಾನ್ ಸರ್ದಾನಿಯಾರ ನೃತ್ಯ ಮೈನಾ ಚಿತ್ರಕ್ಕಿದೆ. ಈ ಹಿಂದೆ ಸಂಜು ವೆಡ್ಸ್ ಗೀತಾ ಚಿತ್ರಕ್ಕೂ ಇಮ್ರಾನ್‌ರ ನೃತ್ಯ ಸಂಯೋಜನೆಯೊತ್ತು. ಚಿತ್ರವನ್ನು ನಂದನನಾಮ ಸಂವತ್ರರದ ಯುಗಾದಿಯ ಶುಭದಿನದಂದು ಶುರುಮಾಡಲಾಯಿತು.

ಹಿರಿಯ ತಮಿಳು ನಟ ಶರತ್ ಕುಮಾರ್ ಬಿ.ಬಿ. ಅಶೋಕ್ ಕುಮಾರರ ಪಾತ್ರವನ್ನು ಮಾಡುತ್ತಿದ್ದು ಸುಮನ್ ಲೇಡಿ ಪೋಲೀಸ್ ಗೆಟಪ್ ನಲ್ಲಿ ಮೊಟ್ಟಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ. ಆ ದಿನಗಳು ನಾಯಕ ಚೇತನ್ ಚಿತ್ರದ ನಾಯಕ ಮತ್ತು ಬೆಂಗಳೂರು ಮೂಲದ ಪ್ರತಿಭಾವಂತ ನಟಿ ನಿತ್ಯ ಮೆನನ್ ನಾಯಕಿಯಾಗಿ ಪಾತ್ರನಿರ್ವಹಿಸುತ್ತಿದ್ದಾರೆ.

ಲೇಡಿ ಪೋಲೀಸ್‌ನಲ್ಲಿ ಮಿಂಚಿದ ಮಾಲಾಶ್ರೀಯ ಹಾಗೇ ಸುಮನ್ ಕೂಡ ಮಿಂಚಲಿ ಎಂದು ಹಾರೈಸುವ ಕನ್ನಡಹನಿಗಳ ಬಳಗ.

ಮೈನಾ ಚಿತ್ರತಂಡ :

Mynaaa Cast and Crew

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech