Close X

ದೆಹಲಿ ಮೂಲದ ಸಾಕ್ಷಿ “ಪಾರು w/O ದೇವದಾಸ್” ಚಿತ್ರದಿಂದ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ

ದೆಹಲಿ ಮೂಲದ ನಾಯಕಿ ಮತ್ತು ಮಾಡೆಲ್ ಸಾಕ್ಷಿ ಕಿರಣ್ ಗೋವಿ ನಿರ್ದೇಶಿಸುತ್ತಿರುವ “ಪಾರು w/O ದೇವದಾಸ್” ಚಿತ್ರದಿಂದ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಶಿವಾನಂದ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರವನ್ನು ಮಾರ್ಚ್ 30ರಿಂದ ಶುರುಮಾಡಲಿದ್ದು ಶ್ರೀನಗರ ಕಿಟ್ಟಿ ಚಿತ್ರದ ನಾಯಕರಾಗಿ ಅಭಿನಯಿಸುತ್ತಿದ್ದಾರೆ.

ಸಾಕ್ಷಿ ಮಾಡಲ್ ಆಗಿದ್ದು, ಪ್ಯಾಂಟಲೂನ್ ಮಿಸ್ ಇಂಡಿಯಾದ 2007ರ ಫೈನಲಿಸ್ಟ್ ಆಗಿದ್ದಳು. ಚಿತ್ರದ ನಿರ್ದೇಶಕ ಕಿರಣ್ ಗೋವಿ ಭಾರತೀಯ ಸಾಂಪ್ರದಾಯಿಕ ಉಡುಪುಗಳು ಮತ್ತು ಪಶ್ಚಿಮ ಬಟ್ಟೆಗಳನ್ನು ಎರಡನ್ನೂ ಉಪ್ಪುವಂತ ಹೊಸ ನಟಿಯನ್ನು ಹುಡುಕುತ್ತಿದ್ದಾಗ ಅವರ ಕಣ್ಣಿಗೆ ಬಿದ್ದದ್ದೆ ಸಾಕ್ಷಿ. ಕಿರಣ್ ಗೋವಿ ಹೇಳುತ್ತಾರೆ : “ನನ್ನ ಚಿತ್ರದ ನಾಯಕಿ ಒಬ್ಬ ಕಥಕ್ ನೃತ್ಯಗಾರ್ತಿ. ಹಾಗಾಗಿ ನನಗೆ ಸಂಪ್ರದಾಯ ಮತ್ತು ಆಧುನಿಕತೆ ಎರಡನ್ನೂ ತೋರುವ ಹೊಚ್ಚ ಹೊಸ ಮುಖವೊಂದನ್ನು ನೋಡುತ್ತಿದ್ದೆ. ಆಗ ನನ್ನ ಕಣ್ಣಿಗೆ ಬಿದ್ದದ್ದೆ ಸಾಕ್ಷಿಯವರ ಫೋಟೋ. ನನ್ನ ಚಿತ್ರದ ನಾಯಕಿ ಪಾತ್ರಕ್ಕೆ ಇವಳೆ ಸೂಕ್ತ ಎಂದನಿಸಿತು” ಎಂದರು.

Model-Actress-Sakshi

[ad_468x60]

Model-Actress-Sakshi-4

Model-Actress-Sakshi-3

Model-Actress-Sakshi-2

Model-Actress-Sakshi-1

ಚಿತ್ರ ಕೃಪೆ : ಪಾರು w/O ದೇವದಾಸ್ ನಾಯಕಿ ಸಾಕ್ಷಿ

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech