Close X

ಬಹಳ ವರ್ಷಗಳ ನಂತರ ಚಾರ್ಮಿ ಸ್ಯಾಂಡಲ್‌ವುಡ್‌ಗೆ

ಚಾರ್ಮಿ ಬಹಳ ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ “Dev son of Mudde Gowda” ಎನ್ನುವ ಚಿತ್ರದ ಮೂಲಕ ಮರಳುತ್ತಿದ್ದಾರೆ. ಈ ಚಿತ್ರವನ್ನು ಪತ್ರಕರ್ತ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶ್ ನಿರ್ದೇಶಿಸುತ್ತಿದ್ದಾರೆ. ನಿಮಗೆಲ್ಲಾ ತಿಳಿದಿರುವಂತೆ ಇಂದ್ರಜಿತ್ ತಮ್ಮ ಚಿತ್ರಗಳಲ್ಲಿ ಗ್ಲಾಮರ್‌ಸ್ಸ್ ಪಾತ್ರಗಳಿಗೆ ಹೆಚ್ಚು ಒತ್ತುಕೊಡುತ್ತಾರೆ. ಈ ಹಿಂದೆ ಚಾರ್ಮಿ ಉಪೇಂದ್ರ ಮತ್ತು ಶಿವರಾಜ್‌ಕುಮಾರ್ ನಟಿಸಿದ ಲವ-ಕುಶ ಚಿತ್ರದ ಮೂಲಕ ಪ್ರಸಿದ್ದಿಹೊಂದಿದ್ದರು. ಲವಕುಶ ಚಿತ್ರದ ಆಪಲ್ ಆಪಲ್ ಹಾಡು ಈಗಲೂ ಪಡ್ಡೆ ಹುಡುಗರ ನಿದ್ದೆಯನ್ನು ಕೆಡಿಸುತ್ತದೆ.

Diganth-Charmee-Kannada-Movie-Galleryಈ ಚಿತ್ರದಲ್ಲಿ ಚಾರ್ಮಿ ದಿಗಂತ್ ಜೊತೆ ನಟಿಸುತಿದ್ದು, ಚಿತ್ರವೂ ಸಾಂಪ್ರದಾಯಿಕ, ಶಿಸ್ತಿನ ತಂದೆ ಹಾಗೂ ಆಧುನಿಕ ಚಿಂತನೆ ಮತ್ತು ಗೊಂದಲಗಳನ್ನು ಹೊಂದಿರುವ ಮಗ ಸುತ್ತ ಸುತ್ತುತ್ತದೆ. ಅನಂತ್ ನಾಗ್ ತಂದೆಯ ಪಾತ್ರವನ್ನು ನಿರ್ವಹಿಸುತ್ತಿದ್ದು, ಈ ಪಾತ್ರವೂ ಮೌಲ್ಯಗಳನ್ನು ಆಧರಿಸಿದ ಜೀವನ ಶೈಲಿಯನ್ನು ನಡೆಸುವ ತಂದೆಯ ಪಾತ್ರವಾಗಿದೆ. ಚಾರ್ಮಿ ನೃತ್ಯ ನಿರ್ದೇಶಕಿಯ ಪಾತ್ರವನ್ನು ವಹಿಸುತ್ತಿದ್ದು, ದಿಗಂತ್ ಚಿತ್ರದಲ್ಲಿ ಚಿತ್ರತಾರೆಯ ಪಾತ್ರವನ್ನು ಮಾಡುತ್ತಿದ್ದಾರೆ.

ಇತ್ತೀಚೆಗೆ ಚಾರ್ಮಿ ಬೆಂಗಳೂರಿಗೆ ಬಂದಿದ್ದು, ಫ್ಯಾಷನ್ ಶೋ ಒಂದರಲ್ಲಿ ಪಾಲ್ಗೊಂಡಿದ್ದರು. ಚಿತ್ರದ ಪ್ರಚಾರಕ್ಕಾಗಿ ಆಯೋಜಿಸಿದ್ದ ಈ ಫ್ಯಾಷನ್ ಶೋನಲ್ಲಿ ಮುಖ್ಯ ಪಾತ್ರದಾರಿಗಳಾದ ಚಾರ್ಮಿ ಮತ್ತು ದಿಗಂತ್ ಹೆಜ್ಜೆ ಹಾಕಿದರು.

ಜೆಕ್-ಭಾರತೀಯ ಮಾಡೆಲ್ ನತಾಲಿಯಾ ಸಹ ಪ್ರಮುಖ ಪಾತ್ರವನ್ನು ಹೊಂದಿದ್ದಾರೆ. ಜೆಸ್ಸಿ ಗಿಫ್ಟ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಸಂತೋಷ್ ಕುಮಾರ್ ಪತಜೆ ಕ್ಯಾಮರಾ ಕೈಚಳಕವನ್ನು ತೋರಿಸಲಿದ್ದಾರೆ.

ಈ ಹಿಂದೆ ದ್ಯಾನ್ ಮತ್ತು ಸದಾ ನಟಿಸಿದ ಮೋನಾಲಿಸಾ ನಂತ ಹಿಟ್ ಚಿತ್ರವನ್ನು ಕೊಟ್ಟವರೂ. ಹಾಗಾಗಿ ಸ್ವಾಭಾವಿಕವಾಗಿಯೇ ಈ ಚಿತ್ರವೂ ಅಂತಹ ಹಿಟ್ ಚಿತ್ರಗಳ ಸಾಲಿಗೆ ಸೇರುತ್ತದೆ ಎಂದು ಆಶಿಸುವ ಕನ್ನಡ ಹನಿಗಳ ಬಳಗ.

Hot ‘n’ Sexy Actress Charmi Gallery :

Diganth-Charmee-Kannada-Movie-Gallery-5

[ad_300x250]

Diganth-Charmee-Kannada-Movie-Gallery-4Diganth-Charmee-Kannada-Movie-Gallery-3Diganth-Charmee-Kannada-Movie-Gallery-2Diganth-Charmee-Kannada-Movie-Gallery-1Diganth-Charmee-Kannada-Movie-Gallery-6Diganth-Charmee-Kannada-Movie-Gallery

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech