Close X

ಜನಪ್ರಿಯ ನಟಿ ನಮಿತಾ ಮತ್ತೊಮ್ಮೆ ಪಾರ್ವತಿಪುತ್ರ ಚಿತ್ರದಿಂದ ಕನ್ನಡಕ್ಕೆ

ನಟಿ ನಮಿತಾ ತನ್ನ ಮಾದಕ ಮೈಕ್ಕಟ್ಟಿನಿಂದಲೇ ಜನಪ್ರಿಯರಾದವರು, ಈಗ “ಪಾರ್ವತಿಪುತ್ರ” ಚಿತ್ರದಲ್ಲಿ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ನಟಿ ನಮಿತಾ ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆ “ಹೂ” ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರನ್ನು ರಂಜಿಸಿದ್ದರು. ಈಗ ಮತ್ತೊಮ್ಮೆ “ಪಾರ್ವತಿಪುತ್ರ” ಚಿತ್ರದೊಂದಿಗೆ ಸ್ಯಾಂಡಲ್‌ವುಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Namitha-Parvathiputra

ಚಿತ್ರದ ಹೀರೋ ಪರಿಚಯದ ಚಿತ್ರೀಕರಣ ಜಕ್ಕರಾಯನಕೆರೆಯಲ್ಲಿ ನಡೆಯಿತು. ಸಾಧುಕೋಕಿಲ ಮತ್ತು ಶಕೀಲಾ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ರಾಮ್ ಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ರಾಜವರ್ಧನ್ ತಮ್ಮ ಚೊಚ್ಚಲ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ರಾಮ್ ಪ್ರಸಾದ್ ಈ ಹಿಂದೆ “ಬಣ್ಣ ಬಣ್ಣದ ಲೋಕ” ಚಿತ್ರದಲ್ಲಿ ನಟನೆ ಮತ್ತು ನಿರ್ದೇಶನ ಎರಡನ್ನೂ ಮಾಡಿದ್ದರು. ರಾಮ್ ಪ್ರಸಾದ್‌ರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಚಿತ್ರಕ್ಕಿದೆ.

ರಮೇಶ್ ಬಾಬುರವರ ಛಾಯಾಗ್ರಹಣ, ಥಾಮಸ್ ರತ್ನಂರ ಸಂಗೀತ ಮತ್ತು ಹರ್ಷರ ನೃತ್ಯ ಸಂಯೋಜನೆ “ಪಾರ್ವತಿಪುತ್ರ” ಚಿತ್ರಕ್ಕಿದೆ.

Actress Namitha Gallery :

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech