Close X

ಡಾ|| ರಾಜ್‌ಕುಮಾರ್‌ರ ಜೀವನಚರಿತ್ರೆ ತಮ್ಮ ಮಗನಿಂದಲೇ ಅತೀ ಶೀಘ್ರದಲ್ಲಿ ಪ್ರಕಟ

ನಟಸಾರ್ವಭೌಮ ಡಾ. ರಾಜ್‌ಕುಮಾರ್‌ರ ಜೀವನಚರಿತ್ರೆಯನ್ನು ಅವರ ಮಗ ಪುನೀತ್ ರಾಜ್‌ಕುಮಾರ್‌ರವರೇ ಬರೆದು ಪ್ರಕಟಿಸುತ್ತಿದ್ದಾರೆ. ರಾಜ್ ಜೀವನಚರಿತ್ರೆಯ ಈ ಪುಸ್ತಕ ಅತೀ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಎಂದು ಅವರ ಎರಡನೇ ಮಗ ರಾಘವೇಂದ್ರ ರಾಜ್‌ಕುಮಾರ್ (ರಾಘಣ್ಣ) ತಮ್ಮ ಫೇಸ್‌ಬುಕ್ ನಲ್ಲಿ ಹೇಳಿಕೊಂಡಿದ್ದಾರೆ. ರಾಜ್ ಜೀವನಚರಿತ್ರೆಯ ಈ ಪುಸ್ತಕವನ್ನು ಸ್ವತಃ ಪುನೀತ್ ಬರೆದಿದ್ದು, ಅವರಿಗೆ ಸಹಾಯಕವಾಗಿ ಪ್ರಕೃತಿ ನೆರವು ನೀಡಿದ್ದಾರೆ. ಡಾ|| ರಾಜ್‌ಕುಮಾರ್ ಎನ್ನುವ ಶೀರ್ಷಿಕೆ ಮತ್ತು ವ್ಯಕ್ತಿತ್ವದ ಹಿಂದಿರುವ ವ್ಯಕ್ತಿಯೊಂದಿಗೆ ಈ ಜೀವನಚರಿತ್ರೆ ಪ್ರಕಟವಾಗುತ್ತಿದೆ. ಈ ಪುಸ್ತಕವು ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಲಭ್ಯವಿರುತ್ತದೆ.

ರಾಘಣ್ಣ ಹೆಮ್ಮೆಯಿಂದ ಮೊದಲ ಪ್ರತಿಯನ್ನು ಓದುತ್ತಿದ್ದು, “ಈಗ ಇಡೀ ವಿಶ್ವವು ತನ್ನ ಕೈಯಲ್ಲಿ ಇದೆ” ಎಂದು ಹೇಳಿದ್ದಾರೆ. ರಾಜ್‌ರ ಈ ಜೀವನಚರಿತ್ರೆಯ ಪುಸ್ತಕವು ಹೆಸರಾಂತ ವ್ಯಕ್ತಿಗಳ ಫೋಟೋಗಳು, ಅಭಿಮಾನಿ ದೇವರುಗಳು ಮತ್ತು ಅವರ ಕುಟುಂಬದ ಸದಸ್ಯರ ಅಪರೂಪದ ಛಾಯಾಚಿತ್ರಗಳನ್ನು ಒಳಗೊಂಡಿದೆ. [ad_468x60]

Rajkumar-Biography-Puneeth-Rajkumarರಾಘಣ್ಣ ಇತ್ತೀಚೆಗೆ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಹೀಗೆ ಹೇಳಿಕೊಂಡಿದ್ದಾರೆ : “ನೀವೆಲ್ಲರೂ ಕುತೂಹಲದಿಂದ ಕಾಯುತ್ತಿರುವ ಅಪ್ಪಾಜಿಯವರ ಜೀವನಚರಿತ್ರೆ ಪುಸ್ತಕವು ಮುಗಿದಿದ್ದು, ಇದನ್ನು ನನ್ನ ಪ್ರೀತಿಯ ಸಹೋದರ ಅಪ್ಪು ಮತ್ತು ಪ್ರಕೃತಿ ಎನ್. ಬನವಾಸಿ ಬರೆದಿದ್ದಾರೆ. ಇದರ ಮೊದಲ ಪ್ರತಿ ಈಗ ನನ್ನ ಕೈಯಲಿದ್ದು, ಇಡೀ ವಿಶ್ವವೇ ನನ್ನ ಕೈಯಲ್ಲಿದೆ ಎನ್ನುವಂತಾಗಿದೆ. ಈ ಜೀವನಚರಿತ್ರೆ ಪುಸ್ತಕವೂ ಬಹಳ ಬೇಗ ನಿಮ್ಮ ಕೈಸೇರಲಿದೆ. ದಯವಿಟ್ಟು ಪೋಸ್ಟರ್‌ನ್ನು ನೋಡಿ ಮತ್ತು ಆರ್ಶೀವದಿಸಿ”.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech