Close X

ಡ್ಯಾನ್ಸಿಂಗ್ ಸ್ಟಾರ್ ವಿನೋದ್ ರಾಜ್ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲು

Leelavati-VinodRajಕನ್ನಡ ಚಿತ್ರರಂಗದಲ್ಲಿ ಡ್ಯಾನ್ಸಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದ ಹಿರಿಯ ನಟಿ ಲೀಲಾವತಿಯವರ ಪುತ್ರ ವಿನೋದ್ ರಾಜ್ ಗೆ ಹೃದಯಾಘಾತವಾಗಿದೆ. ಲೀಲಾವತಿ ಮತ್ತು ವಿನೋದ್ ರಾಜ್ ಇಬ್ಬರೂ ಎರಡು ದಿನಗಳ ಹಿಂದೆ ಬೇಗೂರಿನಿಂದ ವಾಪಸ್ಸಾಗುವಾಗ ಮಾರ್ಗಮಧ್ಯದಲ್ಲಿ ಕಾರು ಚಾಲನೆ ಮಾಡುತ್ತಿದ್ದ ವಿನೋದ್ ಸುಸ್ತಾಗಿ ಪ್ರಜ್ಞೆ ತಪ್ಪಿದರು. ಆ ಕೂಡಲೇ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಯಿತು. ತದನಂತರ ಅವರನ್ನು ಎಂ. ಎಸ್. ರಾಮಯ್ಯ ಆಸ್ಪತ್ರೆಯ ತುರ್ತುನಿಘಾ ಘಟಕದಲ್ಲಿಟ್ಟು ಚಿಕಿತ್ಸೆ ಮುಂದುವರಿಸಲಾಗಿದೆ.

ತಾಯಿ ಲೀಲಾವತಿಯವರಿಗೆ ಮಗನ ಬಿಟ್ಟು ಬೇರೆ ಆಸರೆ ಇಲ್ಲ. ಇದರಿಂದಾಗಿ ಅವನು ಗುಣಮುಖನಾದರೆ ಅಷ್ಟೆ ಸಾಕು ಎನ್ನುತ್ತಾ ಕಣ್ಣೀರಿನ ಕೋಡಿಯನ್ನೇ ಹರಿಸುತ್ತಿದ್ದಾರೆ.

ಈ ಕನ್ನಡದ ಕಂದ ಡ್ಯಾನ್ಸಿಂಗ್ ಸ್ಟಾರ್ ವಿನೋದ್ ರಾಜ್ ಬೇಗ ಗುಣಮುಖರಾಗಲಿ ಎಂಬುದು ಲೀಲಾವತಿ, ವಿನೋದ್ ರಾಜ್ ಅಭಿಮಾನಿಗಳು ಹಾಗೂ ನಮ್ಮೆಲ್ಲರ ಹಾರೈಕೆಯಾಗಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech