Close X

ರವಿಚಂದ್ರನ್‍ರ ಕ್ರೇಜಿ ಸ್ಟಾರ್ ಚಿತ್ರ ಮಾರ್ಚ್ ಮೂರನೇ ವಾರದಲ್ಲಿ ಸೆಟ್ಟೇರಲಿದೆ

Crazy Star Ravichandranನಿಮಗೆಲ್ಲ ತಿಳಿದಿರುವಂತೆ ಮಲಯಾಳಂನ 2011ರ ಹಿಟ್ ಚಿತ್ರ “ಟ್ರಾಫಿಕ್”ನ್ನು ಸ್ವತಃ ತಾವೇ ನಿರ್ದೇಶಿಸುತ್ತಿದ್ದಾರೆ. ಅವರ ನಿರ್ದೇಶನ ಅಂದರೆ ಅದರಲ್ಲಿ ಒಂದು ವಿಭಿನ್ನತೆ. ಅದರಲ್ಲೂ ಚಿತ್ರ “ಟ್ರಾಫಿಕ್”ಗೆ ಸಂಬಂಧಪಟ್ಟಿರುವುದರಿಂದ ನಮಗೆಲ್ಲ ಏಕಾಂಗಿ ಚಿತ್ರದ ಅವರ ಕಾರ್ ಓಡಿಸುವ ಶೈಲಿ ಜ್ಞಾಪಕಕ್ಕೆ ಬರುತ್ತಿದೆ. !

ಸೂಪರ್ ಸ್ಟಾರ್ ರವಿಚಂದ್ರನ ಯಾವಾಗಲೂ ತಮ್ಮ ವಿಭಿನ್ನ ಶೈಲಿಯ ನಿರ್ದೇಶನದಿಂದ ತಮ್ಮ ಅಭಿಮಾನಿಗಳಿಗೆ ಕ್ರೇಜಿ ಸ್ಟಾರ್ ಎಂದೇ ಕರೆಸಿಕೊಂಡವರು. ಚಿತ್ರಕ್ಕೆ ತಮ್ಮ ಹೆಸರಿನ ಟೈಟಲ್ – “ಕ್ರೇಜಿ ಸ್ಟಾರ್” ನನ್ನೇ ಇಟ್ಟಿದ್ದಾರೆ. ಚಿತ್ರವನ್ನು ಎನ್. ಎಸ್. ರಾಜ್ ಕುಮಾರ್ ಮತ್ತು ಸೂರಪ್ಪ ಬಾಬು ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಈ ಮೊದಲು ಎನ್. ಎಸ್. ರಾಜ್ ಕುಮಾರ್ ಪುನೀತ್ ರಾಜ್‍ಕುಮಾರ್ ಚಿತ್ರವಾದ “ಪೃಥ್ವಿ”ಯನ್ನು ನಿರ್ಮಿಸಿದ್ದರು.

ರವಿಚಂದ್ರನ್ ನಿರ್ದೇಶನದ ಈ ಚಿತ್ರಕ್ಕೆ ತಾವೇ ಸಂಗೀತ ಸಂಯೋಜಿಸುತ್ತಿದ್ದಾರೆ. ಮೂಲಗಳ ಪ್ರಕಾರ ಈಗಾಗಲೇ ಎರಡು ಹಾಡುಗಳ ಸಂಯೋಜನೆ ಮುಗಿದಿದ್ದು, ಎರಡೂ ಹಾಡುಗಳು ಚೆನ್ನಾಗಿ ಮೂಡಿಬಂದಿದೆಯಂತೆ. ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿಯ ಆಯ್ಕೆ ಇನ್ನೂ ತೀರ್ಮಾನವಾಗಿಲ್ಲ.

ರವಿಚಂದ್ರನ್ ಚಿತ್ರಕಥೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದ್ದು, ಚಿತ್ರ ಮಾರ್ಚ್ ಮೂರನೇ ವಾರದಲ್ಲಿ ಸೆಟ್ಟೇರಲಿದೆ. ಸಿ. ಎಸ್. ವಿ. ಸೀತಾರಾಂ ಚಿತ್ರಕ್ಕೆ ಛಾಯಾಗ್ರಹಣ ಒದಗಿಸಲಿದ್ದಾರೆ.

People who read this also read : ಮಲಯಾಳಂನ ಟ್ರಾಫಿಕ್ ಕನ್ನಡಕ್ಕೆ – ಕ್ರೇಜಿಸ್ಟಾರ್ ರವಿಚಂದ್ರನ್

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech