Close X

ಕ್ರೇಹಿ ಸ್ಟಾರ್ ರವಿಚಂದ್ರನ್‌ರ “ನರಸಿಂಹ” ಯುಗಾದಿ ಹಬ್ಬಕ್ಕೆ

ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ “ನರಸಿಂಹ” ಚಿತ್ರವು ಯುಗಾದಿ ಹಬ್ಬದಂದು 125 ಥಿಯೇಟರ್‌ಗಳಲ್ಲಿ ತೆರೆಕಾಣಲಿದೆ. ಈ ವಿಷಯವನ್ನು ಚಿತ್ರದ ನಿರ್ಮಾಪಕ ಎನ್. ಕುಮಾರ್ ಬುಧವಾರ ಪ್ರೆಸ್ ಮೀಟ್ ನಲ್ಲಿ ತಿಳಿಸಿದರು. ಈ ಚಿತ್ರವು ಬಹಳ ಸುದ್ದಿಯಲ್ಲಿರುವುದಕ್ಕೆ ಕಾರಣ ಬಹಳ ವರ್ಷಗಳ ನಂತರ ಹಂಸಲೇಖ ಮತ್ತು ರವಿಚಂದ್ರನ್ ಒಂದುಗೂಡಿದ್ದಾರೆ. ಚಿತ್ರಕ್ಕೆ ಹಂಸಲೇಖ ಸಂಗೀತವಿದ್ದು, ನಟ ಮೋಹನ್ ಚಿತ್ರವನ್ನು ನಿರ್ದೇಶಿಸಿದ್ದಾರೆ.

“ನಾನು ಚಿತ್ರವನ್ನು ಯುಗಾದಿ ಹಬ್ಬದಂದು ರಿಲೀಸ್ ಮಾಡಬೇಕೆಂಬ ಆಸೆ ಇತ್ತು. ಅದು ಈಗ ನರೆವೇರುತ್ತಿದೆ” ಎಂದರು ಕುಮಾರ್. ಕುಮಾರ ಚಿತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ರವಿಚಂದ್ರನ್ ಮತ್ತು ಮೋಹನ್ ಕಾಂಬಿನೇಷನ್ ಬಹಳ ಅದ್ಭುತವಾಗಿ “ನರಸಿಂಹ” ಚಿತ್ರದ ಮೂಲಕ ಮೂಡಿಬಂದಿದೆ ಎಂದರು. ನಟ ನಿರ್ದೇಶಕ ಮೋಹನ್ ರವಿಚಂದ್ರನ್ ರಂತಹ ಮೇರು ನಟರನ್ನು ನಿರ್ದೇಶಿಸಿದ್ದು ತಮಗೆ ಖುಷಿಕೊಟ್ಟಿದೆಯಂತೆ.

ಚಿತ್ರದ ಬಹುಮುಖ್ಯ ಆಕರ್ಷಣೆ ಖಳನಾಯಕನ ಪಾತ್ರದ ರವಿಶಂಕರ್ ಮತ್ತು ವಿಧೂಷಕ ಸಾಧುಕೋಕಿಲ. ಚಿತ್ರದ ಹಾಡುಗಳು ಮತ್ತು ಹಾಡುಗಳ ಚಿತ್ರೀಕರಣ ಮತ್ತೊಂದು ಆಕರ್ಷಣೆ.

[ad_468x60]

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech