Close X

ಗೋಲ್ಡ್‌ನ್ ಸ್ಟಾರ್ ಗಣೇಶ್ ಮತ್ತು ಪ್ರಣೀತಾ ಜೊತೆಯಾಗುತ್ತಿದ್ದಾರೆ “420” ಮೂಲಕ

Golden-star-Ganesh-and-Praneethaಸಂದೇಶ್ ನಾಗರಾಜ್ ಗೋಲ್ಡ್‌ನ್ ಸ್ಟಾರ್ ಗಣೇಶ್ ಮತ್ತು ಪ್ರಣೀತಾ ನಟಿಸಲಿರುವ “420” ಚಿತ್ರದ ಮೂಲಕ ನಿರ್ಮಾಪಕಕ್ಕೆ ಹಿಂದುರುಗುತ್ತಿದ್ದಾರೆ. ಯಶ್ ಹೀರೋ ಆಗಿ ನಟಿಸಿದ ಕಿರಾತಕ ಚಿತ್ರದ ನಿರ್ದೇಶಕ ಪ್ರದೀಪ್ ರಾಜ್ ಈ ಚಿತ್ರವನ್ನೂ ಕೂಡ ನಿರ್ದೇಶಿಸುತ್ತಿದ್ದಾರೆ.

“420” ಚಿತ್ರವೂ ಮಾರ್ಚ್ 14ರಿಂದ ಬೆಂಗಳೂರಿನಲ್ಲಿ ಶೂಟಿಂಗ್ ಶುರು ಮಾಡಲಿದ್ದು ನಾನ್ ಸ್ಟಾಪ್ ಶೂಟಿಂಗ್ ನಡೆಯಲಿದೆಯಂತೆ. ಈ ಚಿತ್ರದಲ್ಲಿ ರಂಗಾಯಣ ರಘು, ಸಾಧು ಕೋಕಿಲ ಹಾಗೂ ಮುಂತಾದವರೂ ನಟಿಸುತ್ತಿದ್ದಾರೆ.

ಹರಿ ಕೃಷ್ಣರ ಸಂಗೀತ, ಆರ್ ಗಿರಿಯವರ ಛಾಯಾಗ್ರಹಣ ಚಿತ್ರಕ್ಕಿದೆ. ಬಿ. ಎ. ಮಧು ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ.

ಗೋಲ್ಡನ್ ಸ್ಟಾರ್ ಫ್ಯಾನ್ಸ್‌ಗೆ ಇದೊಂದು ಸಂತೋಷದ ಸುದ್ದಿ. ಗೋಲ್ಡನ್ ಸ್ಟಾರ್‍ ಈ ಚಿತ್ರದಲ್ಲಿ ಯಾವ ಗೆಟಪ್ ಹಾಕಲಿದ್ದಾರೆ ಎಂದು ಕಾದು ನೋಡಬೇಕಿದೆ.

Golden Star Ganesh Gallery :

Praneetha Gallery :

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech