Close X

ಮಂಮ್ಮೂಟಿ ನಟಿಸಿರುವ “ಶಿಕಾರಿ” ಚಿತ್ರವು ಮಾರ್ಚ 9ರಂದು ತೆರೆಗೆ

Shikari-Kannada-Movie-Posterರಾಷ್ಟ ಪ್ರಶಸ್ತಿ ವಿಜೇತ ಅಭಯ್ ಸಿಂಹರ ಎರಡನೇ ಚಿತ್ರ “ಶಿಕಾರಿ” ಮಾರ್ಚ್ 9 ರಂದು ತೆರೆ ಕಾಣಲಿದೆ ಎಂದು ತಿಳಿದುಬಂದಿದೆ. ಚಿತ್ರವನ್ನು ಕೆ. ಮಂಜು ನಿರ್ಮಿಸುತ್ತಿದ್ದಾರೆ. ಅದೇ ದಿನ ಮಾರ್ಚ್ 9 ರಂದು ಅಲೆಮಾರಿ ಚಿತ್ರವು ಬಿಡುಗಡೆಯಾಗಲಿದೆ ಎಂದು ಬೆನ್‍ಕೋಶ್ರೀ ಘೋಷಿಸಿದ್ದಾರೆ. ಇದರೊಂದಿಗೆ ಶಿಕಾರಿ ಚಿತ್ರವು ಬೇರೆ ಚಿತ್ರಗಳೊಂದಿಗೆ ಮಾರ್ಚ್ 9ರಂದು ಪೈಪೋಟಿ ನಡೆಸಲಿದೆ.

ಚಿತ್ರದಲ್ಲಿ ಮಲಯಾಳಂನ ಸೂಪರ್ ಸ್ಟಾರ್ ಮಂಮ್ಮೂಟಿ ನಟಿಸುತ್ತಿದ್ದಾರೆ. ಇವರೊಂದಿಗೆ ಕನ್ನಡದ ಆದಿತ್ಯ, ಮೋಹನ್, ನೀನಾಸಂ ಅಚ್ಯುತ, ಶರತ್ ಲೋಹಿತಾಶ್ವ, ನೀನಾಸಂ ಅಶ್ವಥ್, ಮಲಯಾಳಂ ನಟ ಇನ್ನೋಸೆಂಟ್ ಮತ್ತು ಟಿನಿ ಟಾಮ್ ನಟಿಸುತ್ತಿದ್ದಾರೆ. ಪೂನಮ್ ಬಾಜ್ವ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ.

ಶಿಕಾರಿ ಚಿತ್ರವು ಎರಡು ಅವತರಣಿಕೆಯಲ್ಲಿ ತಯಾರಾಗಿದೆ, ಒಂದು ಕನ್ನಡ ಮತ್ತೊಂದು ಮಲಯಾಳಂನಲ್ಲಿ. ಏಕಕಾಲಿಕವಾಗಿ ಕನ್ನಡ ಮತ್ತು ಮಲಯಾಳಂನಲ್ಲಿ ಚಿತ್ರೀಕರಣ ಮಾಡಲಾಗಿದೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹರಿ ಕೃಷ್ಣರ ಸಂಗೀತ ಚಿತ್ರಕ್ಕೆ ಪ್ಲಸ್ ಪಾಯಿಂಟ್.

ಅಭಯ್ ಸಿಂಹ ಕೊಚ್ಚಿನ್ ನಲ್ಲಿ ಚಿತ್ರದ ಮಲಯಾಳಂ ಅವತರಣಿಕೆಯ ಬಿಡುಗಡೆಗಾಗಿ ಎಲ್ಲಾ ತಯಾರಿಗಳನ್ನು ನಡೆಸುತ್ತಿದ್ದಾರೆ.

ಚಿತ್ರ ಭರ್ಜರಿ ಯಶಸ್ಸು ಕಾಣಲೆಂದು ಕನ್ನಡಹನಿಗಳ ಬಳಗ ಹಾರೈಸುತ್ತದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech