Close X

ಕೆನಡಾದಿಂದ ಕನ್ನಡಕ್ಕೆ ಬರಲಿದ್ದಾರೆ ಸನ್ನಿ ಲಿಯೋನ್ !!!

ಭಾರತ ಮೂಲದ ಕೆನಡಾದ ನಟಿ, ಮಾಡೆಲ್ ಸನ್ನಿ ಲಿಯೋನ್ ಕನ್ನಡ ಚಿತ್ರರಂಗಕ್ಕೆ ಬರಲಿದ್ದಾರಂತೆ. ಕನ್ನಡದ ನಿರ್ಮಾಪಕ ರಾಮು ಇಂಟರ್‌ನ್ಯಾಷನಲ್‍ನ ರಾಮುರವರು ಸನ್ನಿ ಲಿಯೋನ್‌ನ್ನು ತಮ್ಮ ಒಂದು ಚಿತ್ರದ ಹಾಡಿಗೆ ಐಟಂ ಡ್ಯಾನ್ಸರ್ ಆಗಿ ಕರೆತರುತ್ತಿದ್ದಾರೆ. ತನ್ನದೇ ಆದ ಮಾದಕ ಶೈಲಿಯಲ್ಲಿ ಜಗತ್ತನ್ನೆ ದಿಗ್ಬ್ರಮೆ ಗೊಳಿಸಿರುವ ಸನ್ನಿ ಲಿಯೋನ್‌ನ್ನು ನಿರ್ಮಾಪಕ ರಾಮು ಸಂಪರ್ಕಿಸಿದ್ದು ತಮ್ಮ ಅಭಿಪ್ರಾಯವನ್ನು ಇನ್ನೂ ತಿಳಿಸಿಲ್ಲ.

ಸನ್ನಿ ಲಿಯೋನ್ ತಾವು ನೃತ್ಯಸುವ ಚಿತ್ರದ ಸನ್ನಿವೇಶವನ್ನು ತಿಳಿದುಕೊಂಡಿದ್ದಾರೆ. ಸನ್ನಿ ಲಿಯೋನ್ 2010ರ ಅಗ್ರ ಪೋರ್ನ್ ತಾರೆಗಳ ಪಟ್ಟಿಯಲ್ಲಿ ಪರಿಗಣಿಸಲ್ಪಟ್ಟಿದ್ದಾರೆ ಹಾಗೂ 2011ರಲ್ಲಿ ಸಣ್ಣ ಪರದೆಯ ಬಿಗ್ ಬಾಸ್‌ನಲ್ಲೂ ಕಾಣಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ ಉದ್ಯಮದ ದೊಡ್ಡ ಬ್ಯಾನರ್ ರಾಮು ಇಂಟರ್ನ್ಯಾಷನಲ್ ಈ ಹಿಂದೆ ಅನೇಕ ಹಿಟ್ ಚಿತ್ರಗಳನ್ನು ನೀಡಿದೆ ಮತ್ತು ಇತ್ತೀಚಿನ ಮಾಲಾಶ್ರೀ ನಟಿಸಿದ ಚಿತ್ರ ‘ಶಕ್ತಿ’ 50 ದಿನಗಳಲ್ಲಿ ಸಾಕಷ್ಟು ಒಳ್ಳೆಯ ವ್ಯವಹಾರ ಮಾಡಿದೆ.

ಈಗ ನಮ್ಮ ಮುಂದಿರುವುದು ಯಾವಾಗ ದೊಡ್ಡ ಪರದೆಯ ಮೇಲೆ ಸನ್ನಿ ಲಿಯೋನ್‌ನ್ನು ನೋಡುತ್ತೇವೆ ಎನ್ನುವುದು !!!

ನಿಮ್ಮ ಬುದ್ದಿ ಶಕ್ತಿಗೆ ಒಂದು ಕಸರತ್ತು. ಈ ಕೆಳಗಿನ ಚಿತ್ರವನ್ನು ಸರಿಯಾಗಿ ಜೋಡಿಸಿದರೆ, ನಿಮಗೆ ಒಂದು ಅಪರೂಪದ ಚಿತ್ರಕಾಣಲಿದೆ !!!

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech