Close X

ದೆಹಲಿ ಮೂಲದ ನಾಯಕಿ ಹಾಗೂ ಮಾಡೆಲ್ ಪೂಜಾ ವರ್ಮ “ಛತ್ರಪತಿ” ಚಿತ್ರದ ನಾಯಕಿ

ದೆಹಲಿ ಮೂಲದ ನಾಯಕಿ ಹಾಗೂ ಮಾಡೆಲ್ ಪೂಜಾ ವರ್ಮ “ಛತ್ರಪತಿ” ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಪೂಜಾ ವರ್ಮರವರು ಸಿದ್ದಾಂತ್ ಎದುರು ಚಿತ್ರದಲ್ಲಿ ನಟಿಸಲಿದ್ದಾರೆ. ದಿನೇಶ್ ಗಾಂಧಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪೂಜಾ ವರ್ಮ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದು, ಈ ಮೊದಲು ಮಲಯಾಳಂ ಚಿತ್ರವೊಂದರಲ್ಲಿ ನಟಿಸಿದ್ದರು.

ದಿನೇಶ್ ಗಾಂಧಿ ಈ ಮೊದಲು ರಾಗಿಣಿಯನ್ನು ಸಂಪರ್ಕಿಸಿದ್ದು, ಅವರು ಹೇಳುವ ಪ್ರಕಾರ, ರಾಗಿಣಿ ಸರಿಯಾಗಿ ಪ್ರತಿಕ್ರಿಯಸಲೇ ಇಲ್ಲ ಹಾಗೂ ಅವರು ಕೇಳಿದ ಸಂಭಾವನೆ ಆಘಾತಕಾರಿಯಾಗಿತ್ತು. ಕನ್ನಡದ ಯಾವುದೇ ನಿರ್ಮಾಪಕರು ಆ ಸಂಭಾವನೆಯನ್ನು ಕೊಟ್ಟು ಹೀರೋಯಿನ್ ಆಗಿ ತೆಗೆದುಕೊಳ್ಳಲು ಆಗದು. ಇದಲ್ಲದೆ ಈ ಮೊದಲು ರಾಗಿಣಿಯನ್ನು ಕನ್ನಡಕ್ಕೆ ನಾಯಕಿಯಾಗಿ ಪರಿಚಯಿಸಿದ್ದು ನಾನು ಎಂದರು. ಅವರ ಈ ವರ್ಣನೆ ದಿನೇಶ್ ಗಾಂಧಿಯನ್ನು ಕೊಂಚ ರೇಗಿಸಿದೆ.

ಸ್ವಲ್ಪ ಪ್ರಚಾರ ಬಂದರೆ ಸಾಕು ನಮ್ಮ ನಟ ನಟಿಯರ ರೇಟು ಹೆಚ್ಚುತ್ತಾ ಹೋಗುತ್ತೆ ಮತ್ತು ನಿರ್ಮಾಪಕರು ತಮ್ಮ ಚಿತ್ರ ಗೆದ್ದು ಇನ್ನೂ ಹೆಚ್ಚಿನ ದುಡ್ಡು ಮಾಡಲು ಅದನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಗುತ್ತೆ. ಆದರೆ ಚಿತ್ರ ನೆಲ ಕಚ್ಚಿದರೆ ನಿರ್ಮಾಪಕರು ಬೀದಿಗೆ ಬಂದುಬಿಡುತ್ತಾರೆ :( :(Pooja Verma

Hot Dimple Chopda Gallery :

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech