Close X

ಕೋಕಿಲಾ ಮೋಹನ್ ಮತ್ತೆ ಬರುತ್ತಿದ್ದಾರೆ “ನಂತರ” ಚಿತ್ರದ ಮೂಲಕ

Kokila_Mohan

Kokila_Mohan

ಕೋಕಿಲಾ ಮೋಹನ್ ನಿಮಗೆಲ್ಲಾ ತಿಳಿದಿರುವಂತೆ ಕನ್ನಡದವರು ಹಿಂದೆ ತಮಿಳು ಸಿನಿಮಾ ಉದ್ಯಮದಲ್ಲಿ ಅಭಿವೃದ್ಧಿಯಾದವರು. ಈಗ ಮತ್ತೆ ಅವರು ಕನ್ನಡಕ್ಕೆ ಬರುತ್ತಿದ್ದಾರೆ “ನಂತರ” ಚಿತ್ರದೊಂದಿಗೆ. ಈಗಷ್ಟೆ ಚಿತ್ರದ ಪ್ರಮುಖ ದೃಶ್ಯಗಳನ್ನು ಕೂರ್ಗ್‌ನಲ್ಲಿ ಶೂಟಿಂಗ್ ಮುಗಿಸಿದ್ದು, ಮುಂದೆ ವೈಜಾಗ್, ಬೆಂಗಳೂರು ಮತ್ತು ಉಳಿದ ಭಾಗಗಳ ಶೂಟಿಂಗ್‌ನ್ನು ವಿದೇಶದಲ್ಲಿ ಮುಗಿಸಲಿದೆ.

“ನಂತರ” ಚಿತ್ರವು ಒಂದು ನಿಜವಾದ ಕಥೆಯ ಸ್ಪೂರ್ತಿ ಪಡೆದು ತಯಾರಿಸಲ್ಪಡುತ್ತಿದೆ. ಬೆಂಗಳೂರಿನಲ್ಲಿ ಬೆಳೆದ ದಕ್ಷಿಣ ಆಫಿಕ್ರಾ ಮೂಲದ ಒಬ್ಬ ಯುವಕನನ್ನು ಆಧರಿಸಿದ ಕಥೆಯಾಗಿದೆ. ಅವನನ್ನು ಡಾ. ರಾಜ್ ಕುಮಾರ್ ಮತ್ತು ಡಾ. ವಿಷ್ಣುವರ್ಧನ್‌ರ ಚಿತ್ರಗಳನ್ನು ನೋಡಲು ನಿರಾಕರಿಸಲಾಗಿತ್ತು. ಅವನನ್ನು ಇಂಗ್ಲೀಷ್ ಮತ್ತು ತಮಿಳು ಚಿತ್ರಗಳನ್ನು ಮಾತ್ರ ನೋಡಲು ಹೇಳಲಾಗುತಿತ್ತು. ಅಂತಹ ಯುವಕ ಒಂದು ಕನ್ನಡ ಚಿತ್ರದ ನಿರ್ದೇಶನವನ್ನು ಕೈಗೆತ್ತಿಕೊಳ್ಳುತ್ತಾನೆ ಮತ್ತು ಇದಕ್ಕೆ ಅವನ ಪೋಷಕರ ಬೆಂಬಲವೂ ಸಿಗುತ್ತದೆ. ಇಂತಹ ಎಂದೂ ಕೇಳದ ಮತ್ತು ನೋಡದ ಕಥೆಯಾಗಿದೆ ಎಂದು ರೆಡ್ ಕಾರ್ಪೆಟ್ ಪ್ರೋಡಕ್ಷನ್ ಹೇಳುತ್ತದೆ.

rachna_maurya

Rachana Maurya

ಮುರಳಿ, ರವಿ ಮತ್ತು ಸುರೇಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಾಗೇಂದ್ರ ಪ್ರಸಾದ್ ಮತ್ತು ವಿ. ಮನೋಹರ್ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಚಿತ್ರದ ತಾರಾ ಬಳಗದಲ್ಲಿ ಕೋಕಿಲಾ ಮೋಹನ್, ಸಾಧು ಕೋಕಿಲ, ಡಿಂಪಲ್ ಚೋಪ್ಡ್, ರಚನಾ ಮೌರ್ಯ, ಸತ್ಯಪ್ರಕಾಶ್ ಮತ್ತು ಹರ್ಷವರ್ಧನ ರವರುಗಳನ್ನು ಒಳಗೊಂಡಿದೆ.

ಸ್ಯಾಮ್. ಜೆ. ಚೈತನ್ಯ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಆರ್ಯನ್ ಸಾರೋ ಕ್ಯಾಮೆರಾ ಕೈಚಳಕವನ್ನು ತೋರಿಸಲಿದ್ದಾರೆ. ಎ. ಕೆ. ಮಧುಸೂದನ್‍ರ ಸಂಗೀತ ಚಿತ್ರಕ್ಕಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech