Close X

ತುಂತುರು ಚಿತ್ರದ ಮೂಲಕ ರಮೇಶ್ ಮತ್ತು ಅನು ಪ್ರಭಾಕರ್ ಮತ್ತೊಮ್ಮೆ ಜೋಡಿಯಾಗುತ್ತಿದ್ದಾರೆ

ಕನ್ನಡ ಚಿತ್ರರಂಗದ ಬಹಳ ಜನಪ್ರಿಯ ಜೋಡಿಗಳಲ್ಲಿ ಒಂದಾದ ರಮೇಶ್ ಅರವಿಂದ್ ಮತ್ತು ಅನು ಪ್ರಭಾಕರ್ ಮತ್ತೊಮ್ಮೆ “ತುಂತುರು” ಚಿತ್ರದ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ಶ್ರೀರಸ್ತು ಶುಭಮಸ್ತು, ಶಾಪ, ಬಿಸಿ ಬಿಸಿಯಂತ ಹಿಟ್ ಚಿತ್ರಗಳನ್ನು ಕೊಟ್ಟ ಈ ಜೋಡಿ ಇದೀಗ ಮುಸ್ಸಂಜೆ ಮಹೇಶ್ ನಿರ್ದೇಶನದ “ತುಂತುರು” ಚಿತ್ರದೊಂದಿಗೆ ಮತ್ತೆ ಸೇರುತ್ತಿದ್ದಾರೆ. ಇಬ್ಬರು ತಮ್ಮ ಮನೋಜ್ಞ ಅಭಿನಯದಿಂದ ಕೆಲವು ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ರಮೇಶ್ ಅರವಿಂದ್‍ರ ತಂಗಿಯ ಪಾತ್ರ ಮಾಡುತ್ತಿರುವ ರಿಶಿಕಾ ಸಿಂಗ್ “ತುಂತುರು” ಚಿತ್ರದ ಶೂಟಿಂಗ್‌ ಬೆಂಗಳೂರು ಹೊರವಲಯದ ಲಿಂಗರಾಜಪುರದಲ್ಲಿರುವ ಶ್ರೀನಿವಾಸ ರೆಡ್ಡಿ ಹೌಸ್ ನಲ್ಲಿ ನಡೆಯುತ್ತಿರುವುದರಲ್ಲಿ ಪಾಲ್ಗೊಂಡಿದ್ದರು. ಈ ಮೊದಲ ಸಕಲೇಶಪುರದಲ್ಲಿ ಮೊದಲ ಹಂತದ ಚಿತ್ರೀಕರಣ ನಡೆದಿದೆ. ಈ ಎರಡನೇ ಹಂತದ ಚಿತ್ರೀಕರಣದಲ್ಲಿ ರಮೇಶ್ ಅರವಿಂದ್, ಅನು ಪ್ರಭಾಕರ್, ರಿಶಿಕಾ ಸಿಂಗ್ ಪಾಲ್ಗೊಂಡಿದ್ದು ಇದು ಮಾರ್ಚ್ 15ರವರೆಗೆ ನಡೆಯಲಿದೆ.

ramesh-Aravind

Anu-Prabhakar

“ತುಂತುರು ಚಿತ್ರಕ್ಕೆ ರಮೇಶ್ ಅರವಿಂದ್ ತಮ್ಮ ಮೀಸೆಯನ್ನು ತೆಗೆದಿದ್ದಾರೆ. ಅದೇನು ದೊಡ್ಡ ವಿಷಯವಲ್ಲ, ಈ ಮೊದಲು ಅವರು ಕೆಲವೊಂದು ಸಿನಿಮಾಗಳಿಗೆ ತೆಗೆದಿದ್ದು, ಅದು ಹಿಟ್ ಕೂಡ ಆಗಿವೆ. ಆ ಚಿತ್ರಗಳೆಂದರೆ, ಕುರಿಗಳು ಸಾರ್ ಕುರಿಗಳು, ನಮ್ಮೂರ ಮಂದಾರ ಹೂವೆ, ರಂಗೇನಾ ಹಳ್ಳಿಯಾಗೆ ರಂಗಾದ ರಂಗೆಗೌಡ ಇನ್ನೂ ಮುಂತಾದವು.

ತುಂತುರು ಮತ್ತೊಂದು ಹಿಟ್ ಆಗಲಿದೆಯೇ ಎಂದು ಕಾದು ನೋಡಬೇಕು.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech