Close X

ವರದ ನಾಯಕ ಚಿತ್ರದ ಕೊನೆಯ ಹಂತದ ಶೂಟಿಂಗ್ ಶುರು

ವರದ ನಾಯಕ ಚಿತ್ರದ ಕೊನೆಯ ಹಂತದ ಶೂಟಿಂಗ್ ಶುರುವಾಗಿದೆ. ಸಾಯಿಕುಮಾರ್‌ರ ತಮ್ಮ ಶಂಕರೇ ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ತೆಲುಗಿನ ಲಕ್ಷ್ಯಂ ಶಂಕರೇಗೌಡರವರು ಕನ್ನಡದಲ್ಲಿ ರೀಮೇಕ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್‌ರವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್‌ನ ಸಮೀರಾ ರೆಡ್ಡಿ ಈ ಚಿತ್ರದಲ್ಲಿ ಹಿರೋಯಿನ್‌ ಆಗಿ ನಟಿಸುತ್ತಿದ್ದಾರೊ ಇಲ್ಲವೊ ಎಂಬುದು ಇನ್ನೂ ಶಂಕರೇಗೌಡರವರು ಖಚಿತ ಪಡಿಸಿಲ್ಲ. ಆದರೆ ಬೇರೆ ಕೆಲವು ಮೂಲಗಳಿಂದ ಇದು ತಿಳಿದುಬಂದಿದೆ.

ಒಂದು ಹಾಡಿನ ಚಿತ್ರೀಕರಣವನ್ನು ನಿರ್ಮಾಪಕ ಶಂಕರೇಗೌಡರವರ ವೈಟ್ ಫೀಲ್ಡ್‍ನ ದೊಡ್ಡ ಅರಮನೆಯಂತಹ ಮನೆಯಲ್ಲಿ ನಡೆಯಿತು. ಈ ಹಾಡಿನ ಚಿತ್ರೀಕರಣದಲ್ಲಿ ನಾಯಕ ನಟ ಚಿರಂಜೀವಿ ಸರ್ಜ ಮತ್ತು ನಾಯಕಿ ನಿಕಿಷಾ ಪಟೇಲ್ ಪಾಲ್ಗೊಂಡಿದ್ದರು. ಸುದೀಪ್ ರವರು ಮಾರ್ಚ್ 12ರಿಂದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

Varadanayaka

ಸುದೀಪ್ ರವರು ಪೋಲೀಸ್ ಆಫೀಸರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಾರ್ಚ್ 12ರಿಂದ ಮುವತ್ತು ದಿನಗಳವರೆಗೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಚಿತ್ರಿದಲ್ಲಿ ಒಂದು ಹಾಡು ಮತ್ತು ಒಂದು ಫೈಟ್‌ನಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech