Close X

ವಿಭಿನ್ನ ರೀತಿಯ ಪ್ರಚಾರ ಪಡೆಯುತ್ತಿರುವ ಅಲೆಮಾರಿ ಚಿತ್ರ

ಲೂಸ್ ಮಾದ ಯೋಗೇಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ ’ಅಲೆಮಾರಿ’ ಚಿತ್ರವು ಸೆನ್‍ಸಾರ್ ಬೋರ್ಡ್‍ನ ಅನುಮತಿ ಪಡೆದಿದ್ದು ಮಾರ್ಚ್ 9ರಂದು ತೆರೆಕಾಣಲು ಸಜ್ಜಾಗಿದೆ. ಅಲೆಮಾರಿ ಚಿತ್ರವನ್ನು ಸಂತು ನಿರ್ದೇಶಿಸಿದ್ದಾರೆ. ಈ ಮುನ್ನ ಚಿತ್ರದ ಆಡಿಯೋವನ್ನು ಬಹಳ ವಿಭಿನ್ನವಾಗಿ ಬಿಡುಗಡೆ ಮಾಡಲಾಗಿತ್ತು. ಅದರ ಒಂದು ನ್ಯೂಸ್ ಇಲ್ಲಿದೆ.

ಚಿತ್ರದ ಬಿಡುಗಡೆಗೂ ಮುನ್ನ ವಿಭಿನ್ನ ಪ್ರಚಾರ ನೀಡಲು ಚಿತ್ರತಂಡ ಸಿದ್ಧತೆಗಳನ್ನು ಮಾಡಿಕೊಂಡಿದೆ. ಒಟ್ಟು 250 ಚಿತ್ರಮಂದಿರಗಳಲ್ಲಿ ಚಿತ್ರದ ಟ್ರೈಲರ್ ಪ್ರದರ್ಶಿಸಲಿದೆ. ಇದಲ್ಲದೆ ನಾಲ್ಕು ಮುಖ್ಯ ರೈಲುಗಳಲ್ಲಿ ’ಅಲೆಮಾರಿ’ ಚಿತ್ರದ ಪ್ರೋಮೋ ಮೇಕಿಂಗ್ ತುಣುಕುಗಳನ್ನು ಪ್ರದರ್ಶಿಸಲಿದ್ದಾರೆ. ಅರ್ಜುನ್ ಜನ್ಯ ಸಂಗೀತವಿರುವ ಅಲೆಮಾರಿ ಚಿತ್ರದ ಆಡಿಯೋ ಮಾರಾಟವೂ ಜೋರಾಗಿದೆ.

ಮಾರ್ಚ್ 9ರಂದು ಚಿತ್ರ ಬಿಡುಗಡೆಗೆ ಎಲ್ಲಾ ಸಿದ್ದತೆಗಳು ನಡೆದಿದೆ. ಚಿತ್ರವು 100 ದಿನಗಳ ಜಯಭೇರಿ ಬಾರಿಸಲಿ ಎಂದು ಕನ್ನಡಹನಿಗಳ ಬಳಗ ಹಾರೈಸುತ್ತದೆ.

Alemari

Alemari Kannada Movie Gallery :

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech