Close X

ದರ್ಶನ್ – ನಿಖಿತಾ ಟ್ರ್ಯಾಕ್ಟರ್‌ನಲ್ಲಿ ಒಂದಾಗಿದ್ದಾರೆ – “ಸ್ನೇಹಿತರು”

darshan-nikitha

ಅಷ್ಟೆಲ್ಲಾ ರಂಪಾಟವಾದರೂ ಹೇಗೋ ನಿಖಿತಾರನ್ನು ಒಪ್ಪಿಸಿ, ದರ್ಶನ್ ಜೊತೆ “ಸ್ನೇಹಿತರು”ಚಿತ್ರದ ಒಂದು ಹಾಡಿನ ಚಿತ್ರೀಕರಣವನ್ನು ಮಾಡಿಯೇ ಬಿಟ್ಟಿದ್ದಾರೆ ನಿರ್ದೇಶಕ ರಾಮ್ ನಾರಾಯಣ್. ಇದರಿಂದ ನಿರ್ದೇಶಕರು, ನಿರ್ಮಾಪಕರು ಖುಷಿಯಾಗಿದ್ದಾರೆ. ಇವರಿಬ್ಬರಿಂದಾಗಿ ಚಿತ್ರಕ್ಕೆ ಒಂದಷ್ಟು ಲಾಭವಾಗುವುದು ಖಂಡಿತ ಎನ್ನುತ್ತಿದೆ ಗಾಂಧೀನಗರ.

ಚಿತ್ರದ ವಿಶೇಷತೆಯನ್ನು ಕಾಯ್ದಿರಿಸಿರುವ ಚಿತ್ರ ತಂಡ, ಚಿತ್ರ ಬಿಡುಗಡೆ ಆಗುವವರೆಗೆ ಕಾಯಲೇಬೇಕು ಎಂದಿದೆ. ದರ್ಶನ್‍ರ ಎಲ್ಲಾ ಚಿತ್ರಗಳ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ “ಸ್ನೇಹಿತರು” ಚಿತ್ರಕ್ಕೂ ಸಂಗೀತ ನೀಡಿದ್ದಾರೆ. ಇದೀಗ ನಿಖಿತಾ ಕುಣಿದಿರುವ ಚಿತ್ರೀಕರಿಸಿರುವ ಹಾಡು, ಕ್ಲೈಮಾಕ್ಸ್‌ಗೂ ಮುಂಚೆ ಬರುವಂತದ್ದು ಎಂಬುದು ಚಿತ್ರತಂಡದ ಹೇಳಿಕೆ.

[ad_300x250]

ಈ ಹಾಡಿನ ಪೂರ್ತಿ ಚಿತ್ರೀಕರಣ ಟ್ರ್ಯಾಕ್ಟರಿನಲ್ಲಿ ಎಂಬುದು ವಿಶೇಷ ಸುದ್ದಿ. “ಬಾಲಿವುಡ್ ನಟಿಯರಿಗಿಂತ ನಾನೇನು ಕಮ್ಮಿಯಿಲ್ಲ ಎನ್ನುತ್ತ ನಿಖಿತಾ ಹೆಜ್ಜೆ ಹಾಕಿದ್ದಾರೆ “ಸ್ನೇಹಿತರು” ಚಿತ್ರದ ಒಂದು ಹಾಡಿಗೆ.

ಸ್ನೇಹಿತರು ಚಿತ್ರವೂ ಮೇ ತಿಂಗಳಿನಲ್ಲಿ ಬಿಡುಗಡೆ ಆಗಲಿದೆಯಂತೆ.

Kannada Movie Snehitaru Gallery

ಕೃಪೆ : ಒನ್ ಇಂಡಿಯಾ ಕನ್ನಡ

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech